ಕೆ.ಎ.ಎಸ್. ಪರೀಕ್ಷೆ : 2010
01. ರೀನಾ ಕೌಶಲ್ ಧರ್ಮಶಕ್ತು ಅವರು ಈ ಕೆಳಕಂಡ ಸ್ಥಳಕ್ಕೆ ಸ್ಕಿ-ಟ್ರಿಕ್ (Ski-trek) ಮಾಡಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ.
ಎ. ದಕ್ಷಿಣ ಧ್ರುವ
ಬಿ. ಎವರೆಸ್ಟ್
ಸಿ. ಕಿಲಿಮಂಜಾರೋ
ಡಿ. ವೆಸೋವಿಯಸ್
02. ಉತ್ತರಕನ್ನಡ ಜಿಲ್ಲೆಯ ಪರಿಸರ ಶಾಸ್ತ್ರೀಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ವಲಯದಿಂದ ಒಂದು ಶಾಖೋತ್ಪನ್ನ ವಿದ್ಯುತ್ ಪರಿಯೋಜನೆಯನ್ನು ತಮಿಳುನಾಡಿನ ಒಂದು ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡದ ಈ ಪ್ರದೇಶ ಯಾವುದು ?
ಎ. ಕಾರವಾರ
ಬಿ. ಅಂಕೋಲ
ಸಿ. ಶಿರಸಿ
ಡಿ. ಹೊನ್ನಾವರ
03. ವಿಶ್ವ ಆಹಾರ ಬಹುಮಾನವನ್ನು 2009ರ ಸಾಲಿಗಾಗಿ ಡಾ.ಗೆಬಿಸಾ ಎಜಿಟಾ ಅವರಿಗೆ ನೀಡಲಾಯಿತು. ಈ ಬಹುಮಾನವನ್ನು ಸ್ಥಾಪಿಸಿದವರು ಯಾರು ?
ಎ. ಡಾ. ಫಿಲಿಪ್ ನೆಲ್ಸನ್
ಬಿ. ಡಾ. ಎಂ.ಎಸ್. ಸ್ವಾಮಿನಾಥನ್
ಸಿ. ಡಾ. ಮಹಮ್ಮದ್ ಯೂನುಸ್
ಡಿ. ಡಾ. ನಾರ್ಮನ್ ಬೋರ್ಲಾಗ್
04. ಇತ್ತೀಚೆಗೆ ನಡೆದ 2009 ICC ಚಾಂಪಿಯನ್ಸ್ ಕ್ರಿಕೇಟ್ ಟ್ರೋಫಿಯ ಅಗ್ರಗಣ್ಯರಲ್ಲೊಬ್ಬರು ಫ್ಲಾಯ್ಡ್ ರೀಫರ್ ಅವರು ಯಾವ ತಂಡಕ್ಕಾಗಿ ಆಡಿದರು ?
ಎ. ವೆಸ್ಟ್ ಇಂಡೀಸ್
ಬಿ. ಇಂಗ್ಲೇಂಡ್
ಸಿ. ದಕ್ಷಿಣ ಆಫ್ರಿಕ
ಡಿ. ನ್ಯೂಜಿಲೆಂಡ್
05. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C-4) ನ್ನು 2009ರ ಸೆಪ್ಟೆಂಬರ್ ನಲ್ಲಿ ಆನೇಕ ಉಪಗ್ರಹಗಳೊಂದಿಗೆ ಉಡಾಯಿಸಲಾಯಿತು. ಇದುವರೆಗೆ ಈ ಹಿಂದಿನ ಎಷ್ಟು PSLV ಯೋಜನೆಗಳು ವಿಫಲವಾಗಿವೆ ?
ಎ. ಸೊನ್ನೆ
ಬಿ. ಒಂದು ಸಲ
ಸಿ. ಎರಡು ಸಲ
ಡಿ. ಮೂರು ಸಲ
06. ಇತ್ತೀಚೆಗೆ 2009ರಲ್ಲಿ ಒಬ್ಬ ಭಾರತೀಯರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು ಅವರ ಹೆಸರೇನು ?
ಎ. ಪಂಕಜ್ ಅದ್ವಾನಿ, ಬಿಲಿಯರ್ಡ್ಸ್ ಗಾಗಿ
ಬಿ. ದೀಪಿಕಾ ಪಲ್ಲಿಕಾಲ್, ಸ್ಕ್ವಾಶ್ ಗಾಗಿ
ಸಿ. ವಿಶ್ವನಾಥನ್ ಆನಂದ್, ಚೆಸ್ ಗಾಗಿ
ಡಿ. ಗೀತ್ ಸೇಥಿ, ಸ್ನೋಕರ್ ಗಾಗಿ
07. ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಡೂರ್ ಗೋಪಾಲ ಕೃಷ್ಣನ್ ಅವರು ಅತ್ಯುತ್ತಮ ನಿರ್ದೇಶಕ ಬಹುಮಾನ ಗಳಿಸಿದರು. ಇದಕ್ಕೆ ಮೊದಲು ಅವರು ಎಷ್ಟು ಸಲ ಬಹುಮಾನ ಪಡೆದಿದ್ದಾರೆ ?
ಎ. ಒಂದು ಸಲ
ಬಿ. ಎರಡು ಸಲ
ಸಿ. ಮೂರು ಸಲ
ಡಿ. ನಾಲ್ಕು ಸಲ
08. ಭಾರತದ ಆರನೇ ವೇತನ ಆಯೋಗದ ಶಿಫಾರಸ್ಸುಗಳಿಂದ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಉದ್ಯೋಗಿಗಳು ತುಂಬಾ ಹರ್ಷಿತರಾಗಿದ್ದಾರೆ. ಈ ಕೆಳಗಿನ ಯಾರು ಈ ಆಯೋಗದ ಸದಸ್ಯರಾಗಲಿಲ್ಲ ?
ಎ. ಡಾ. ರತ್ನವೇಲ್ ಪಾಂಡಿಯನ್
ಬಿ. ನ್ಯಾಯಮೂರ್ತಿ ಬಿ.ಎನ್. ಕೃಷ್ಣ
ಸಿ. ಪ್ರೊ. ರವೀಂದ್ರ ಧೋಲಾಕಿಯಾ
ಡಿ. ಶ್ರೀ ಜೆ.ಎಸ್. ಮಾಥುರ್
09. ವಿಶ್ಚ ಸಂಸ್ಥೆಯ ಯುನೆಸ್ಕೋ (UNESCO) ಅಂಗಸಂಸ್ಥೆಯು ಇತ್ತೀಚೆಗೆ ಶ್ರೀಮತಿ ಇರಿನಾ ಬೊಕೊವಾ ಅವರನ್ನು ತನ್ನ ಮಹಾ ನಿರ್ದೇಶಕರನ್ನಾಗಿ ಆಯ್ಕೆಮಾಡಿಕೊಂಡಿದೆ. ಈ ಹುದ್ದೆಯಲ್ಲಿ ಇವರಿಗಿಂತ ಮೊದಲಿದ್ದವರು ಯಾರು ?
ಎ. ಕೊಯಿಚಿರೊ ಮತ್ಸೂರ
ಬಿ. ಫರೂಕ್ ಹೋಸ್ನೆ
ಸಿ. ಫಡೆರಿಕೊ ಮೇಯರ್
ಡಿ. ಅಮೊಡು ಮಹ್ತರ್ ಎಂಬೊ
10. ಲಿಯಾಂಡರ್ ಪೇಸ್ ಅವರು ಇತ್ತೀಚೆಗೆ ಯು.ಎಸ್.ಓಪನ್ ಡಬಲ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಅವರ ಜೊತೆ ಆಟಗಾರರಾಗಿದ್ದವರು ಯಾರು ?
ಎ. ಲೈಸೆಲ್ ಹೂಬರ್
ಬಿ. ಕಾರಾ ಬ್ಲ್ಯಾಕ್
ಸಿ. ಲುಕಾಸ್ ಡ್ಲೌಹಿ
ಡಿ. ಮಾರ್ಕ್ ನೋವೆಲ್ಸ್
11. G-20 ಗುಂಪಿನ ದೇಶಗಳ ನಾಯಕರು ಅಂತರಾಷ್ಟ್ರೀಯ ಮಹತ್ವದ ವಿಷಯಗಳನ್ನು ಚರ್ಚಿಸುವುದಕ್ಕಾಗಿ 2009ರ ಸೆಪ್ಟೆಂಬರ್ ತಿಂಗಳಲ್ಲಿ ಸಭೆ ಸೇರಿದ್ದರು. ಈ ಗುಂಪಿನಲ್ಲಿ ಕೆಳಕಂಡ ಯಾವ ದೇಶವು ಪ್ರತಿನಿಧಿಸಿರಲಿಲ್ಲ ?
ಎ. ಸೌದಿ ಅರೇಬಿಯಾ
ಬಿ. ಸ್ವಿಟ್ಜರ್ ಲ್ಯಾಂಡ್
ಸಿ. ಇಂಡೋನೇಶಿಯಾ
ಡಿ. ಮೆಕ್ಸಿಕೋ
ಉತ್ತರ:
12. ಈ ಕೆಳಗಿನ ಯಾವ ಕೀರ್ತಿವೆತ್ತ ವ್ಯಕ್ತಿಯು ತಾನು 2010ರ ಕಾಮನ್ ವೆಲ್ತ್ ಕ್ರೀಡೆಗಳ ಪ್ರಾರಂಭೋತ್ಸವದಲ್ಲಿ ಪ್ರದರ್ಶನ ನೀಡುವುದಾಗಿ ಘೋಷಿಸಿದರು ?
ಎ. ಅಮೀರ್ ಖಾನ್
ಬಿ. ಶಾರುಕ್ ಖಾನ್
ಸಿ. ಸೈಫ್ ಅಲಿ ಖಾನ್
ಡಿ. ಇಮ್ರಾನ್ ಖಾನ್
ಉತ್ತರ:
13. ಹಸಿರು ಮನೆ ಅನಿಲ ಉತ್ಸರ್ಜನೆಯ ದೃಷ್ಠಿಯಿಂದ ಪಟ್ಟಿಯ ಅಗ್ರಸ್ಥಾನದಲ್ಲಿರುವ ನಗರ ಯಾವುದು ?
ಎ. ಜಮ್ ಶೆಡ್ ಪುರ್
ಬಿ. ಗುರ್ ಗಾಂವ್
ಸಿ. ದೆಹಲಿ
ಡಿ. ಪಾಟ್ನಾ
ಉತ್ತರ:
14. ಕಡಿಮೆ ವೆಚ್ಚದ ವಿಮಾನಯಾನ 'ಏರ್ ಏಷಿಯಾ' ದ ನೆಲೆ ಯಾವುದು ?
ಎ. ಸಿಂಗಪುರ
ಬಿ. ಮಲೇಶಿಯಾ
ಸಿ. ಥಾಯ್ ಲ್ಯಾಂಡ್
ಡಿ. ಬ್ಯಾಂಗ್ ಕಾಕ್
ಉತ್ತರ:
15. ಯೂರೋಪಿನ ಮಾಲಿಕ್ಯುಲಾರ್ ಬಯಾಲಜಿ ಸಂಸ್ಥೆಯಿಂದ ಯುವ ಸಂಶೋಧಕರೆಂದು ಆಯ್ಕೆಯಾಗಿರುವ ಭಾರತೀಯ ವ್ಯಕ್ತಿಯ ಹೆಸರು
ಎ. ಜೆ. ಸ್ಮಿತ್
ಬಿ. ಜೋಸೆಫ್ ಡಿಗೋರಿ
ಸಿ. ಎಂ. ಮದನ್ ಬಾಬು
ಡಿ. ತಪಸಿ ಮುಖರ್ಜಿ
ಉತ್ತರ:
16. ಧಾರ್ಮಿಕ ಮೂರ್ತಿಗಳಿಗೆ (Icons) ಸಂಬಂಧಿಸಿದಂತೆ ಆಕ್ಷೇಪಾರ್ಹ ಉಲ್ಲೇಖಗಳಿರುವ ಇತಿಹಾಸದ ಪಠ್ಯ ಪುಸ್ತಕವನ್ನು ರಚಿಸಿದ್ದಕ್ಕಾಗಿ FIR ವಿಧಿಸಲ್ಪಟ್ಟವರು ಯಾರು ?
ಎ. ರೊಮಿಲಾ ಥಾಫರ್
ಬಿ. ಕೆ.ಎಂ.ಶ್ರೀಮಾಲಿ
ಸಿ. ಸತೀಶ್ ಚಂದ್ರ
ಡಿ. ಇರ್ಫಾನ್ ಹಬೀಬ್
ಉತ್ತರ:
17. ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಹಿಮಾಲಯದಲ್ಲಿರುವ ಹಿಮನದಿಗಳಿಗೆ ಅಪಾಯ ಉಂಟಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಮೌಂಟ್ ಎವರೆಸ್ಟ್ ಮೇಲೆ ತನ್ನ ಸಂಪುಟ ಸಭೆಯನ್ನು ನಡೆಸಿದ ರಾಷ್ಟ್ರ ಯಾವುದು ?
ಎ. ಭೂತಾನ್
ಬಿ. ಬಾಂಗ್ಲಾದೇಶ
ಸಿ. ಭಾರತ
ಡಿ. ನೇಪಾಳ್
ಉತ್ತರ:
18. ಸರ್ಚ್ ಎಂಜಿನ್ ಗೂಗಲ್ ಅನ್ನು ರೂಪಿಸಿದವರು, ಆರಂಭಿಸಿದರುವ ಲ್ಯಾರಿ ಪೇಜ್ ಮತ್ತು ಸೆರ್ಜಿ ಬ್ರಿನ್. ಗೂಗಲ್ ಅನ್ನು ಆರಂಭಿಸಿದಾಗ ಅವರು ಏನಾಗಿದ್ದರು ?
ಎ. ಸಾಫ್ಟ್ ವೇರ್ ಫ್ರೊಫೆಶನಲ್ ಗಳು
ಬಿ. Ph.D ವಿದ್ಯಾರ್ಥಿಗಳು
ಸಿ. ಕಂಪ್ಯೂಟರ್ ಪ್ರೊಫೆಸರ್ ಗಳು
ಡಿ. ಹಣಕಾಸು ಮಾರುಕಟ್ಟೆಯ ಪ್ರೊಫೆಶನಲ್ ಗಳು
ಉತ್ತರ:
19. ಅಂತರಿಕ್ಷದ ಆಳದಲ್ಲಿ ಆಕಾಶವು ಹೇಗೆ ಕಾಣಿಸುತ್ತದೆ ?
ಎ. ಕತ್ತಲು
ಬಿ. ನೀಲಿ
ಸಿ. ತಿಳಿ ಹಳದಿ
ಡಿ. ಕೆಂಪು
ಉತ್ತರ:
20. ಈ ಕೆಳಗಿನ ನಾಲ್ವರು ವಿಜ್ಞಾನಿಗಳಲ್ಲಿ ಪ್ರತಿಯೊಬ್ಬರೂ ಎರಡೆರಡು ಸಲ ನೊಬೆಲ್ ಬಹುಮಾನಗಳಿಸಿದ್ದಾರೆ. ಇವರಲ್ಲಿ ಯಾರಿಗೆ ವಿಜ್ಞಾನೇತರ ತರಗತಿಗಾಗಿ ನೊಬಲ್ ಬಹುಮಾನ ನೀಡಲಾಗಿದೆ ?
ಎ. ಜಾನ್ ಬರ್ದಿನ್
ಬಿ. ಮೇರಿ ಕ್ಯೂರಿ
ಸಿ. ಲೈನಸ್ ಪಾಲಿಂಗ್
ಡಿ. ಪ್ರೆಡ್ ರಿಕ್ ಸ್ಯಾಂಗರ್
ಉತ್ತರ:
21. ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಆಕ್ಸೈಡು ಯಾವುದು ?
ಎ. ಸಿಲಿಕಾನ್ ಆಕ್ಸೈಡ್ (ಸಿಲಿಕಾ)
ಬಿ. ಅಲ್ಯುಮಿನಿಯಮ್ ಆಕ್ಸೈಡ್ (ಅಲ್ಯೂಮಿನಾ)
ಸಿ. ಕ್ಯಾಲ್ಶಿಯಂ ಆಕ್ಸೈಡ್ (ಸುಣ್ಣ)
ಡಿ. ಮೆಜ್ನೀಶಿಯಂ ಆಕ್ಸೈಡ್ (ಮೆಜ್ನೀಶಿಯಾ)
ಉತ್ತರ:
22. "ಪ್ರತಿ ಘಟಕ ವೆಚ್ಚಕ್ಕೆ ಕಂಪ್ಯೂಟಿಂಗ್ ನಿರ್ವಹಣೆಯು ಪ್ರತಿ ಇಪ್ಪತ್ನಾಲ್ಕು ತಿಂಗಳುಗಳಿಗೆ ಇಮ್ಮಡಿಯಾಗುತ್ತದೆ" - ಈ ಹೇಳಿಕೆಯು ಯಾವ ನಿಯಮಕ್ಕೆ ಸಂಬಂಧಿಸಿದೆ ?
ಎ. ಮೂಯರ್ ನಿಯಮ
ಬಿ. ಮೂರ್ ನಿಯಮ
ಸಿ. ಮರ್ಫಿಯಾ ನಿಯಮ
ಡಿ. ಶಾನನ್ ನಿಯಮ
ಉತ್ತರ:
23. ಸಿಲಿಂಡ್ರಿಕಲ್ ಮಸೂರಗಳನ್ನು ಕೆಳಕಂಡ ದೋಷದ ಸರಿಪಡಿಕೆಗಾಗಿ ಬಳಸಲಾಗುತ್ತದೆ
ಎ. ಸಮೀಪ ದೃಷ್ಟಿ
ಬಿ. ಅತಿ ದೂರ ದೃಷ್ಟಿಯ ರೋಗ
ಸಿ. ಅಸಮ ದೃಷ್ಟಿ
ಡಿ. ಅತಿ ಸುಪ್ತಿ (ಕೋಮ)
ಉತ್ತರ:
24. ಈ ಕೆಳಗೆ ಕೊಟ್ಟಿರುವ ಪಟ್ಟಿಯಿಂದ ಅಶೋಕನ ರಾಜಶಾಸನಗಳನ್ನು ಯಾವ ಲಿಪಿಯಲ್ಲಿ ಬರೆಯಲಾಗಿದೆ ಎಂಬುದನ್ನು ಗುರುತಿಸಿ;
I. ಬ್ರಾಹ್ಮಿ
II. ಖರೋಷ್ಠಿ
III. ಗ್ರೀಕ್
IV. ಅರಾಮೇಯಿಕ್
ಎ. I ಮತ್ತು II
ಬಿ. I, II ಮತ್ತು III
ಸಿ. I, II ಮತ್ತು IV
ಡಿ. I, II, III ಮತ್ತು IV
ಉತ್ತರ:
25. 'ಯವನ ಪ್ರಿಯ" (ಯವನರಿಗೆ ಪ್ರಿಯವಾದುದು) ಎಂಬ ಪದವನ್ನು ಸಂಸ್ಕೃತದಲ್ಲಿ ಈ ಕೆಳಕಂಡ ವಿಷಯವನ್ನು ವರ್ಣಿಸುವುದಕ್ಕಾಗಿ ಬಳಸಲಾಗಿದೆ.
ಎ. ದ್ರಾಕ್ಷಾರಸ
ಬಿ. ಮೆಣಸು
ಸಿ. ಶ್ರೀಗಂಧ
ಡಿ. ಚಿನ್ನ
ಉತ್ತರ:
26. ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಈ ಕೆಳಕಂಡ ರಾಜವಂಶಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ;
I. ಸಾತವಾಹನರು
II. ಬಾದಾಮಿಯ ಚಾಲುಕ್ಯರು
III. ರಾಷ್ಟ್ರಕೂಟರು
IV. ಕಲ್ಯಾಣದ ಚಾಲುಕ್ಯರು
ಇವುಗಳ ಸರಿಯಾದ ಕ್ರಮ
ಎ. I, II, III, IV
ಬಿ. I, IV, III, II
ಸಿ. II, I III, IV
ಡಿ. I, III, II, IV
ಉತ್ತರ:
27. ತಮಿಳುನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ?
ಎ. ಶಿವನ ಸಮುದ್ರಂ
ಬಿ. ಗಂಗೈಕೊಂಡ ಚೋಳಪುರಂ
ಸಿ. ಕಣ್ಣೂರ್-ಕುಪ್ಪಂ
ಡಿ. ಶ್ರೀರಂಗಪಟ್ಟಣಂ
ಉತ್ತರ:
28. ಚೋಳರ ಶಾಸನಗಳನ್ನು ಈ ಕೆಳಗಿನ ವಿದ್ವಾಂಸರು ಕಂಪ್ಯೂಟರ್ ಸಹಾಯದ ವಿಶ್ಲೇಷಣೆಗೆ ಒಳಪಡಿಸಿದ್ದಾರೆ
ಎ. ಎಸ್. ಶೆಟ್ಟರ್
ಬಿ. ಐ. ಮಹಾದೇವನ್
ಸಿ. ವೈ. ಸುಬ್ಬರಾಯಲು
ಡಿ. ಬಿ.ಆರ್.ಗೋಪಾಲ್
ಉತ್ತರ:
29. ಋಗ್ವೇದದಲ್ಲಿರುವ ಪುರುಷ ಸೂಕ್ತ್ಯಂ ನಲ್ಲಿ ಏನಿದೆ ?
ಎ. ಪುರುಷ ಪ್ರಾಧಾನ್ಯತೆಯ ಒಂದು ಪ್ರಣಾಳಿಕೆ
ಬಿ. ಗಂಡು ಮಗುವಿನ ಜನನಕ್ಕಾಗಿ ಒಂದು ಪ್ರಾರ್ಥನೆ
ಸಿ. ಪುರುಷತ್ವ ಸಂಕ್ರಮಣಕ್ಕೆ ಸಂಬಂಧಿಸಿದ ಮತ ಸಂಸ್ಕಾರಗಳ ವಿವರಗಳು
ಡಿ. ನಾಲ್ಕು ವರ್ಣಗಳ ಮೊತ್ತಮೊದಲ ಉಲ್ಲೇಖ
ಉತ್ತರ:
30. ಪ್ರತಿಪಾದನೆ () ನ್ನು ಕಾರಣ () ವಿವರಿಸಬೇಕಾಗಿದೆ. ಇವುಗಳ ಬಗೆಗಿನ ಯಾವ ವಿವರಣೆ ಸರಿಯಾಗಿದೆ ಎಂಬುದನ್ನು ತಿಳಿಸಿರಿ
ಪ್ರತಿ ಪಾದನೆ (A): ವಿಜಯನಗರವನ್ನು ಆಳಿದ ಸಂಗಮ ರಾಜವಂಶವು ಒಂದು ಪ್ರಮುಖವಾದ ರಾಜವಂಶ
ಕಾರಣ(R): ಇವರು ಸಂಗಮ ಸಾಹಿತ್ಯದ ಪೋಷಕರಾಗಿದ್ದರು.
ಎ. A ಮತ್ತು R ಎರಡೂ ಸರಿ, ಮತ್ತು A ಯ ಕಾರಣದಿಂದ R ಇದೆ
ಬಿ. A ಮತ್ತು R ಎರಡೂ ಸರಿ, ಆದರೆ A ಯ ಕಾರಣದಿಂದ R ಇಲ್ಲ
ಸಿ. A ಸರಿ ಇದೆ, R ತಪ್ಪು
ಡಿ. A ಮತ್ತು R ಎರಡೂ ತಪ್ಪು
ಉತ್ತರ:
31. ಉತ್ತರ ಭಾರತದ ಮೇಲೆ ಘೋರಿ ಸಾಧಿಸಿದ ವಿಜಯವು ಅತ್ಯಂತ ಸುಲಭವಾದ ವಿಜಯವಾಗಿತ್ತು. ಎಂದು ಹೇಳಿದ ಇತಿಹಾಸ ತಜ್ಞರು
ಎ. ಸ್ಟಾನ್ಲಿ ಲೇನ್- ಪೂಲ್
ಬಿ. ವುಲ್ ಸೆಲ್ ಹೇಗ್
ಸಿ. ಮುಹಮ್ಮದ್ ಹಬೀಬ್
ಡಿ. ಇರ್ಫಾನ್ ಹಬೀಬ್
ಉತ್ತರ:
32. ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯ ಶಿಲಾಯುಗದ ವರ್ಣಚಿತ್ರಗಳಿಗೆ ಸಂಬಂಧಿಸಿದೆ ?
ಎ. ಮಸ್ಕಿ
ಬಿ. ಬ್ರಹ್ಮಗಿರಿ
ಸಿ. ಭೀಮ್ ಬೇಟ್ಕ
ಡಿ. ಟಿ. ನರಸೀಪುರ
ಉತ್ತರ:
33. ಈ ಕೆಳಗೆ ಕೊಟ್ಟಿರುವ ಕ್ರಿ.ಪೂ. 6ನೇ ಶತಮಾನದ ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?
ಎ. ಕಾಶಿ - ವಾರಣಾಸಿ
ಬಿ. ಮಗಧ - ರಾಜಗೃಹ
ಸಿ. ಅಂಗ - ಚಂಪ
ಡಿ. ಅವಂತಿ - ವೈಶಾಲಿ
ಉತ್ತರ:
34. ಪ್ರಾಚೀನ ಭಾರತದ ಯಾವ ಅರಸನು ಗ್ರೀಕರಿಗೆ ಅಮಿತ್ರೋ ಖೇಟ್ಸ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ ?
ಎ. ಅಶೋಕ
ಬಿ. ಬಿಂದುಸಾರ
ಸಿ. ಅಜಾತಶತ್ರು
ಡಿ. ಚಂದ್ರಗುಪ್ತ ಮೌರ್ಯ
ಉತ್ತರ:
35. ಸುಲ್ತಾನರ ಅಧಿಪತ್ಯದ ಕಾಲದಲ್ಲಿದ್ದ ಗುಲಾಮಿಪದ್ದತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ವಿವರಣೆ ತಪ್ಪಾಗಿದೆ ಎಂಬುದನ್ನು ಆಯ್ಕೆ ಮಾಡಿ
ಎ. ಫಿರೋಜ್ ತುಘಲಕ್ ನಿಗೆ 1,18,000 ಗುಲಾಮರಿದ್ದರು ಎಂದು ಹೇಳಲಾಗುತ್ತಿದೆ.
ಬಿ. ಬರಾನಿಯು ದೆಹಲಿಯಲ್ಲಿದ್ದ ಬಹುದೊಡ್ಡ ಗುಲಾಮಿ ಮಾರುಕಟ್ಟೆಯ ಬಗ್ಗೆ ವರ್ಣಿಸುತ್ತಾನೆ.
ಸಿ. ದಿವಾನ್-ಇ-ಬಂದಗಾನ್ ಎನ್ನುವುದು ಗುಲಾಮಗಿರಿಗಾಗಿಯೇ ಇದ್ದ ಒಂದು ಪ್ರತ್ಯೇಕ ಇಲಾಖೆಯಾಗಿತ್ತು.
ಡಿ. ಅಲ್ಲಾವುದ್ದೀನ್ ಖಿಲ್ಜಿಯು ಗುಲಾಮಿಪದ್ದತಿಯನ್ನು ರದ್ದುಮಾಡಿದ.
ಉತ್ತರ:
36. ತಾಳಗುಂದ ಶಾಸನದಲ್ಲಿ ಯಾರನ್ನು 'ಕದಂಬ ವಂಶದ ಭೂಷಣ' ಎಂದು ಕರೆಯಲಾಗಿದೆ ?
ಎ. ಮೌರ್ಯ ಶರ್ಮ
ಬಿ. ಕಾಕುಸ್ಥವರ್ಮ
ಸಿ. ಶಾಂತಿ ವರ್ಮ
ಡಿ. ಮೃಗೇಶ ವರ್ಮ
ಉತ್ತರ:
37. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ವಿಗ್ರಹಕ್ಕೆ ಸಂಬಂಧಿಸಿದಂತೆ ಯಾವ ವಿವರಣೆ ತಪ್ಪಾಗಿದೆ. ಆಯ್ಕೆ ಮಾಡಿ
ಎ. ಈ ವಿಗ್ರಹವು ಕಮಲದ ಮೇಲೆ ನಿಂತಿದೆ.
ಬಿ. ಇದನ್ನು ಕ್ರಿ.ಶ.982-83ರಲ್ಲಿ ಸ್ಥಾಪಿಸಲಾಯಿತು.
ಸಿ. ಇದನ್ನು ಜಿನದೇವನು ಸ್ಥಾಪಿಸಿದನು
ಡಿ. ಈ ಏಕಶಿಲಾ ವಿಗ್ರಹದ ಅನಂತರದ ಮತ್ತು ಚಿಕ್ಕದಾದ ಅನುಕರಣಗಳು ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿವೆ
ಉತ್ತರ:
38. 'ಗದ್ಯಕರ್ಣಾಮೃತ' ಎನ್ನುವುದು ಈ ಕೆಳಕಂಡ ಅಧ್ಯಯನಕ್ಕೆ ಬಹುಮುಖ್ಯವಾದ ಆಕರ ಸಾಮಾಗ್ರಿಯಾಗಿದೆ.
ಎ. ತರುವಾಯದ ವರ್ಷಗಳಲ್ಲಿ ಹೋಯ್ಸಳ-ಪಾಂಡ್ಯ ಸಂಬಂಧಗಳು
ಬಿ. ಆರಂಭಕಾಲದಲ್ಲಿ ಚೋಳ-ಪಲ್ಲವ ಸಂಬಂಧಗಳು
ಸಿ. ಚಾಲುಕ್ಯ-ರಾಷ್ಟ್ರಕೂಟ ಸಂಬಂಧಗಳು
ಡಿ. ಮೇಲಿನ ಯಾವುದೂ ಅಲ್ಲ
ಉತ್ತರ:
39. ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು ?
ಎ. ತುಘಲಕ್
ಬಿ. ಗುಲಾಮಿ (ಸ್ಲೇವ್)
ಸಿ. ಖಿಲ್ಜಿ
ಡಿ. ಲೋದಿ
ಉತ್ತರ:
40. ಜಹಾಂಗೀರನ ಆಸ್ಥಾನಕ್ಕೆ ಭೇಟಿನೀಡಿದ ಬ್ರಿಟೀಷ್ ಮನೆತನದ ರಾಯಭಾರಿಯ ಹೆಸರು.
ಎ. ಥಾಮಸ್ ಮನ್ರೋ
ಬಿ. ಬೆಂಜಮಿನ್ ರೈಸ್
ಸಿ. ಥಾಮಸ್ ರೋ
ಡಿ. ಈ ಮೇಲಿನ ಯಾರೂ ಅಲ್ಲ
ಉತ್ತರ:
41. ಪಟ್ಟಿ-I ರಲ್ಲಿ ಕೃತಿಕಾರರ ಹೆಸರುಗಳಿವೆ ಮತ್ತು ಪಟ್ಟಿ-II ರಲ್ಲಿ ಕೃತಿಯ ಶೀರ್ಷಿಕೆಗಳಿವೆ ಇವುಗಳಲ್ಲಿ ಸರಿಯಾದ ಹೊಂದಾಣಿಕೆಗಳನ್ನು ಗುರುತಿಸಿ
ಪಟ್ಟಿ-I ಪಟ್ಟಿ II
A. ದಾದಾಬಾಯ್ ನವರೂಜಿ 1. ಹಿಂದ್ ಸ್ವರಾಜ್
B. ಬಾಲ್ ಗಂಗಾಧರ ತಿಲಕ್ 2. ಗಾಂಧಿ ಅಂಡ್ ಅನಾರ್ಕಿ
C. ಸರ್. ಸಿ. ಶಂಕರನ್ ನಾಯರ್ 3. ಗೀತಾ ರಹಸ್ಯ
D. ಎಂ.ಕೆ.ಗಾಂಧಿ 4. ಪವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ
ಸಂಕೇತಗಳು
A B C D
ಎ. 3 1 4 2
ಬಿ. 4 3 2 1
ಸಿ. 1 2 3 4
ಡಿ. 4 3 1 2
ಉತ್ತರ:
42. ಈ ಕೆಳಗಿನ ಯಾವ ಎ.ಐ.ಸಿ.ಸಿ. ಅಧಿವೇಶನದಲ್ಲಿ ಜವಹರಲಾಲ್ ನೆಹರೂ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿಗೆ ಮೋತಿಲಾಲ್ ನೆಹರೂ ಅವರ ತರುವಾಯದ ಅಧ್ಯಕ್ಷರಾಗಿ ಆಯ್ಕೆಯಾದರು ?
ಎ. ಲಾಹೋರ್
ಬಿ. ಅಮೃತಸರ್
ಸಿ. ಪಾಟಿಯಾಲಾ
ಡಿ. ತ್ರಿಪುರಾ
ಉತ್ತರ:
43. ಈ ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ
I. ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ
II. ಮಲಬಾರ್ ಪ್ರತಿಭಟನೆ
III. ಕೊಮಗಟಮಾರು ಘಟನೆ
IV. ಆರ್.ಐ.ಎನ್ ದಂಗೆ
ಸರಿಯಾದ ಅನುಕ್ರಮಣಿಕೆ
ಎ. III, I, II, IV
ಬಿ. IV, III, II, I
ಸಿ. I, III, II, IV
ಡಿ. IV, II, III, I
ಉತ್ತರ:
44. ಭಾರತದ ಏಕೀಕರಣದ ಕಾರ್ಯದಲ್ಲಿ ಸರ್ದಾರ್ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು
ಎ. ವಿ.ಪಿ.ಮೆನನ್
ಬಿ. ಕೆ.ಪಿ.ಎಸ್.ಮೆನನ್
ಸಿ. ಸರ್.ಸಿ.ಶಂಕರನ್ ನಾಯರ್
ಡಿ. ಎಂ.ಓ.ಮಥಾಯ್
ಉತ್ತರ:
45. ಜವಹರಲಾಲ್ ನೆಹರೂ ಅವರು ನ್ಯಾಯವಾದಿಯ ಕೋಟನ್ನು ಕೊನೆಯಬಾರಿಗೆ ಧರಿಸಿದ್ದು ಯಾವ ಸಂದರ್ಭದಲ್ಲಿ ?
ಎ. ಮಹಾತ್ಮ ಗಾಂಧಿಯವರ ವಿಚಾರಣೆ
ಬಿ. ಆರ್.ಐ.ಎನ್. ದಂಗೆಕೋರರ ವಿಚಾರಣೆ
ಸಿ. ಐ.ಎನ್.ಎ ಬಂದಿಗಳ ವಿಚಾರಣೆ
ಡಿ. ಭಗತ್ ಸಿಂಗ್ ಪ್ರಕರಣದ ಪ್ರೀವಿ ಕೌನ್ಸಿಲ್ ಹಿಯರಿಂಗ್
ಉತ್ತರ:
46. ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು 1878ರಲ್ಲಿ ಜಾರಿಗೊಳಿಸಿದವರು
ಎ. ಲಾರ್ಡ್ ರಿಪ್ಪನ್
ಬಿ. ಲಾರ್ಡ್ ಲಿಟ್ಟನ್
ಸಿ. ಲಾರ್ಡ್ ಕರ್ಜನ್
ಡಿ. ಮೇಲಿನ ಯಾರೂ ಅಲ್ಲ
ಉತ್ತರ:
47. ಈ ಕೆಳಗಿನ ಯಾವ ಸೌಮ್ಯವಾದಿಯನ್ನು high priest of drain theory ಎಂದು ಪರಿಗಣಿಸಲಾಗಿದೆ ?
ಎ. ದಿನ್ ಶಾ ವಚ್ಚಾ
ಬಿ. ಆರ್.ಪಿ. ದತ್
ಸಿ. ಗೋಪಾಲ ಕೃಷ್ಣ ಗೋಖಲೆ
ಡಿ. ದಾದಾಬಾಯಿ ನವರೂಜಿ
ಉತ್ತರ:
48. ಭಾರತದಲ್ಲಿ ಹೋಂರೂಲ್ ಚಳುವಳಿ ಇಳಿಮುಖವಾಗುವುದಕ್ಕೆ ಈ ಕೆಳಗಿನ ಯಾವುದು ಕಾರಣವಾಯಿತು ?
ಎ. ಮಾಂಟೆಗ್ಯು ಚೆಲ್ಮ್ಸ್ ಫರ್ಡ್ ಸುಧಾರಣೆಗಳ ಯೋಜನೆಯನ್ನು ಪ್ರಕಟಿಸಿದ್ದು
ಬಿ. ಅನಿಬೆಸೆಂಟ್ ಅವರ ಬಂಧನ
ಸಿ. ಲೀಗ್ ನ ಸದಸ್ಯರಾಗಿ ಸೌಮ್ಯವಾದಿಗಳನ್ನು ನೊಂದಾಯಿಸಿಕೊಂಡಿದ್ದು
ಡಿ. ಲೋಕಮಾನ್ಯ ತಿಲಕರಿಂದ ಹೋಮ್ ರೂಲ್ ಚಳುವಳಿಯ ಸ್ಥಾಪನೆ
ಉತ್ತರ:
49. ಗಾಂಧಿಯವರಿಗೆ ಕೈಸರ್ -ಇ-ಹಿಂದ್ ಪ್ರಶಸ್ತಿಯ ಗೌರವವನ್ನು ಬ್ರಿಟೀಷರು ನೀಡಿದ್ದೇಕೆ ?
ಎ. ಅವರು ದಕ್ಷಿಣಾಫ್ರಿಕಾದಲ್ಲಿ ಸತ್ಯಾಗ್ರಹವನ್ನು ನಡೆಸಿದ್ದಕ್ಕೆ
ಬಿ. ಬ್ರಿಟೀಷರ ಕೋರಿಕೆಯ ಮೇರೆಗೆ ಅವರು ದಕ್ಷಿಣಾಫ್ರಿಕಾವನ್ನು ಬಿಟ್ಟು ಬಂದಿದ್ದಕ್ಕೆ
ಸಿ. ಮೊದಲ ಮಹಾಯುದ್ಧದಲ್ಲಿ ಗಾಂಧಿಯರು ಬ್ರಿಟೀಷರಿಗೆ ಸಹಾಯ ಮಾಡಿದ್ದಕ್ಕೆ
ಡಿ. ಅಸಹಕಾರ ಚಳುವಳಿಯನ್ನು ನಿಲ್ಲಿಸಿದ್ದಕ್ಕೆ
ಉತ್ತರ:
50. ಪ್ರಸಿದ್ಧವಾದ ದಂಡಿಯಾತ್ರೆಗೆ ಸಬರಮತಿ ಆಶ್ರಮದಿಂದ ಎಷ್ಟು ಮಂದಿಯನ್ನು ಗಾಂಧಿಯವರು ಸೇರಿಸಿಕೊಂಡರು ?
ಎ. 72
ಬಿ. 200
ಸಿ. 78
ಡಿ. 220
ಉತ್ತರ:
51. ಡೋಲ್ ಡಮ್ಸ್ ಎಂದರೇನು ?
ಎ. ವಾಣಿಜ್ಯ ಮಾರುತಗಳ ವಲಯ
ಬಿ. ಅತ್ಯಧಿಕ ಆರ್ದ್ರತೆಯ ವಲಯ
ಸಿ. ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ವಲಯ
ಡಿ. ದ್ರುವೀಯ ಕಡಿಮೆ ಒತ್ತಡದ ಪ್ರದೇಶ
ಉತ್ತರ:
52. ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ ?
ಎ. ಜಮ್ಮೂ ಮತ್ತು ಕಾಶ್ಮೀರ
ಬಿ. ಹಿಮಾಚಲ ಪ್ರದೇಶ
ಸಿ. ಉತ್ತರಾಂಚಲ
ಡಿ. ಪಂಜಾಬ್
ಉತ್ತರ:
53. 'ಲಡಾಂಗ್' ಎನ್ನುವುದು
ಎ. ಇಂಡೋನೇಷಿಯಾದಲ್ಲಿ ಕಂಡು ಬರುವ ಒಂದು ಬುಡಕಟ್ಟು
ಬಿ. ಮಲೇಶಿಯಾದಲ್ಲಿ ಕಂಡುಬರುವ ಒಂದು ಬುಡಕಟ್ಟು
ಸಿ. ಮಲೇಶಿಯಾದ ಕದಲು ಬೇಸಾಯ
ಡಿ. ಇಂಡೋನೇಷಿಯಾದ ಕದಲು ಬೇಸಾಯ
ಉತ್ತರ:
54. 'ಮಾವುನಾ ಲೋಯಾ' ಎನ್ನುವುದು
ಎ. ಜೀವಂತ ಜ್ವಾಲಮುಖಿಗೆ ಉದಾಹರಣೆ
ಬಿ. ಸುಪ್ತ ಜ್ವಾಲಾಮುಖಿಗೆ ಉದಾಹರಣೆ
ಸಿ. ಅವಸಾನ ಜ್ವಾಲಾಮುಖಿಗೆ ಉದಾಹರಣೆ
ಡಿ. ಒಂದು ಜ್ವಾಲಾಮುಖಿಯ ಪ್ರದೇಶದಲ್ಲಿರುವ ಪೀರಭೂಮಿಗೆ ಉದಾಹರಣೆ
ಉತ್ತರ:
55. ಗಾಬ್ರೋ ಎನ್ನುವುದು
ಎ. ಅಗ್ನಿಶಿಲೆಗಳಿಗೆ ಉದಾಹರಣೆ
ಬಿ. ಜಲಜ ಶಿಲೆಗಳಿಗೆ ಉದಾಹರಣೆ
ಸಿ. ರೂಪಾಂತರಿ ಶಿಲೆಗಳಿಗೆ ಉದಾಹರಣೆ
ಡಿ. ಇದ್ಯಾವುದೂ ಅಲ್ಲ
ಉತ್ತರ:
56. ಈ ಕೆಳಗಿನ ಯಾವುದು ಶೀತ ಪ್ರವಾಹ
ಎ. ಗಲ್ಫ್ ಸ್ಟ್ರೀಮ್
ಬಿ. ಅಗಲ್ಹಾಸ್ ಪ್ರವಾಹಗಳು
ಸಿ. ಓಕೋಟ್ ಸ್ಕ್ ಪ್ರವಾಹಗಳು
ಡಿ. ಕುರುಶಿಯೋ ಪ್ರವಾಹಗಳು
ಉತ್ತರ:
57. ಅವಸಾನಗೊಂಡಿರುವ ಅಥವಾ ಸುಪ್ತಾವಸ್ಥೆಯಲ್ಲಿರುವ ಅತಿದೊಡ್ಡ ಜ್ವಾಲಾಮುಖೀಯ ಪರ್ವತ ಯಾವುದು ?
ಎ. ಕಿಲಿಮಂಜಾರೋ
ಬಿ. ಕೊಟೊಪಾಕ್ಸಿ
ಸಿ. ಫ್ಯುಜಿಯಾಮಾ
ಡಿ. ಅಕೊಂಕಾಗುವಾ
ಉತ್ತರ:
58. ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣದ ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
I. ಸ್ಟ್ರಾಟೋಸ್ಪಿಯರ್
II. ಟ್ರೋಟೋಸ್ಪಿಯರ್
III. ಅಯಾನೋಸ್ಪಿಯರ್
IV. ಮಿಸೋಸ್ಪಿಯರ್
ಎ. I, II, III, IV
ಬಿ. II, I, III, IV
ಸಿ. III, I IV, II
ಡಿ. II, I, IV, III
ಉತ್ತರ:
59. ಆಕಾಶದಲ್ಲಿ ಮೋಡವಿಲ್ಲದಾಗ ಇರುವುದಕ್ಕಿಂತ ಮೋಡವಿರುವಂತಹ ರಾತ್ರಿಗಳು ಹೆಚ್ಚು ತಾಪಯುಕ್ತವಾಗಿರುತ್ತವೆ ಏಕೆಂದರೆ...
ಎ. ಹಸಿರು ಮನೆ ಪರಿಣಾಮ
ಬಿ. ಭೂಪ್ರದೇಶದ ವಿಕಿರಣ
ಸಿ. ಇನ್ಸೋಲೇಶನ್ (ಆತಪನ)
ಡಿ. ಅಲ್ಟ್ರಾವೈಲೆಟ್ ಕಿರಣಗಳು
ಉತ್ತರ:
60. ಈ ಕೆಳಗಿನ ಯಾವ ದೇಶಗಳು ಕಡಲುಗಳ್ಳತನದ ಗಲಭೆಯಲ್ಲಿ ಸೇರಿಕೊಂಡಿವೆ ಎಂಬ ಆರೋಪಕ್ಕೊಳಗಾಗಿವೆ ?
ಎ. ನೈಜೀರಿಯಾ
ಬಿ. ಇಥಿಯೋಪಿಯಾ
ಸಿ. ಸೋಮಾಲಿಯಾ
ಡಿ. ಸೂಡಾನ್
ಉತ್ತರ:
61. ಈ ಕೆಳಗಿನ ಯಾವ ರಾಜ್ಯವು ಭೂವೇಷ್ಟಿತವಾಗಿದೆ ?
ಎ. ಕೇರಳ
ಬಿ. ತಮಿಳುನಾಡು
ಸಿ. ಕರ್ನಾಟಕ
ಡಿ. ರಾಜಸ್ಥಾನ
ಉತ್ತರ:
62. ಅಂತರರಾಜ್ಯ ನದಿನೀರಿನ ವಿವಾದದಲ್ಲಿ ಸೇರಿಕೊಂಡಿರುವ ನದೀತೀರದ ಯಜಮಾನ ರಾಜ್ಯಗಳು ಯಾವುವು ?
ಎ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ
ಬಿ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ
ಸಿ. ಆಂಧ್ರಪ್ರದೇಶ ಮತ್ತು ಕರ್ನಾಟಕ
ಡಿ. ಮಧ್ಯಪ್ರದೇಶ ಮತ್ತು ಜಾರ್ಖಂಡ್
ಉತ್ತರ:
63. ಈ ಕೆಳಗಿನ ವಿವರಣೆಗಳನ್ನು ಗಮನಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ
I. ಎಲ್ಲಾ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
II. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
III. ಯಾವ ಜಲಜ ಶಿಲೆಗಳೂ ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ
IV. ಎಲ್ಲಾ ಅಗ್ನಿಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
ಸಂಕೇತಗಳು
ಎ. I ಮಾತ್ರ ಸರಿ ಇದೆ
ಬಿ. II ಮಾತ್ರ ಸರಿ ಇದೆ
ಸಿ. III ಮತ್ತು IV ಸರಿ ಇವೆ
ಡಿ. III ಮಾತ್ರ ಸರಿ ಇದೆ
ಉತ್ತರ:
64. ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಕ್ಷೇಪಣಗೊಳ್ಳುತ್ತದೆ. ಕಾರಣವೇನು ?
ಎ. ಭೂಮಿಯ ಪರಿಭ್ರಮಣ
ಬಿ. ಭೂಮಿಯ ಅಕ್ಷದ ಬಾಗುವಿಕೆ
ಸಿ. ಸೂರ್ಯನ ಸುತ್ತ ಭೂಮಿಯ ಪರಿಕ್ರಮಣ
ಡಿ. ಚಂದ್ರನ ಗುರುತ್ವಾಕರ್ಷಣ ಬಲ
ಉತ್ತರ:
65. ಅಧಿಕ ಉಬ್ಬರ ವಿಳಿತವು
ಎ. ಪ್ರತಿ 24 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಬಿ. ಪ್ರತಿ 12 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಸಿ. ಪ್ರತಿ 6 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಡಿ. ಪ್ರತಿ 8 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
ಉತ್ತರ:
66. ಭಾರತದ ಸಂವಿಧಾನ ನಿರ್ಮಾಪಕರು ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನಗಳ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ವಿದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ ?
ಎ. ಅಮೇರಿಕಾದ ಸಂವಿಧಾನ
ಬಿ. ಬ್ರಿಟೀಷ್ ಸಂವಿಧಾನ
ಸಿ. ಐರಿಷ್ ಸಂವಿಧಾನ
ಡಿ. ಫ್ರೆಂಚ್ ಸಂವಿಧಾನ
ಉತ್ತರ:
67. ಕೊಡಗು ಭಾರತದ ಸಿ ಭಾಗದ ರಾಜ್ಯವಾಗಿದ್ದಾಗ, 1952-1956ರ ವರೆಗೆ ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು..
ಎ. ಕೆ. ಮಲ್ಲಪ್ಪ
ಬಿ. ಬಿ.ಎಸ್.ಕುಶಾಲಪ್ಪ
ಸಿ. ಸಿ.ಎಂ.ಪೂಣಚ್ಚ
ಡಿ. ದಯಾ ಸಿಂಗ್ ಬೇಡಿ
ಉತ್ತರ:
68. ರಾಷ್ಟ್ರಪತಿ ಆಡಳಿತವನ್ನು ಮೊತ್ತಮೊದಲಬಾರಿಗೆ ಮೈಸೂರು ರಾಜ್ಯದಲ್ಲಿ ವಿಧಿಸಿದ ವರ್ಷ ಯಾವುದು ?
ಎ. 1969
ಬಿ. 1970
ಸಿ. 1971
ಡಿ. 1973
ಉತ್ತರ:
69. ಈ ಕೆಳಗಿನ ಯಾವ ರಾಜ್ಯಗಳ ಗುಂಪಿನಲ್ಲಿ ಎರಡು ಸದನಗಳುಳ್ಳ ಅಂದರೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳುಳ್ಳ ದ್ವಿಸದನ ಶಾಸನ ಸಭೆ ಇದೆ ?
ಎ. ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ ಮತ್ತು ಮಹಾರಾಷ್ಟ್ರ
ಬಿ. ಮಹಾರಾಷ್ಟ್ರ, ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ್, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶ
ಸಿ. ಅರುಣಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಕೇರಳ
ಡಿ. ಅಸ್ಸಾಂ, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ
ಉತ್ತರ:
70. ರಾಜ್ಯಸಭೆಯ 2/3ನೇ ಬಹುಮತದ ಬೆಂಬಲ ಪಡೆದ ನಿರ್ಣಯವನ್ನು 312ನೇ ಅನುಚ್ಛೇದದ ಅನ್ವಯ ಜಾರಿಗೊಳಿಸುವ ವಿಷಯ...
ಎ. ಕೇಂದ್ರ ಸಚಿವಾಲಯ ಸೇವೆಯನ್ನು ಸೃಷ್ಟಸಬಹುದು
ಬಿ. ಕೇಂದ್ರೀಯ ಸೇವೆಗಳನ್ನು ಸೃಷ್ಟಿಸಬಹುದು
ಸಿ. ಅಖಿಲ ಭಾರತ ಸೇವೆಯನ್ನು ಸೃಷ್ಟಿಸಬಹುದು ಮತ್ತು ಈಗಿರುವ ಅಖಿಲ ಭಾರತ ಸೇವೆಯನ್ನು ರದ್ದುಪಡಿಸಲೂ ಬಹುದು
ಡಿ. ಒಂದು ರಾಜ್ಯದ ಕೋರಿಕೆಯ ಮೇರೆಗೆ ರಾಜ್ಯ ಸೇವೆಯನ್ನು ಸೃಷ್ಟಿಸಬಹುದು
ಉತ್ತರ:
71. ಸಮ್ಮಿಶ್ರ ಸರ್ಕಾರಗಳು ಮತ್ತು ಅವುಗಳು ರಚನೆಯಾದ ವರ್ಷಗಳನ್ನು ಸರಿಹೊಂದಿಸಿರಿ
A. ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ 1. 1999
B. ನ್ಯಾಶನಲ್ ಫ್ರಂಟ್ 2. 1996
C. ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ 3. 2004
D. ಯುನೈಟೆಡ್ ಫ್ರಂಟ್ 4. 1983
A B C D
ಎ. 1 3 4 2
ಬಿ. 3 4 1 2
ಸಿ. 4 3 1 2
ಡಿ. 4 3 2 1
ಉತ್ತರ:
72. ಸಂವಿಧಾನದ ಭಾಗ 3ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿಮಾಡುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಯಾವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು
ಎ. ಗೋಲಕ್ ನಾಥ್ vs ಪಂಜಾಬ್ ರಾಜ್ಯ 1967
ಬಿ. ಕೇಶವಾನಂದ ಭಾರತಿ vs ಕೇರಳ ರಾಜ್ಯ 1973
ಸಿ. ಇಂದಿರಾಗಾಂಧಿ vs ರಾಜ್ ನಾರಾಯಣ್ 1975
ಡಿ. ಮಿನರ್ವಾ ಮಿಲ್ಸ್ vs ಭಾರತ ಸರ್ಕಾರ 1980
ಉತ್ತರ:
73. ತೊಂಬತ್ತೆರಡನೇ ಸಂವಿಧಾನದ ತಿದ್ದುಪಡಿ 2003 ರ ಮೂಲಕ ಸಂವಿಧಾನದ ಎಂಟನೇ ಅನುಸೂಚಿಗೆ ಈ ಕೆಳಗಿನ ಯಾವ ಭಾಷೆಗಳನ್ನು ಸೇರ್ಪಡೆ ಮಾಡಲಾಯಿತು ?
ಎ. ಸಂಥಲಿ, ಬೋಡೋ, ಕೊಂಕಣಿ ಮತ್ತು ಉರ್ದು
ಬಿ. ಬೋಡೋ, ಮಣಿಪುರಿ, ಭೋಜ್ಪುರಿ ಮತ್ತು ಸಂಥಲಿ
ಸಿ. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂಥಲಿ
ಡಿ. ಕೊಂಕಣಿ, ತುಳು, ಕೊಡವ ಮತ್ತು ಭೋಜಪುರಿ
ಉತ್ತರ:
74. ಸಂಸತ್ತಿನ ಎರಡೂ ಸದನಗಳಿಂದ ಜಾರಿಯಾದ ಮಸೂದೆಯೊಂಕ್ಕೆ ಭಾರತದ ರಾಷ್ಟ್ರಪತಿಯವರು ಸಂವಿಧಾನದ ಯಾವ ಅನುಚ್ಛೇದದ ಅನ್ವಯ ತಮ್ಮ ಸಮ್ಮತಿಯನ್ನು ತಡೆಹಿಡಿಯಬಹುದು.
ಎ. ಅನುಚ್ಛೇದ 100
ಬಿ. ಅನುಚ್ಛೇದ 111
ಸಿ. ಅನುಚ್ಛೇದ 200
ಡಿ. ಅನುಚ್ಛೇದ 222
ಉತ್ತರ:
75. ಭಾರತದ ಉಪರಾಷ್ಟ್ರಪರಿಯವರನ್ನು ಈ ಕೆಳಕಂಡ ಮೂಲಕ ಅವರ ಸ್ಥಾನದಿಂದ ತೆಗೆದುಹಾಕಬಹುದು
ಎ. ಸಚಿವಮಂಡಳಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯವರು
ಬಿ. ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತು ಅದಕ್ಕೆ ಲೋಕಸಭೆಯು ಸಮ್ಮತಿ ನೀಡಿದ ಒಂದು ರಾಜ್ಯಸಭೆಯ ನಿರ್ಣಯದ ಮೂಲಕ
ಸಿ. ರಾಷ್ಟ್ರಪತಿಯವರ ಸಮ್ಮತಿಯೊಂದಿಗೆ ಲೋಕಸಭೆ
ಡಿ. ರಾಷ್ಟ್ರಪತಿಯವರ ಸಹಮತಿಯೊಂದಿಗೆ ರಾಜ್ಯಸಭೆ
ಉತ್ತರ:
76. ಕೇಂದ್ರ ಹಾಗೂ ರಾಜ್ಯಗಳ ಸಚಿವ ಮಂಡಳಿಯ ಸಂಖ್ಯೆಯು ಅನುಕ್ರಮವಾಗಿ ಲೋಕಸಭೆ ಹಾಗೂ ಸಂಬಂಧಪಟ್ಟ ವಿಧಾನಸಭೆಗಳ ಒಟ್ಟು ಸ್ಥಾನಗಳ ಸಂಖ್ಯೆಯ ಶೇಕಡಾ 15ರಷ್ಟಿರಬೇಕು ಎಂದು ಕೆಳಗಿನ ಯಾವ ಸಂವಿಧಾನಿಕ ತಿದ್ದುಪಡಿಯು ನಿಗದಿ ಮಾಡಿದೆ ?
ಎ. 89ನೇ ತಿದ್ದುಪಡಿ - 2003
ಬಿ. 90ನೇ ತಿದ್ದುಪಡಿ - 2003
ಸಿ. 99ನೇ ತಿದ್ದುಪಡಿ - 2003
ಡಿ. 93ನೇ ತಿದ್ದುಪಡಿ - 2005
ಉತ್ತರ:
77. ಸಂವಿಧಾನದ 120ನೇ ಅನುಚ್ಛೇದದ ಅನ್ವಯ ಸಂಸತ್ತಿನ ಅಧಿಕೃತ ಕಲಾಪವನ್ನು ಕೆಳಕಂಡ ಭಾಷೆಯಲ್ಲಿ ಮಾತ್ರ ನಡೆಸಬೇಕು
ಎ. ಹಿಂದಿ ಮಾತ್ರ
ಬಿ. ಇಂಗ್ಲೀಷ್ ಮಾತ್ರ
ಸಿ. ಹಿಂದಿ ಅಥವಾ ಇಂಗ್ಲೀಷ್
ಡಿ. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಪಟ್ಟಿಮಾಡಿರುವ ಯಾವುದೇ ಭಾಷೆ
ಉತ್ತರ:
78. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ಒದಗಿಸುವ ಮಹಿಳಾ ಮೀಸಲಾತಿ ವಿಧೇಯಕವನ್ನು ಯಾವ ಪ್ರಧಾನಮಂತ್ರಿಯವರ ಅಧಿಕಾರಾವಧಿಯಲ್ಲಿ ಮೊದಲಬಾರಿಗೆ ಕರಡು ರೂಪಕ್ಕೆ ತಂದು ಸಂಸತ್ತಿನಲ್ಲಿ ಮಂಡಿಸಲಾಯಿತು ?
ಎ. ರಾಜೀವ್ ಗಾಂಧಿ
ಬಿ. ಪಿ.ವಿ.ನರಸಿಂಹರಾವ್
ಸಿ. ಎಚ್.ಡಿ.ದೇವೇಗೌಡ
ಡಿ. ಅಟಲ್ ಬಿಹಾರಿ ವಾಜಪೇಯಿ
ಉತ್ತರ:
79. ಹೈದ್ರಾಬಾದ್ ಕರ್ನಾಟಕ ಪ್ರದೇಶದ ತ್ವರಿತ ಅಭಿವೃದ್ಧಿಗಾಗಿ ಭಾರತೀಯ ಸಂವಿಧಾನದ ಯಾವ ಅನುಚ್ಛೇದದ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಟಗಳ ಸಮನ್ವಯ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ ?
ಎ. ಅನುಚ್ಛೇದ 240
ಬಿ. ಅನುಚ್ಛೇದ 244
ಸಿ. ಅನುಚ್ಛೇದ 370
ಡಿ. ಅನುಚ್ಛೇದ 371
ಉತ್ತರ:
80. ಈ ಕೆಳಗಿನ ಯಾವುದು WTO ಒಪ್ಪಂದಗಳೊಂದಿಗೆ ಸಂಬಂಧಿಸಿಲ್ಲ ?
ಎ. GATT
ಬಿ. TRIPS
ಸಿ. GATS
ಡಿ. WIPO
ಉತ್ತರ:
81. ಕರ್ನಾಟಕದ ರಾಜ್ಯ ಆದಾಯವನ್ನು ಅಧಿಕೃತವಾಗಿ ಅಂದಾಜು ಮಾಡುವವರು
ಎ. ಕೇಂದ್ರ ಸಾಂಖ್ಯಿಕ ಸಂಸ್ಥೆ
ಬಿ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ಸಿ. ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ
ಡಿ. ರಾಷ್ಟ್ರೀಯ ಸಾಂಖ್ಯಿಕ ಆಯೋಗ
ಉತ್ತರ:
82. ಶಾಸನಬದ್ಧ ಲಿಕ್ವಿಡಿಟಿ ಅನುಪಾತವನ್ನು ನಿಗದಿಸುವವರು
ಎ. ಭಾರತ ಸರ್ಕಾರ
ಬಿ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ
ಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಡಿ. ಯೋಜನಾ ಆಯೋಗ
ಉತ್ತರ:
83. ಕೇಂದ್ರ ಸರ್ಕಾರದ ಆದಾಯದ ಕೊರತೆ ಎಂದರೆ
ಎ. ಒಟ್ಟು ಆದಾಯದ ಮೇಲೆ ಒಟ್ಟು ಖರ್ಚುಗಳ ಹೆಚ್ಚುವರಿ
ಬಿ. ಒಟ್ಟು ಖರ್ಚುಗಳ ಮೇಲೆ ಆದಾಯ ಸ್ವೀಕೃತಿಗಳ ಹೆಚ್ಚುವರಿ
ಸಿ. ಆದಾಯ ಸ್ವೀಕೃತಿಗಳ ಮೇಲೆ ಆದಾಯ ಕರ್ಚುಗಳ ಹೆಚ್ಚುವರಿ
ಡಿ. ನಿವ್ವಳ ಎರವಲುಗಳಿಗೆ ಸಮಾನ
ಉತ್ತರ:
84. ಮಾರುಕಟ್ಟೆ ಬೆಲೆಗಳಲ್ಲಿ ಒಟ್ಟು ದೇಶೀಯ ಉತ್ಪನ್ನವು ಈ ಕೆಳಗಿನದನ್ನು ಒಳಗೊಳ್ಳುವುದಿಲ್ಲ.
ಎ. ಪರೋಕ್ಷ ತೆರಿಗೆಗಳು
ಬಿ. ಸಬ್ಸಿಡಿಗಳು
ಸಿ. ಸವಕಳಿ
ಡಿ. ವಿದೇಶದಿಂದ ನಿವ್ವಳ ಫ್ಯಾಕ್ಟರ್ ಆದಾಯ
ಉತ್ತರ:
85. ಪಡೆದುಕೊಳ್ಳುವ ಬೆಲೆಗಳು ಎಂದರೆ ಭಾರತ ಸರ್ಕಾರವು ಈ ಕೆಳಕಂಡ ಉದ್ದೇಶಕ್ಕಾಗಿ ಯಾವ ಬೆಲೆಗಳಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುತ್ತದೋ ಅದು
ಎ. ಪಿ.ಡಿ.ಎಸ್. ಅನ್ನು ಕಾಯ್ದುಕೊಳ್ಳಲು
ಬಿ. ಕಾಪು ದಾಸ್ತಾನುಗಳನ್ನು ನಿರ್ಮಿಸಲು
ಸಿ. ಪಿ.ಡಿ.ಎಸ್. ಅನ್ನು ಕಾಯ್ದುಕೊಳ್ಳಲು ಮತ್ತು ಕಾಪುದಾಸ್ತಾನುಗಳನ್ನು ನಿರ್ಮಿಸಲು
ಡಿ. ರಫ್ತು ಪ್ರವರ್ಧನೆ
ಉತ್ತರ:
86. 2010-11 ರ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ ದಿನಾಂಕ
ಎ. 28 ಫೆಬ್ರವರಿ 2010
ಬಿ. 27 ಫೆಬ್ರವರಿ 2010
ಸಿ. 01 ಮಾರ್ಚ್ 2010
ಡಿ. 28 ಫೆಬ್ರವರಿ 2009
ಉತ್ತರ:
87. ಭಾರತದ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರತಿ ವರ್ಷಕ್ಕೆ ನಿರ್ಧಾರಿತವಾಗಿರುವ ಬೆಳವಣಿಗೆಯ ದರ
ಎ. ಶೇಕಡಾ 10
ಬಿ. ಶೇಕಡಾ 8
ಸಿ. ಶೇಕಡಾ 11
ಡಿ. ಶೇಕಡಾ 9
ಉತ್ತರ:
88. ಭಾರತದ ಪ್ರಧಾನಮಂತ್ರಿಯವರು ಈ ಕೆಳಕಂಡ ಯಾವ ಸ್ಥಾನಗಳನ್ನು ಹೊಂದಿರುತ್ತಾರೆ ?
ಎ. ಯೋಜನಾ ಆಯೋಗದ ಅಧ್ಯಕ್ಷರು
ಬಿ. ಭಾರತದ ಏರ್ ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರು
ಸಿ. ಹಣಕಾಸು ಆಯೋಗದ ಅಧ್ಯಕ್ಷರು
ಡಿ. ರಾಜ್ಯ ಯೋಜನಾ ಮಂಡಳಿಗಳ ಅಧ್ಯಕ್ಷರು
ಉತ್ತರ:
89. ವಿಶ್ವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವವರು
ಎ. ವಿಶ್ವ ಆರ್ಥಿಕ ಪೋರಂ
ಬಿ. ಅಂತರಾಷ್ಟ್ರೀಯ ಹಣಕಾಸು ನಿಧಿ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಸ್ಥೆ
ಉತ್ತರ:
90. ಭಾರತದ ಸಂದಾಯಗಳ ಶಿಲ್ಕನ್ನು ಸಿದ್ಧಪಡಿಸುವವರು
ಎ. ಕೇಂದ್ರ ವಾಣಿಜ್ಯ ಸಚಿವ ಖಾತೆ
ಬಿ. ಕೇಂದ್ರ ಹಣಕಾಸು ಸಚಿವ ಖಾತೆ
ಸಿ. ಯೋಜನಾ ಆಯೋಗ
ಡಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಉತ್ತರ:
91. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿಯೋಗ ಮಂಡಳಿ (NRHM) ಯನ್ನು ಆರಂಭಿಸಿದ ವರ್ಷ ?
ಎ. 2005
ಬಿ. 2000
ಸಿ. 2004
ಡಿ. 2006
ಉತ್ತರ:
92. ಈ ಕೆಳಗಿನ ಯಾವುದು ಭಾರತ ಸರ್ಕಾರದ ನೇರ ತೆರಿಗೆಯಾಗಿದೆ ?
ಎ. ಸೀಮಾ ಸುಂಕ
ಬಿ. ಅಬ್ಕಾರಿ
ಸಿ. ಸೇವಾ ತೆರಿಗೆ
ಡಿ. ಕಾರ್ಪೋರೇಷನ್ ತೆರಿಗೆ
ಉತ್ತರ:
93. ಬ್ರಾಡ್ ಮನಿ ಯಾವುದನ್ನು ಸೂಚಿಸುತ್ತದೆ ?
ಎ. M1
ಬಿ. M2
ಸಿ. M3
ಡಿ. M4
ಉತ್ತರ:
94. ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್ ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
ಎ. 2004-05
ಬಿ. 2005-06
ಸಿ. 2006-07
ಡಿ. 2003-04
ಉತ್ತರ:
95. 2001ರ ಜನಗಣತಿಯ ಪ್ರಕಾರ ಕರ್ನಾಟಕದ ಲಿಂಗ ಅನುಪಾತ ಕೆಳಕಂಡಂತಿತ್ತು
ಎ. 960
ಬಿ. 963
ಸಿ. 965
ಡಿ. 957
ಉತ್ತರ:
96. ಸಗಟು ಮಾರಾಟಬೆಲೆ ಸೂಚಿಯ ಆಧಾರ ವರ್ಷವನ್ನು ಕೆಳಕಂಡ ವರ್ಷಕ್ಕೆ ಬದಲಾಯಿಸಲಾಗಿದೆ
ಎ. 2003-04
ಬಿ. 2000-01
ಸಿ. 2004-05
ಡಿ. 2007-08
ಉತ್ತರ:
97. ಈ ಕೆಳಗಿನ ಯಾವ ವರ್ಷವು 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವರ್ಷವಾಗಿದೆ
ಎ. 2011-12
ಬಿ. 2012-13
ಸಿ. 2007-08
ಡಿ. 2010-11
ಉತ್ತರ:
98. ಭಾರತದ ಭದ್ರತೆಗಳ ವಿನಿಮಯ ಮಂಡಳಿಯನ್ನು (SEBI) ಸ್ಥಾಪಿಸಿದ ವರ್ಷ
ಎ. 1988
ಬಿ. 1987
ಸಿ. 1990
ಡಿ. 1995
ಉತ್ತರ:
99. ಸರ್ಕಾರದ ಅಥವಾ ಸರ್ಕಾರದ ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಹಣಕಾಸಿನ ಬೆಂಬಲ ಒದಗಿಸುವವರು...
ಎ. ಸಾಮಾಜಿಕ ನ್ಯಾಯದ ಸಚಿವ ಖಾತೆ
ಬಿ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಖಾತೆ
ಸಿ. ಹಣಕಾಸು ಸಚಿವ ಖಾತೆ
ಡಿ. ಶಿಕ್ಷಣ ಸಚಿವ ಖಾತೆ
ಉತ್ತರ:
100. ಹಳದಿ ಬೆಳಕನ್ನು ಉತ್ಸರ್ಜಿಸುವ ನಕ್ಷತ್ರವೊಂದು ಭೂಮಿಯತ್ತ ವೇಗೋತ್ಕರ್ಷಿತವಾಗಿ ಬರುವಾಗ ಭೂಮಿಯ ಮೇಲಿನಿಂದ ನೋಡಿದರೆ ಅದರ ಬಣ್ಣವು
ಎ. ಕ್ರಮೇಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಬಿ. ಕ್ರಮೇಣವಾಗಿ ನೀಲಲೋಹಿತ (ನೇರಳೆ) ಬಣ್ಣಕ್ಕೆ ತಿರುಗುತ್ತದೆ
ಸಿ. ಯಾವುದೇ ಬದಲಾವಣೆಯಾಗುವುದಿಲ್ಲ.
ಡಿ. ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ
ಉತ್ತರ:
101. ಒಬ್ಬ ವ್ಯಕ್ತಿಯು ಪ್ರತಿ ನಿಮಿಷಕ್ಕೆ 15 ಸಲ ಉಸಿರು ತೆಗೆದುಕೊಳ್ಳುತ್ತಾನೆ. ಪ್ರತಿಯೊಂದು ಬಾರಿ ಅವನು ಉಸಿರು ತೆಗೆದುಕೊಂಡಾಗ ಅದರಲ್ಲಿರುವ ಗಾಳಿಯ ಗಾತ್ರ 450ml ಮತ್ತು ಇದು 20% ಗಾತ್ರದಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ಹೊರಗೆ ಹಾಕಿದ ಗಾಳಿಯಲ್ಲಿ 16% ಗಾತ್ರದಷ್ಟು ಆಮ್ಲಜನಕ ಇರುತ್ತದೆ. ಆದ್ಧರಿಂದ ಒಬ್ಬ ವ್ಯಕ್ತಿಯು ಒಂದು ದಿನಕ್ಕೆ ಒಳಗೆ ತೆಗೆದುಕೊಂಡ ಆಮ್ಲಜನಕದ ಪ್ರಮಾಣ ಸುಮಾರು
ಎ. 389 ಲೀಟರ್ ಗಳು
ಬಿ. 476 ಲೀಟರ್ ಗಳು
ಸಿ. 500 ಲೀಟರ್ ಗಳು
ಡಿ. 300 ಲೀಟರ್ ಗಳು
ಉತ್ತರ:
102. 0'C ಯಲ್ಲಿರುವ ನೀರನ್ನು 20'C ಗೆ ಕಾಯಿಸಲಾಗಿದೆ ಅದರ ಗಾತ್ರವು
ಎ. ಸತತವಾಗಿ ಹೆಚ್ಚಾಗುತ್ತದೆ
ಬಿ. ಸತತವಾಗಿ ಕಡಿಮೆಯಾಗುತ್ತದೆ
ಸಿ. ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
ಡಿ. ಧಾರಕದ ಗಾತ್ರವನ್ನು ಅವಲಂಬಿಸಿ ಅದು ಹೆಚ್ಚಾಗಲೂಬಹುದು ಕಡಿಮೆಯಾಗಲೂ ಬಹುದು
ಉತ್ತರ:
103. ಒಂದು ಸಮತಲವಾದ ಕನ್ನಡಿಯು ನಿಮ್ಮನ್ನು 10cm/sec ರಲ್ಲಿ ಸಮೀಪಿಸುತ್ತಿದೆ. ಇದರಲ್ಲಿ ನಿಮ್ಮ ಬಿಂಬವನ್ನು ಕಾಣಬಹುದು. ಯಾವ ವೇಗದಲ್ಲಿ ನಿಮ್ಮ ಬಿಂಬವು ನಿಮ್ಮನ್ನು ಸಮೀಪಿಸುತ್ತದೆ.
ಎ. 10cm/sec
ಬಿ. 5cm/sec
ಸಿ. 20cm/sec
ಡಿ. 15cm/sec
ಉತ್ತರ:
104. ಒಬ್ಬ ವ್ಯಕ್ತಿಯು ಒಂದು ಘರ್ಷಣಾರಹಿತ ಸಮತಲ ಮೇಲ್ಮೈ ಮಧ್ಯದಲ್ಲಿ ಕುಳಿತಿದ್ದಾನೆ. ಇದರಿಂದ ಹೊರಬರಬೇಕಾದರೆ
ಎ. ಮೇಲ್ಮೈಯನ್ನು ಗಟ್ಟಿಯಾಗಿ ಒತ್ತಬೇಕು
ಬಿ. ಮೇಲ್ಮೈಮೇಲೆ ತೆವಳಬೇಕು
ಸಿ. ಹೊರ ನೆಗೆಯಬೇಕು
ಡಿ. ಆತ ಯಾವದಿಕ್ಕಿನೆಡೆ ಹೋಗಬೇಕಾಗಿದೆಯೋ ಅದರ ವಿರುದ್ಧ ದಿಕ್ಕಿಗೆ ತನ್ನ ಚೀಲವನ್ನು ಎಸೆಯಬೇಕು
ಉತ್ತರ:
105. ರೂ. 8800 ಗಳ ಸಾಲವನ್ನು ಮೊದಲ ತಿಂಗಳಿನಲ್ಲಿ ರೂ.250, ಎರಡನೇ ತಿಂಗಳಿನಲ್ಲಿ ರೂ. 270, ಮೂರನೇ ತಿಂಗಳಿನಲ್ಲಿ ರೂ.290 ರೀತಿಯಾಗಿ ತೀರಿಸುತ್ತಾ ಬಂದರೆ ಸಂಪೂರ್ಣವಾಗಿ ತೀರಿಸಲು ಎಷ್ಟು ಕಾಲ ಬೇಕಾಗುತ್ತದೆ ?
ಎ. 20 ತಿಂಗಳು
ಬಿ. 24 ತಿಂಗಳು
ಸಿ. 18 ತಿಂಗಳು
ಡಿ. 36 ತಿಂಗಳು
ಉತ್ತರ:
106. ಯಾವ ಇಬ್ಬರು ಹುಡುಗಿಯರೂ ಒಟ್ಟಿಗೆ ಇರದಂತೆ 5 ಹುಡುಗರು ಮತ್ತು 4 ಹುಡುಗಿಯರು ಒಂದು ಮೇಜಿನ ಸುತ್ತ ಎಷ್ಟು ವಿಧಗಳಲ್ಲಿ ಕುಳಿತುಕೊಳ್ಳಬಹುದು ?
ಎ. 2880
ಬಿ. 288
ಸಿ. 1440
ಡಿ. 144
ಉತ್ತರ:
107. ಇಬ್ಬರು ವ್ಯಕ್ತಿಗಳು A ಮತ್ತು B ಅವರ ಈಗಿರುವ ವಯಸ್ಸಿನ ಅನುಪಾತ 5:1 ಆಗಿದೆ. ನಾಲ್ಕು ವರ್ಷಗಳ ನಂತರ ಅವರ ವಯಸ್ಸಿನ ಅನುಪಾತವು 3:1 ಆಗುತ್ತದೆ. ಹಾಗಾದರೆ ಅವರಿಬ್ಬರ ವಯಸ್ಸಿನ ನಡುವೆ ಇರುವ ವ್ಯತ್ಯಾಸ
ಎ. 16 ವರ್ಷಗಳು
ಬಿ. 12 ವರ್ಷಗಳು
ಸಿ. 20 ವರ್ಷಗಳು
ಡಿ. 18 ವರ್ಷಗಳು
ಉತ್ತರ:
108. ಫ್ಯೂಸ್ ತಂತಿಯನ್ನು ಯಾವುದರಿಂದ ಮಾಡಿರುತ್ತಾರೆ ?
ಎ. ತಾಮ್ರ
ಬಿ. ಟಂಗ್ ಸ್ಟನ್
ಸಿ. ಸೀಸ ಮತ್ತು ತವರ ಮಿಶ್ರಲೋಹ
ಡಿ. ನೈಕ್ರೋಮ್
ಉತ್ತರ:
109. ಎನ್ಜೈಮ್ ಗಳು (ಕಿಣ್ವಗಳು) ಎಂದರೆ...
ಎ. ಆಹಾರದ ಶಕ್ತಿಘಟಕ
ಬಿ. ತೈಲ ಮತ್ತು ಕೊಬ್ಬುಗಳಲ್ಲಿ ಇರುತ್ತವೆ
ಸಿ. ಜೀವಶಾಸ್ತ್ರೀಯ ವೇಗವರ್ಧಕಗಳು
ಡಿ. ಜ್ವರವನ್ನು ನಿಯಂತ್ರಿಸುವ ಔಷಧಗಳು
ಉತ್ತರ:
110. ಸೋಪ್ ತಯಾರಿಕೆಯಲ್ಲಿ ಪ್ರಮುಖವಾಗಿ ಉಪಯೋಗಿಸಲ್ಪಡುವ ಕಚ್ಚಾ ವಸ್ತು
ಎ. ಸೋಪಿನ ಕಲ್ಲು
ಬಿ. ಎಣ್ಣೆ
ಸಿ. ಲಿಂಬೆರಸ
ಡಿ. ಸುಗಂಧದ್ರವ
ಉತ್ತರ:
111. ಕೈಗಾರಿಕಾ ಉದ್ದೇಶಗಳ ಆಲ್ಕೋಹಾಲ್ ಗೆ ಕೆಳಕಂಡದ್ದನ್ನು 5% ನಷ್ಟು ಸೇರಿಸುವ ಮೂಲಕ ಮಾನವ ಸೇವನೆಗೆ ಅನರ್ಹವಾಗುವಂತೆ ಮಾಡಲಾಗುತ್ತದೆ.
ಎ. ಹೈಡ್ರೋಕ್ಲೋರಿಕ್ ಆಮ್ಲ
ಬಿ. ಸೋಡಿಯಂ ಕ್ಲೋರೈಡ್
ಸಿ. ಮಿಥೈಲ್ ಆಲ್ಕೋಹಾಲ್
ಡಿ. ಇಥೆನಾಲ್
ಉತ್ತರ:
112. ಆಹಾರದ ಪಿಷ್ಟ ಪದಾರ್ಥದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು ?
ಎ. ಪ್ರೋಟೀನ್
ಬಿ. ಜೀವಸತ್ವ
ಸಿ. ಗ್ಲಿಸರೈಡ್ ಗಳು
ಡಿ. ಕಾರ್ಬೋಹೈಡ್ರೇಟ್ ಗಳು
ಉತ್ತರ:
113. ಚಾರಿತ್ರಿಕವಾಗಿ, ಅತ್ಯಂತ ಪರಿಶುದ್ಧ ಗುಣಹೊಂದಿರುವ ವಾಣಿಜ್ಯ ಕಬ್ಬಿಣದ ರೂಪ
ಎ. ನಾಡು ಕಬ್ಬಿಣ
ಬಿ. ಎರಕ ಹೋಯ್ದ ಕಬ್ಬಿಣ
ಸಿ. ಉಕ್ಕು
ಡಿ. ಬೀಡು ಕಬ್ಬಿಣ
ಉತ್ತರ:
114. ಜೀವಕೋಶದ ಶಕ್ತಿ ಗೃಹ ಯಾವುದು ?
ಎ. ಮೈಟೋಕಾಂಡ್ರಿಯಾ
ಬಿ. ಲೈಸೋಸೋಮ್
ಸಿ. ರೈಬೋಸೋಮ್
ಡಿ. ಗಾಲ್ಗಿ ಸಂಕೀರ್ಣ
ಉತ್ತರ:
115. HIVಯು ಈ ಕೆಳಕಂಡ ಮೂಲಕ ದೇಹದ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಎ. ಕೆಂಪುರಕ್ತಕಣಗಳನ್ನು ನಾಶಮಾಡುವ ಮೂಲಕ
ಬಿ. ಪ್ರತಿಕಾಯ (antibodies) ಗಳನ್ನು ನಾಶಮಾಡುವ ಮೂಲಕ
ಸಿ. T-ಲಿಂಪೋಸೈಟ್ ಗಳ ಮೇಲೆ ದಾಳಿ ಮಾಡುವ ಮೂಲಕ
ಡಿ. B-ಲಿಂಪೋಸೈಟ್ ಗಳ ಮೇಲೆ ದಾಳಿ ಮಾಡುವ ಮೂಲಕ
ಉತ್ತರ:
116. ಬಿಳಿಗಿರಿ ರಂಗಸ್ವಾಮಿ ರಾಷ್ಟ್ರೀಯ ಉದ್ಯಾನದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಭೇದ ಯಾವುದು ?
ಎ. ಹುಲಿ
ಬಿ. ವಿವಿಧ ಪ್ರಭೇದದ ಹಕ್ಕಿಗಳು
ಸಿ. ಆನೆ
ಡಿ. ಸಿಂಹ
ಉತ್ತರ:
117. ಸಸ್ತನಿಗಳಲ್ಲಿ ಬೆವರಿನ ಉತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ
ಎ. ಹೆಚ್ಚುವರಿ ನೀರನ್ನು ತೆಗೆದು ಹಾಕುವುದು
ಬಿ. ದೇಹದ ಉಷ್ಣಾಂಶದ ನಿಯಂತ್ರಣ
ಸಿ. ಹೆಚ್ಚುವರಿ ಉಪ್ಪನ್ನು ತೆಗೆದು ಹಾಕುವುದು
ಡಿ. ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು
ಉತ್ತರ:
118. Red data book ಯಾವುದಕ್ಕೆ ಸಂಬಂಧಿಸಿದೆ ?
ಎ. ಸ್ಥಳೀಯ ರೋಗದ ಸಸ್ಯಗಳು ಮತ್ತು ಪ್ರಾಣಿಗಳು
ಬಿ. ನಶಿಸಿ ಹೋದ ಸಸ್ಯಗಳು ಮತ್ತು ಪ್ರಾಣಿಗಳು
ಸಿ. ಪ್ರಕಾಶಾವಧಿ ಸ್ಪಂದನ ಸಾಮರ್ಥ್ಯ ತೋರಿಸುವ ಸಸ್ಯಗಳು ಮತ್ತು ಪ್ರಾಣಿಗಳು
ಡಿ. ಅಳಿವಿನ ಅಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು
ಉತ್ತರ:
119. ಒಂದು ವೃಕ್ಷದ ಹಳೆಯ ಕಾಂಡವನ್ನು ಅಡ್ಡಡ್ಡವಾಗಿ ಕತ್ತರಿಸಿದಾಗ ದ್ವಿತೀಯ ದಾರುವಿನ ಹೊರ ವಲಯವು ತಿಳಿಯಾದ ಬಣ್ಣದಲ್ಲಿರುವುದು ಕಂಡು ಬರುತ್ತದೆ. ದಾರುವಿನ ಈ ವಲಯವನ್ನು ಏನೆಂದು ಕರೆಯುತ್ತಾರೆ ?
ಎ. ಕಾಂಡದ ಮಧ್ಯಭಾಗ
ಬಿ. ಕಾಂಡದ ಹೊರಭಾಗ
ಸಿ. ವಸಂತ ಕಾಲ ಕಾಂಡ
ಡಿ. ಶರತ್ ಕಾಲ ಕಾಂಡ
ಉತ್ತರ:
120. ನ್ಯೂಕ್ಲಿಯರ್ ಶಕ್ತಿಯನ್ನು ಬಳಸಿಕೊಳ್ಳುವುದರಿಂದ ಎಷ್ಟೋ ವೇಳೆ
ಎ. ವಾಯುಮಾಲಿನ್ಯ ಉಂಟಾಗುತ್ತದೆ
ಬಿ. ಜಲಮಾಲಿನ್ಯ ಉಂಟಾಗುತ್ತದೆ
ಸಿ. ರೇಡಿಯೋ ಆಕ್ಟೀವ್ ರೇಡಿಯೇಷನ್ ಮಾಲಿನ್ಯ ಉಂಟಾಗುತ್ತದೆ
ಡಿ. UV ರೇಡಿಯೇಷನ್ ಮಾಲಿನ್ಯ ಉಂಟಾಗುತ್ತದೆ
ಉತ್ತರ:
121. ಜಪಾನಿನಲ್ಲಿ ಇಟಾಯಿ-ಇಟಾಯಿ ರೋಗವು ಈ ಕೆಳಕಂಡ ಅಂಶದಿಂದ ಕಲುಷಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ ಉಂಟಾಯಿತು.
ಎ. ಪಾದರಸ
ಬಿ. ಕ್ಯಾಡ್ಮಿಯಂ
ಸಿ. ಕಬ್ಬಿಣ
ಡಿ. ಕ್ಯಾಲ್ಸಿಯಂ
ಉತ್ತರ:
122. ಯಾವ ಹಂತದಲ್ಲಿ ನೈಟ್ರೇಟ್ ಗಳು ಹಾಗೂ ಫಾಸ್ಪೇಟ್ ಗಳನ್ನು ನಿವಾರಿಸಲಾಗುತ್ತದೆ ?
ಎ. ಪ್ರಾಥಮಿಕ ಸಂಸ್ಕರಣೆ
ಬಿ. ದ್ವಿತೀಯ ಸಂಸ್ಕರಣೆ
ಸಿ. ತೃತೀಯ ಸಂಸ್ಕರಣೆ
ಡಿ. ಪೂರ್ವಭಾವಿ ಸಂಸ್ಕರಣೆ
ಉತ್ತರ:
123. 26, 52, 91, 117, 141, 195, 234 ಈ ಸರಣಿಯಲ್ಲಿ ತಪ್ಪು ಸಂಖ್ಯೆ ಯಾವುದು ?
ಎ. 91
ಬಿ. 195
ಸಿ. 117
ಡಿ. 141
ಉತ್ತರ:
124. ಒಂದು ತ್ರಿಕೋನವು 14cms ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ. ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm
ಸಿ. 33cm
ಡಿ. 22/7cm
ಉತ್ತರ:
125. ಒಂದು ಹಣದ ಮೊತ್ತಕ್ಕೆ ಪ್ರತಿವರ್ಷಕ್ಕೆ 10% ಸರಳ ಬಡ್ಡಿಯಂತೆ 4 ವರ್ಷಗಳಿಗೆ ಅದು ರೂ. 4000 ಗಳಾಗಿದ್ದರೆ, ಇದೇ ಮೊತ್ತಕ್ಕೆ ಇಷ್ಟೇ ದರದ ಚಕ್ರಬಡ್ಡಿಯನ್ನು ಸೇರಿಸಿದ ನಂತರ ಇದರ ಮೊಬಲಗು ಎಷ್ಟು ?
ಎ. ರೂ. 14641
ಬಿ. ರೂ. 18641
ಸಿ. ರೂ. 17641
ಡಿ. ರೂ. 15000
ಉತ್ತರ:
126. ಈ ಕೆಳಗಿನ ನಾಲ್ಕು ಚೌಕಗಳ ಘಟಕಗಳಲ್ಲಿ ಒಂದು ನಿಯಮಾನುಸಾರವಾಗಿ ಅಂಕಿಗಳನ್ನು ತುಂಬಲಾಗಿದೆ (?) ಚಿಹ್ನೆ ಇರುವ ಚೌಕದಲ್ಲಿ ಯಾವ ಸಂಖ್ಯೆಯನ್ನು ತುಂಬಬೇಕು ?
1 6 4 8 7 11 10 15
4 5 6 7 8 10 10 ?
ಎ. 13
ಬಿ. 14
ಸಿ. 16
ಡಿ. 17
ಉತ್ತರ:
127.ಒಬ್ಬ ರೈತನ ಬಳಿ 1334 ಹಸುಗಳು ಮತ್ತು 754 ಮೇಕೆಗಳು ಇವೆ. ಹಸು ಮತ್ತು ಮೇಕೆಗಳನ್ನು ಪ್ರತ್ಯೇಕವಾಗಿಟ್ಟು ಪ್ರತಿಯೊಂದು ಗುಂಪಿನಲ್ಲೂ ಅಷ್ಟೇ ಸಂಖ್ಯೆಯ ಪ್ರಾಣಿಗಳಿರುವಂತೆ ಆತ ಅವುಗಳನ್ನು ಗುಂಪುಗಳಾಗಿ ಮಾಡುತ್ತಾನೆ. ಈ ಗುಂಪುಗಳು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿದ್ದರೆ ಒಟ್ಟು ಗುಂಪುಗಳ ಸಂಖ್ಯೆ ಎಷ್ಟು ?
ಎ. 26
ಬಿ. 29
ಸಿ. 36
ಡಿ. 58
ಉತ್ತರ:
128. ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯಾರ್ಥಿಯೂ ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಎರಡನ್ನೂ ತೆಗೆದುಕೊಂಡಿದ್ದರು ಭೌತಶಾಸ್ತ್ರವನ್ನು ತೆಗೆದುಕೊಂಡಿದ್ದವರು 65.28% ಇದ್ದರು, ಗಣಿತಶಾಸ್ತ್ರವನ್ನು ತೆಗೆದುಕೊಂಡವರು 59.2% ಇದ್ದರು ಒಟ್ಟು ಅಭ್ಯಾರ್ಥಿಗಳ ಸಂಖ್ಯೆ 2000. ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರ ಎರಡನ್ನೂ ತೆಗೆದುಕೊಂಡ ಅಭ್ಯಾರ್ಥಿಗಳ ಸಂಖ್ಯೆ ಎಷ್ಟು ?
ಎ. 750
ಬಿ. 500
ಸಿ. 250
ಡಿ. 125
ಉತ್ತರ:
129. ಒಂದು ಭೂಮಿಯ ತುಂಡು 150 ಮೀಟರ್ x 42 ಮೀಟರ್ ಇದೆ. ಇದರ ಅಗಲದ ಎರಡೂ ಕಡೆಗಳಲ್ಲಿ ಒಂದು ಅರೆವೃತ್ತಾಕಾರದ ಭೂ ಭಾಗವನ್ನು ಸೇರಿಸಲಾಗಿದೆ. ಪ್ರತಿಗಂಟೆಗೆ 4.32 ಕಿಮೀ ವೇಗದಲ್ಲಿ ಒಬ್ಬ ವ್ಯಕ್ತಿಯು ನಡೆದರೆ ಈ ಪ್ರದೇಶದ ಸುತ್ತಲೂ ನಡೆಯಲು ಆತನಿಗೆ ಎಷ್ಟು ಕಾಲ ಬೇಕಾಗುತ್ತದೆ ?
ಎ. 4 ನಿಮಿಷ
ಬಿ. 6 ನಿಮಿಷ
ಸಿ. 8 ನಿಮಿಷ
ಡಿ. 8 ನಿಮಿಷ 10 ಸೆಕೆಂಡ್
ಉತ್ತರ:
130. AB ಎನ್ನುವುದು ಒಂದು ಸಮತಲದಲ್ಲಿರುವ ರೇಖೆಯಾಗಿದೆ. P ಎಂಬ ಬಿಂದುವು ಈ ರೇಖೆಯ ಮೇಲೆ A ಮತ್ತು B ಗಳಿಂದ ಅದರ ಅಂತರವು ಯಾವಾಗಲೂ ಸಮವಾಗಿರುವಂತೆ ಚಲಿಸಿದರೆ, P ಬಿಂದುವಿನ ಪಥವು ಯಾವಾಗಲೂ
ಎ. AB ಗೆ ಸಮಾನಾಂತರವಾಗಿರುವ ರೇಖೆ
ಬಿ. AB ಯ ಲಂಭಾತ್ಮಕ ಸಮಭಾಜಕವಾಗಿರುವಂತಹ ರೇಖೆ
ಸಿ. A ಮತ್ತು B ಯ ಮೂಲಕ ಹಾದು ಹೋಗಿವಂಥ ವೃತ್ತ
ಡಿ. A ಮತ್ತು B ಮೂಲಕ ಹಾದು ಹೋಗುವಂತ ಎರಡು ವಕ್ರಗಳು
ಉತ್ತರ:
131. A ಎಂಬ ತೊಟ್ಟಿಯಲ್ಲಿ 1/2 ರಷ್ಟು ನೀರಿದೆ. A ತೋಟ್ಟಿಯ ಎರಡರಷ್ಟು ಸಾಮರ್ಥ್ಯವಿರುವ B ತೊಟ್ಟಿಯಲ್ಲಿ 1/5 ರಷ್ಟು ನೀರಿದೆ. A ತೊಟ್ಟಿಯಲ್ಲಿರುವ ನೀರನ್ನೆಲ್ಲಾ B ತೊಟ್ಟಿಗೆ ತುಂಬಿಸಿದರೆ, B ತೊಟ್ಟಿಯ ಸಾಮರ್ಥ್ಯದ ಎಷ್ಟು ಭಾಗದಲ್ಲಿ ನೀರು ತುಂಬಿರುತ್ತದೆ ?
ಎ. 9/20
ಬಿ. 3/10
ಸಿ. 7/10
ಡಿ. 7/20
ಉತ್ತರ:
132. ಒಂದು ಡಬ್ಬಿಯಲ್ಲಿ 1 ರೂ. ನಾಣ್ಯಗಳು, 50 ಪೈಸೆ ನಾಣ್ಯಗಳು ಹಾಗೂ 25 ಪೈಸೆ ನಾಣ್ಯಗಳು 7:6:4 ಪ್ರಮಾಣದಲ್ಲಿವೆ. ಒಟ್ಟು ಮೊಬಲಗು 341 ರೂ. ಆದರೆ ಈ ಡಬ್ಬಿಯಲ್ಲಿರುವ ಒಟ್ಟು ನಾಣ್ಯಗಳ ಸಂಖ್ಯೆ ಎಷ್ಟು ?
ಎ. 417
ಬಿ. 437
ಸಿ. 517
ಡಿ. 527
ಉತ್ತರ:
133. ಒಬ್ಬ ವ್ಯಕ್ತಿಯು 6 ಲಕ್ಷ ರೂ.ಗಳಿಗೆ ಜಾಗವನ್ನು ಖರೀದಿಸಿದ. ವೆಚ್ಚದ 30% ರಷ್ಟನ್ನು ಆತ ಜಾಗದ ಅಭಿವೃದ್ಧಿಗಾಗಿ ಖರ್ಚು ಮಾಡಿ ಅದನ್ನು 25 ಪ್ಲಾಟ್ ಗಳಾಗಿ ವಿಭಜಿಸಿದ. ಆತ ತಾನು ಮಾಡಿದ ಒಟ್ಟು ಹೂಡಿಕೆಗೆ 25% ಲಾಭ ಬರಬೇಕೆಂದು ಬಯಸಿದರೆ ಪ್ರತಿಯೊಂದು ಪ್ಲಾಟ್ ಗೂ ಆತ ಎಷ್ಟು ಬೆಲೆ ಇಡಬಹುದು ?
ಎ. 35,000 ರೂ.
ಬಿ. 39,000 ರೂ.
ಸಿ. 43,000 ರೂ.
ಡಿ. 45,000 ರೂ.
ಉತ್ತರ:
134. ಭಾರತ ಸರ್ಕಾರವು ಐದು ದೇಶಗಳ ಪ್ರಜೆಗಳಿಗಾಗಿ ಇತ್ತೀಚೆಗೆ 'visa on arrival' ಎಂಬುದನ್ನು ಅನುಗ್ರಹಿಸಿದೆ. ಈ ಪಟ್ಟಿಯಲ್ಲಿರುವ ಏಷ್ಯಾದ ಎರಡು ದೇಶಗಳು ಯಾವುವು ?
ಎ. ಶ್ರೀಲಂಕಾ ಮತ್ತು ಸಿಂಗಪುರ
ಬಿ. ಪಾಕಿಸ್ತಾನ ಮತ್ತು ಜಪಾನ್
ಸಿ. ಥಾಯ್ ಲ್ಯಾಂಡ್ ಮತ್ತು ಪಾಕಿಸ್ತಾನ
ಡಿ. ಜಪಾನ್ ಮತ್ತು ಸಿಂಗಪುರ
ಉತ್ತರ:
135. ದಂತಕತೆಯಾಗಿರುವ ಹಾಡುಗಾರ ಮತ್ತು ರಚನಕಾರ ಸಿ.ಅಶ್ವತ್ಥ್ ಅವರ ನಿಧನವು ಯಾವುದರೊಂದಿಗೆ ತಾಳೆಯಾಯಿತು ?
ಎ. ಅವರ ಜನ್ಮದಿನ
ಬಿ. ಬೇಂದ್ರೆಯವರ ಜನ್ಮದಿನ
ಸಿ. ವಿಷ್ಣುವರ್ಧನ್ ರವರ ಸಾವಿನ ದಿನ
ಡಿ. ಕ್ರಿಸ್ ಮಸ್ ದಿನ
ಉತ್ತರ:
136. ಜನವರಿ 2011ಕ್ಕೆ ಅನುಸೂಚಿತವಾಗಿರುವ ಗ್ರಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯ ಯಾವುದು ?
ಎ. ವಿಂಬಲ್ಡನ್
ಬಿ. ಯು.ಎಸ್.ಓಪನ್
ಸಿ. ಫ್ರೆಂಚ್ ಓಪನ್
ಡಿ. ಆಸ್ಟ್ರೇಲಿಯನ್ ಓಪನ್
ಉತ್ತರ:
137. ಈ ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದಿಕೆಯಾಗಿವೆ ?
ವಿಶೇಷ ಸಂದರ್ಭ ಸ್ಥಳ
I. ಆಟೋ ಎಕ್ಸ್ ಪೋ 2010 : ನವದೆಹಲಿ
II. 97ನೇ ಭಾರತೀಯ ವಿಜ್ಞಾನ ಸಮಾವೇಶ : ತಿರುವನಂತಪುರಂ
III.ಬಯೋ ಏಷಿಯಾ 2010 : ಬೆಂಗಳೂರು
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆಯ್ಕೆ ಮಾಡಿ
ಎ. I ಮತ್ತು II ಮಾತ್ರ
ಬಿ. II ಮತ್ತು III ಮಾತ್ರ
ಸಿ. I ಮತ್ತು III ಮಾತ್ರ
ಡಿ. I, II ಮತ್ತು III
ಉತ್ತರ:
138. ಕೋಪನ್ ಹೇಗನ್ನಿನ ಜಾಗತಿಕ ಶೃಂಗ ಸಭೆಯು ಈ ಕೆಳಕಂಡ ಭಾರೀ ಪ್ರಮಾಣದ ಬಿಕ್ಕಟ್ಟಿನ ಸುತ್ತ ಕೇಂದ್ರೀಕೃತವಾಗಿತ್ತು
ಎ. ಭಯೋತ್ಪಾದನೆ
ಬಿ. ಏಡ್ಸ್
ಸಿ. H1N1
ಡಿ. ಹವಾಮಾನ ಬದಲಾವಣೆ
ಉತ್ತರ:
139. ಕರ್ನಾಟಕದ ಈ ಕೆಳಗಿನ ಸ್ಥಳದಲ್ಲಿ ಒಂದು ಏರೋಸ್ಪೇಸ್ SEZ ನ್ನು ಪ್ರಾರಂಭಿಸಲಾಗಿದೆ..
ಎ. ಬೆಳಗಾಂ
ಬಿ. ಹುಬ್ಬಳ್ಳಿ
ಸಿ. ಬೀದರ್
ಡಿ. ಮಂಗಳೂರು
ಉತ್ತರ:
140. ಹಿಂದಿಯ "3 ಈಡಿಯಟ್ಸ್" ಎಂಬ ಸಿನೆಮಾದ ಮೂಲವನ್ನು ಕುರಿತಂತೆ ಹುಟ್ಟಿಕೊಂಡಿರುವ ವಿವಾದವು ಯಾವುದಕ್ಕೆ ಸಂಬಂಧಿಸಿದೆ ?
ಎ. ಅರವಿಂದ ಅಡಿಗ ಅವರ "The White Tiger"
ಬಿ. ಚೇತನ್ ಭಗತ್ ಅವರ "Five Point Someone"
ಸಿ. ಸೌಮ್ಯ ಭಟ್ಟಾಚಾರ್ಯ ಅವರ "If I Could Tell You"
ಡಿ. ಅರಿಂದಮ್ ಚೌದರಿ ಅವರ "The Great Indian Dream"
ಉತ್ತರ:
141. 'ಅಮನ್ ಕಿ ಆಶಾ' ಎಂಬುದು ಈ ಕೆಳಕಂಡ ಪತ್ರಿಕೆಯವರು ಆರಂಭಿಸಿದ ಭಾರತ-ಪಾಕ್ ಶಾಂತಿ ಪರಿಯೋಜನೆ
ಎ. ದಿ ಹಿಂದೂ
ಬಿ. ಡೆಕ್ಕನ್ ಕ್ರಾನಿಕಲ್
ಸಿ. ದಿ ಟೈಮ್ಸ್ ಆಫ್ ಇಂಡಿಯಾ
ಡಿ. ದಿ ಸ್ಟೇಟ್ಸ್ ಮನ್
ಉತ್ತರ:
142. ಕರ್ನಾಟಕದ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ
ಎ. ರಾಹುಲ್ ದ್ರಾವಿಡ್
ಬಿ. ಅನಿಲ್ ಕುಂಬ್ಳೆ
ಸಿ. ಜಿ.ಆರ್.ವಿಶ್ವನಾಥ್
ಡಿ. ಎಸ್.ಎಂ.ಹೆಚ್. ಕಿರ್ಮಾನಿ
ಉತ್ತರ:
143. ಅತ್ಯಧಿಕ ವೇಗದ ತಡೆರಹಿತ ಸಾಪ್ತಾಹಿಕ ರೈಲು 'ಡುರಂತೋ ಎಕ್ಸ್ ಪ್ರೆಸ್' ಯಶವಂತಪುರ ಹಾಗೂ______ ನಡುವೆ ಸಂಚರಿಸುತ್ತದೆ.
ಎ. ಹೌರಾ
ಬಿ. ಜೈಪುರ
ಸಿ. ಲಕ್ನೋ
ಡಿ. ಚೆನ್ನೈ
ಉತ್ತರ:
144. ಡಿಸೆಂಬರ್ 18, 2009 ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದ ಟಿ.ಎಸ್.ಸತ್ಯನ್ ಅವರು ಏನಾಗಿದ್ದರು ?
ಎ. ಗೀತರಚನೆಕಾರ
ಬಿ. ಸಂಗೀತ ನಿರ್ದೇಶಕ
ಸಿ. ಸಿನಿಮಾ ನಿರ್ದೇಶಕ
ಡಿ. ಛಾಯಾಚಿತ್ರಗ್ರಾಹಕ
ಉತ್ತರ:
145. 'Connecting People' ಎನ್ನುವುದು ಕೆಳಕಂಡಿದ್ದರ ಜಾಹಿರಾತಿನ ಘೋಷಣೆ
ಎ. ಏರ್ ಟೆಲ್
ಬಿ. ನೋಕಿಯಾ
ಸಿ. ರಿಲಯನ್ಸ್
ಡಿ. ಬಿ.ಎಸ್.ಎನ್.ಎಲ್.
ಉತ್ತರ:
146. 2010ರ ಜನವರಿ 4 ರಂದು ಉದ್ಘಾಟನೆಯಾದ ಜಗತ್ತಿನ ಅತಿ ಎತ್ತರದ ಕಟ್ಟಡ ಯಾವುದು ?
ಎ. ಬುರ್ಜ್ ಖಲೀಫಾ
ಬಿ. ಬುರ್ಜ್ ಅಲ್ ಅರಬ್
ಸಿ. ಬಿನ್ ದುಬಾಯ್
ಡಿ. ಅಲ್ ಖಲೀಫಾ
ಉತ್ತರ:
147. ವೆಂಕಟರಾಮನ್ ರಾಮಕೃಷ್ಣನ್ ಅವರು ತಮ್ಮ ನೋಬೆಲ್ ಬಹುಮಾನವನ್ನು ಇಸ್ರೇಲ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಇತರ ಇಬ್ಬರು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ?
ಎ. ವೈಧ್ಯಕೀಯ
ಬಿ. ರಸಾಯನ ಶಾಸ್ತ್ರ
ಸಿ. ಶಾಂತಿ
ಡಿ. ಭೌತಶಾಸ್ತ್ರ
ಉತ್ತರ:
148. ಪಟ್ಟಿ I (CEO'S) ಮತ್ತು ಪಟ್ಟಿ II (ಕಂಪನಿಗಳು) ಸರಿಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ-I ಪಟ್ಟಿ-II
A. ದೀಪಕ್ ಪರೇಖ್ 1. ಕಿಂಗ್ ಫಿಷರ್
B. ಕ್ರಿಸ್ ಗೋಪಾಲಕೃಷ್ಣ 2. ICICI ಬ್ಯಾಂಕ್
C. ವಿಜಯ್ ಮಲ್ಯ 3. HDFC
D. ಚಂದಾ ಕೊಚ್ಚಾರ್ 4. ಇನ್ ಫೋಸಿಸ್
ಸಂಕೇತಗಳು
A B C D
ಎ. 1 2 3 4
ಬಿ. 3 2 4 1
ಸಿ. 3 4 1 2
ಡಿ. 4 3 2 1
ಉತ್ತರ:
149. ಪ್ರೊ. ಉಪಿಂದರ್ ಸಿಂಗ್ ಅವರು ಈ ಕೆಳಕಂಡ ಕ್ಷೇತ್ರದ ಇನ್ ಫೋಸಿಸ್ ವಿಜ್ಞಾನ ಸಂಸ್ಥಾಪನಾ ಬಹುಮಾನ 2009 ಪಡೆದುಕೊಂಡರು
ಎ. ಇತಿಹಾಸ
ಬಿ. ಮಾಹಿತಿ ವಿಜ್ಞಾನ
ಸಿ. ಸಾಫ್ಟ್ ವೇರ್ ಅಭಿವೃದ್ಧಿ
ಡಿ. ನೆಟ್ ವರ್ಕ್ ಕಮ್ಯುನಿಕೇಶನ್
ಉತ್ತರ:
150. ಎ.ಆರ್.ರೆಹಮಾನ್ ಅವರಲ್ಲದೇ ಇನ್ನೂ ಇಬ್ಬರು ಭಾರತೀಯ ಸಂಗೀತಗಾರರು ಗ್ರಾಮಿ ಬಹುಮಾನ 2010ಕ್ಕೆ ನಾಮನಿರ್ದೇಶಿತರಾಗಿದ್ದರು. ಅವರನ್ನು ಗುರುತಿಸಿ.
ಎ. ಜಸ್ ರಾಜ್ ಮತ್ತು ಜಕೀರ್ ಹುಸೇನ್
ಬಿ. ಜಸ್ ರಾಜ್ ಮತ್ತು ಯು. ಶ್ರೀನಿವಾಸ್
ಸಿ. ಜಾಕೀರ್ ಹುಸೇನ್ ಮತ್ತು ಅಮ್ಜದ್ ಅಲಿ ಖಾನ್
ಡಿ. ಅಮ್ಜದ್ ಅಲಿ ಖಾನ್ ಮತ್ತು ಎಲ್. ಸುಬ್ರಹ್ಮಣ್ಯಂ
ಉತ್ತರ:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ