ಜೂನ್ 14, 2011

ಫಲಕೋತ್ಸವ ಸೀಸನ್ ಎರಡು - ೬

ಫಲಕೋತ್ಸವ ಸೀಸನ್ ಎರಡು - ೬


ಈ ಚಿತ್ರದಲ್ಲಿ ಅನುಸ್ವಾರ ಮತ್ತು ಅಕ್ಷರ "ಯ" ವನ್ನು ಗಮನಿಸಿ. ಒಂಥರಾ different ಆಗಿ ಬರ್ದಿದಾರೆ. ಈ ಬಾರಿ ಇದು ವಿಶೇಷ ಚಿತ್ರ.

ಫೋಟೋ ಕೃಪೆ: ಅರುಣ್ . ಎಲ್ (ಪರಿಸರಪ್ರೇಮಿ)

Tuesday, December 2, 2008

ಅಲ್ಲಾ...ತಿನ್ನಲು ಲಾನನ್ನು ಬಳಸಬೇಡಿ ಅಂದಿದ್ದಾರೆ...ಲಾನನ್ನು ತಿನ್ನಲು ನಾವೇನು ದನಗಳೇ ? :P

ಫೋಟೋ ಕೃಪೆ: ಅರುಣ್ . ಎಲ್ (ಪರಿಸರಪ್ರೇಮಿ)

Tuesday, November 25, 2008

ನಿಮಗೆ ಈ ಫಲಕ ಅರ್ಥ ಆದರೆ ನನಗೂ ಅರ್ಥ ಮಾಡಿಸಿ. ಫ್ರೀ ಸಿಮ್ಮು ಅಂತಾರೆ, dead or alive ಅಂತಾರೆ, ಹಳೆ ಮೊಬೈಲ್ ಕೊಟ್ಟು ಹೊಸದು ಪಡೆಯಿರಿ ಅಂತಾರೆ, ಇದರಲ್ಲಿ ಯಾವುದು ಸತ್ತು ಯಾವುದು ಬದುಕಿರಬೇಕು ? ಸಿಮ್ಮಾ ?? ಫೋನಾ ??

ಫೋಟೋ : ಲಕ್ಷ್ಮೀ.

Tuesday, November 18, 2008


ನೀವು ಇದನ್ನು ನೋಡಿ ಸೈಕಾಲಜಿಯ ಸರಿಯಾದ ಸ್ಪೆಲ್ಲಿಂಗ್ ಯಾವುದೆಂದು ತಿಳಿಯದೇ confuse ಮಾಡಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ :-) :-) :-)

ಫೋಟೋ : ಲಕ್ಷ್ಮೀ

Tuesday, November 11, 2008


ಕಿವಿಯನ್ನು ಬೋರ್ ವೆಲ್ಲ್ ಮಾಡಿರುವ ಪುಣ್ಯಾತ್ಮನೀತ ! "Ear piercing" ಬದಲು "Ear boring" ಅಂತ ಹಾಕಿದ್ದಾರೆ. ಕನ್ನಡದಲ್ಲಿಯಾದರೂ ಅರ್ಥ ನೆಟ್ಟಗೆ ಬರುವಂತೆ ಬರೆದಿದ್ದಾರಾ ? ಅದೂ ಇಲ್ಲ ! ಕಿವಿಗಳು ಚುಚ್ಚುವ ಸ್ಥಳ ಅಂತೆ! ವಿಭಕ್ತಿ ಪ್ರತ್ಯಯದ ಪಾಠ ಕಲ್ತಿಲ್ಲ ಪಾಪ....ಇದಕ್ಕೆ "ಕರ್ಣಕಾಂಡ" ಎಂಬ ಪದವೇ ಸರಿಯಾದ ವಿವರಣೆಯೇನೋ ಅನ್ನಿಸತ್ತೆ ನನಗೆ !

ಫೋಟೋ ಕೃಪೆ : ಪ್ರವೀಣ್ ಉಡುಪ.

Tuesday, November 4, 2008

ಫಲಕೋತ್ಸವ season 1 ಕಂಡ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತರಾಗಿ ಈಗ ಫಲಕೋತ್ಸವದ ಎರಡನೇ season ಅನ್ನು ಪ್ರಾರಂಭಿಸುತ್ತಿದ್ದೇವೆ.ಈ ಬಾರಿಯೂ ವಿಚಿತ್ರ, ವಿಶೇಷ, ನಾನಾರ್ಥಗಳುಳ್ಳ ಫಲಕಗಳ ಪ್ರದರ್ಶನ ನಡೆಯಲಿದೆ. ಕಳೆದ ಸರಣಿಯಂತೆಯೇ ಈ ಸೀಸನ್ ನಲ್ಲೂ ನಿಮ್ಮ ಪ್ರೋತ್ಸಾಹದಾಯಕ ಕಮೆಂಟುಗಳ ನಿರೀಕ್ಷೆಯಲ್ಲಿದ್ದೇವೆ.

ಈ ಬಾರಿಯ ಫೋಟೋ ತ್ರಿಸ್ಸೂರಿನ ದೇವಸ್ಥಾನದ ಭೋಜನಶಾಲೆಯದು. ಕನ್ನಡದ ಬರಹದಲ್ಲಿ ಆಗಿರುವ ಅವಾಂತರವನ್ನು ನೀವೇ ನೋಡಿ!

ಫೋಟೋ ಕೃಪೆ: ಪ್ರವೀಣ್ ಉಡುಪ.


Tuesday, October 28, 2008

ಈ ಫೋಟೋದೊಂದಿಗೆ ನಮ್ಮ ವಿಚಿತ್ರ ಕಸದ ಬುಟ್ಟಿಯ ಸರಣಿಯನ್ನು ಮುಗಿಸುತ್ತಿದ್ದೇವೆ.

ಫೋಟೋ ಕೃಪೆ : ಅಪರ್ಣ (ನನ್ನ ತಂಗಿ)

ತಳವೇ ಇಲ್ಲದ ಕಸದಬುಟ್ಟಿಯನ್ನು ನೋಡಿ ಆನಂದಿಸಿ.

ದೀಪಾವಳಿಯ ಶುಭಾಶಯಗಳು.







ಫೋಟೋಗಳು

ವಿಶೇಷ ವಿಚಿತ್ರ ವಾಹನಗಳು - ೧

ಫಲಕಗಳಾಯ್ತು, ಕಸದಬುಟ್ಟಿಗಳಾಯಿತು, ಈಗ ವಾಹನಗಳ ಸರದಿ. ಹೌದು. ನಮ್ಮ ಹೊಸ ಸೀರೀಸ್ ನಲ್ಲಿ ನಾವು ವಿಚಿತ್ರ ವಿಶೇಷ ವಾಹನಗಳನ್ನು ನಿಮ್ಮ ಮುಂದೆ ಇಡಲಿದ್ದೇವೆ.




ಈ ಫೋಟೋಗಳನ್ನು ಕಳಿಸಿಕೊಟ್ಟವರು ಪಾಲಚಂದ್ರ [http://palachandra.blogspot.com]. ಕೆಳಗಿನದ್ದು ಅವರು ನೀಡಿರುವ ವಿವರಣೆ. ಅವರು ನನಗೆ ಎಡಿಟ್ ಮಾಡಲು ಹೇಳಿದ್ದರಾದರೂ, ಇದೇ ಶೈಲಿ ಚೆನ್ನ ಅನ್ನಿಸಿ ಇದ್ದಿದ್ದನ್ನು ಇದ್ದಹಾಗೇ ಇಲ್ಲಿ ನೀಡಿದ್ದೇನೆ.

ಎನ್ಫೀಲ್ಡ್ ಬೈಕನ್ನ ಬದಲಾಯಿಸಿ ರಿಕ್ಷಾ ತರ ಓಡಿಸ್ಕೊಂಡು ಹೋಗೋದು. ಇದು ಗುಜಾರಾತಿನ ಹಳ್ಳಿಗಳಲ್ಲಿ ಫೇಮಸ್ಸು. ಡಿಸಲ್ ಹಾಕಿ ಓಡ್ಸೋ ಇದರಲ್ಲಿ ಸುಮಾರು ೮-೧೦ ಕಿ.ಮೀ. ವರೆಗೂ ಪ್ರಯಾಣಿಸಿದರೂ ೫ ರೂ. ಅಷ್ಟೆ. ಅದೂ ಓಪನ್ ಟಾಪು, ಸಕ್ಕತ್ ಮಜಾ ಬರುತ್ತೆ ಪ್ರಯಾಣ ಮಾಡೋಕೆ. ಬೆಂಗ್ಳೂರ್ ತರ ಪೇಟೆ ರಿಕ್ಷ ಆದ್ರೆ ಬರೀ ಕಪ್ಪು, ಹಳದಿ ಕಲರ್ ಆದ್ರೆ ಅಲ್ಲಿನ ರಿಕ್ಷಾಗಳು ಕಲರ್ ಕಲರ್, ಅದೂ ಒಳ್ಳೋಳ್ಳೆ ಚಿತ್ರ, ಜರಿ ಎಲ್ಲಾ ಸಿಂಗರ್ಸಿರ್ತಾರೆ. ಕಲೆಗೆ ಕಲೆ,Cost cutting ಗೆ cost cutting. ಟಾಪ್ ಇರೋದೂ ಇದೆ..








ಕಳೆದ ವಾರ ಕೇಳಿದ ಪ್ರಶ್ನೆಗೆ ಉತ್ತರಗಳು:

೧. Furniture
೨. ನಾಲ್ಕು ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ದವು. ಐದನೆಯದು name of agency. ಅಲ್ಲಿ, ಕಂಪನಿಯ ಹೆಸರು ಹಾಕುವ ಬದಲು ಕಂಪನಿಯ ಮಾಲೀಕನ ಹೆಸರು ಹಾಕಿದ್ದಾರೆ. ಒಟ್ಟು ಐದು ತಪ್ಪುಗಳು.

Friday, May 29, 2009

ಓದುಗ ಬಾಂಧವರಿಗೆ Team ಚಿತ್ರ ವಿಚಿತ್ರ ಮಾಡುವ ನಮಸ್ಕಾರಗಳು.

ಕಳೆದ ವರ್ಷ ಜುಲೈ ತಿಂಗಳಲ್ಲಿ ಆರಂಭವಾದ ಫಲಕೋತ್ಸವ ಈ ಮೇ ತಿಂಗಳಿಗೆ ಎರಡು ಸೀಸನ್ ಗಳನ್ನು ಕಂಡಿದೆ. ನೀವು ಕಳಿಸುತ್ತಿರುವ ಫಲಕಗಳು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ನಾವು ಮೊದಲನೆಯ ಸೀಸನ್ ನಲ್ಲಿ ಹತ್ತು ಫಲಕಗಳನ್ನು ಪ್ರದರ್ಶಿಸಿದ್ದೆವು. ಈ ಸೀಸನ್ ನಲ್ಲಿ ಇಪ್ಪತ್ತಕ್ಕೆ ನಿಲ್ಲಿಸುವ ಉದ್ದೇಶವಿತ್ತಾದರೂ, ಒಂದೊಂದಾಗಿ ನಮಗೆ ತಲುಪುತ್ತಿದ್ದ ಫಲಕಗಳು "ಇದನ್ನು ಹಾಕಿಯೇ ಬಿಡುವ" ಎನ್ನುವಂತೆ ಪ್ರೇರೇಪಿಸುತ್ತಿತ್ತು. ಹಾಗಾಗಿ ನಾವು ಒಂದೇ ಪೋಸ್ಟಿನಲ್ಲಿ ಎರಡು ಮೂರು ಚಿತ್ರಗಳನ್ನು ಹಾಕುವ ಪ್ರಯೋಗವನ್ನು ಮಾಡಿದೆವು. ನೀವು ಅದಕ್ಕೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದಿರಿ. ನಿಮಗೆಲ್ಲರಿಗೂ ನಮ್ಮ ಧನ್ಯವಾದಗಳು.

ಇಪ್ಪತ್ತಕ್ಕೆ ನಿಲ್ಲಬೇಕಿದ್ದ ನಮ್ಮ ದ್ವಿತೀಯ ಸೀಸನ್ ಈಗ ಮೂವತ್ತು ತಲುಪಿವೆ. ನಾವು ತೆಗೆದಿರುವ ಫೋಟೋಗಳು ಮತ್ತು ನೀವು ಕಳಿಸಿರುವ ಫೋಟೋಗಳು ಇನ್ನೂ ಬಾಕಿ ಇವೆ. ಆದರೆ ಬರೀ ಫಲಕಗಳನ್ನು ಹಾಕತ್ತಿದ್ದರೆ ಅದು ಯಾಂತ್ರಿಕವೆನಿಸಿಬಿಡುತ್ತದೆ. ಕಾಲಾಂತರದಲ್ಲಿ ಬೋರ್ ಆಗಲಿಕ್ಕೂ ಸಾಕು. ಹಾಗಾಗಿ ಫಲಕೋತ್ಸವಕ್ಕೆ ಒಂದೆರಡು ತಿಂಗಳು ಬಿಡುವು ಕೊಟ್ಟು, ಮತ್ತಷ್ಟು ಹಾಸ್ಯಮಯ, ವಿಚಿತ್ರ, ವಿಶೇಷ ಫಲಕಗಳೊಂದಿಗೆ ಮೂರನೆಯ ಸೀಸನ್ ನಲ್ಲಿ ನಿಮ್ಮನ್ನು ರಂಜಿಸಲಿದ್ದೇವೆ. ನೀವು ಫಲಕಗಳನ್ನು ಖಂಡಿತಾ ಕಳಿಸುತ್ತಿರಬಹುದು, ನಾವು ಅದನ್ನು ಫಲಕೋತ್ಸವದ ಮೂರನೆಯ ಸೀಸನ್ ನಲ್ಲಿ ಖಂಡಿತಾ ಪ್ರಕಟಿಸುವೆವು.

ಮುಂದಿನ ಮಂಗಳವಾರದಿಂದ ಹೊಸದೊಂದು ಸೀರೀಸ್ ಪ್ರಾರಂಭವಾಗಲಿದೆ. ನಿಮ್ಮ ಪ್ರೋತ್ಸಾಹದಾಯಕ ಕಮೆಂಟುಗಳ,ಮತ್ತಷ್ಟು ಚಿತ್ರಗಳ ನಿರೀಕ್ಷೆಯಲ್ಲಿದ್ದೇವೆ.

ಧನ್ಯವಾದಗಳೊಂದಿಗೆ,

Team ಚಿತ್ರ ವಿಚಿತ್ರ .

Tuesday, May 26, 2009

ಇಷ್ಟು ದಿನ ಫಲಕೋತ್ಸವದಲ್ಲಿ ನಾವೆಂದೂ ನಿಮ್ಮನ್ನು, " ಇಂಥದ್ದನ್ನು ಹುಡುಕಿ, ಇಂಥದ್ದನ್ನು ಮಾಡಿ" ಅಂತ ಕೇಳಿರಲಿಲ್ಲ. ಇವತ್ತು, ಓದುಗ ಬಾಂಧವರಿಗೆ ಒಂದು ಸಣ್ಣ...ಅಲ್ಲಲ್ಲ...ಎರಡು ಸಣ್ಣ ಪರೀಕ್ಷೆಗಳು.

ಪರೀಕ್ಷೆ 1. ಇದೊಂದು ಆಂಗ್ಲ ಫಲಕ. ಇದರಲ್ಲಿ ಅವರು ಮಾರಾಟಕ್ಕೆ ಇಟ್ಟಿರುವ ವಸ್ತು ಏನೆಂದು ನೀವು ಕಂಡುಹಿಡಿಯಬೇಕು. ನಿಮಗೆ ಸ್ಪೆಲ್ಲಿಂಗ್ ಅರ್ಥವಾದರೆ ಮತ್ತು ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನಾವು ನಿಮಗೆ "ಪ್ರಳಯಾಂತಕ ಬುದ್ಧಿವಂತ"ಎಂಬ ಬಿರುದನ್ನ ಪ್ರದಾನ ಮಾಡುತ್ತೇವೆ. [:)]




ಫೋಟೋ: ಲಕ್ಷ್ಮೀ.


ಪರೀಕ್ಷೆ 2. ಈ ಫಲಕದಲ್ಲಿ ಎಷ್ಟು ತಪ್ಪುಗಳಿವೆ ಅಂತ ನೀವು ಎಣಿಸಿ ನಮಗೆ ಹೇಳಬೇಕು. ಇದರಲ್ಲಿ ಉತ್ತೀರ್ಣರಾದವರಿಗೆ "ಸಂಖ್ಯಾಶಾಸ್ತ್ರ ಶಿರೋಮಣಿ" ಎಂಬ ಬಿರುದನ್ನು ನೀಡಲಾಗುತ್ತದೆ.






ಫೋಟೋ: ಜಯಶಂಕರ್ ಎ. ಎನ್. [http://anjshankar.blogspot.com]

ಎರಡು ಫೋಟೋ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ " ಪ್ರಕಾಂಡ ಪಂಡಿತ" ಅನ್ನೋ ಸರ್ಟಿಫಿಕೇಟನ್ನು ನೀಡಲಾಗುತ್ತೆ.

By the way, ಉತ್ತರ ಮುಂದಿನ ವಾರ.

Tuesday, May 19, 2009

ಈ ಬಾರಿ ಮೂರು ಫೋಟೋಗಳನ್ನ ಒಂದೇ sub-heading ಅಡಿಯಲ್ಲಿ ಹಾಕುವ ಪ್ರಯತ್ನ ಮಾಡಿದ್ದೇವೆ. Sub heading- Silly mistakes. ಇದು ಹಿಂದಿನ ಫಲಕಗಳ ತರಹ Technically incorrect ಅಲ್ಲ. ಸ್ಪೆಲ್ಲಿಂಗ್ ಮಿಸ್ಟೇಕುಗಳು, ಆದರೂ ಓದಲು ಮಜವಾಗಿರುವಂಥವು. ಈ ಫೋಟೋಗಳನ್ನು ಕಳಿಸಿಕೊಟ್ಟವರು ಜಯಶಂಕರ್ ಮತ್ತು ಪೃಥ್ವಿರಾಜ್ .





ಫೋಟೋ ಕೃಪೆ: ಜಯಶಂಕರ್ ಎ. ಎನ್. [ಅಂತರ್ವಾಣಿ- http://anjshankar.blogspot.com]

ಫೋಟೋ ಕೃಪೆ: ಪೃಥ್ವಿರಾಜ್ ಪಿ. [http://prith-view.blogspot.com]



ಫೋಟೋ ಕೃಪೆ: ಪೃಥ್ವಿರಾಜ್ ಪಿ. [http://prith-view.blogspot.com]

Tuesday, May 12, 2009

ತರ್ಜುಮೆಯಲ್ಲಿ ಮಾಲಪ್ರೋಪಿಸಮ್![Malapropism - an act or habit of misusing words ridiculously, esp. by the confusion of words that are similar in sound.]


ಫೋಟೋ: ಪರಿಸರಪ್ರೇಮಿ.


ಇನ್ನೊಂದು ಫಲಕ ತರ್ಜುಮೆ ಮಾಡುವಾಗ ಆಗುವ ತಪ್ಪಿನದ್ದು. ಕನ್ನಡ ಹಾಗೂ ಆಂಗ್ಲ ಭಾಷೆಯ ಪಠ್ಯಗಳನ್ನು ಗಮನಿಸಿ.





ಫೋಟೋ: ಲಕ್ಷ್ಮೀ

Tuesday, May 5, 2009

ಬಿ.ಜಿ.ಎಲ್. ಸ್ವಾಮಿಯವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿರಬೇಕು. (ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬುದು ಗಾದೆ.) ಬಿ.ಜಿ.ಎಲ್. ಸ್ವಾಮಿಯವರು ಇದ್ದ ಕಾಲವನ್ನು ಗಮನಿಸಿ. :-)


Tuesday, April 28, 2009

ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಗಳಲ್ಲಿ ಕಂಡ ಅಮೋಘ ಫಲಕಗಳಿವು. "ದೇವರೇ...ನಮಗೆ ಚೆನ್ನಾಗಿ ದುಡ್ಡು ಬರುವ ಹಾಗೆ ಮಾಡಪ್ಪಾ " ಅಂತ ನಾವು ಕೇಳಿಕೊಳ್ಳೋ ಅವಶ್ಯಕತೆಯೇ ಇಲ್ಲ..."Way to Rs. 100" ಅಂತ ಹಾಕ್ಬಿಟ್ಟಿದ್ದಾರೆ. ಹೋಗೋದು, ನೂರು ರುಪಾಯಿ ತಗೊಳ್ಳೋದು, ಬರೋದು ! ಹೆಂಗೆ ?





ನಾನು ಹೀಗೇ ಅಂದುಕೊಂಡು ಹೋದೆ...ನೋಡಿದ್ರೆ ಅವ್ರು ನನ್ನ ಕೈಯಿಂದಲೇ ನೂರು ರುಪಾಯಿ ತಗೊಂಡ್ರು !!



ಇನ್ನೊಂದು ಅದ್ವಿತೀಯ ಫಲಕ ಕೆಳಗಿದೆ. ಇದರ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)





ಫೋಟೋಗಳು: ಲಕ್ಷ್ಮೀ

ಫಲಕೋತ್ಸವ ಸೀಸನ್ ಎರಡು- ೨೫



ಇದು ಮೋಟುಗೋಡೆ ಐಟಮ್ಮು. ಸೂಕ್ಷ್ಮವಾಗಿ ಗಮನಿಸಿದರೆ ಬೇಕಾದ್ದು ಸಿಗುತ್ತೆ. ಸಿಗದೇ ಇದ್ದರೆ ಕೆಳಗಿನ ಚಿತ್ರವನ್ನು Zoom in ಮಾಡಿಕೊಂಡು ನೋಡತಕ್ಕದ್ದು.


Tuesday, April 14, 2009


ಗಂಟೆಗಟ್ಟಲೆ ಬೈನಾಕ್ಯುಲರ್ ಹಿಡಿದುಕೊಂಡು ಪಕ್ಷಿವೀಕ್ಷಣೆಗಾಗಿ ಹೊರಡುವ ಆರ್ನಿಥಾಲಜಿಸ್ಟುಗಳಿಗಾಗಿ ಈ ಫಲಕ!

ಪಕ್ಷಿವೀಕ್ಷಣೆಯೆಂದರೆ ಅದೇನು ತಿರುಪತಿ ತಿಮ್ಮಪ್ಪನ ದರ್ಶನವೇ? ಕೂತಲ್ಲಿ ಕೂತಿರೋದನ್ನ ಎರಡು ಸೆಕೆಂಡಲ್ಲಿ ನೋಡಿಕೊಂಡು ಹೋಗೋಕೆ?



Birds for all ಎಂದರೆ? ಯಾರೋ ಗಣಿತ ಮೇಷ್ಟ್ರು ಇರಬೇಕು ಇದನ್ನು ತರ್ಜುಮೆ ಮಾಡಿರುವುದು, "for all.." ಎಂದು ಇನ್ಯಾರು ತಾನೇ ಬರೆದಾರು!

Tuesday, April 7, 2009

ಈ ಸರ್ತಿಯೂ ಎರಡು ಫೋಟೋಗಳು.
ಈ ಫೋಟೋ ಕಳಿಸಿಕೊಟ್ಟವರು ಶ್ರೀಹರ್ಷ ಸಾಲಿಮಠ್ ಅವರು. ಅವರ ವಿವರಣೆ ಇಂತಿದೆ.
" ನಮ್ಮಲ್ಲಿನ ಭಾಷಾ ದಾರಿದ್ರ್ಯಕ್ಕೆ ಉದಾಹರಣೆ ಇದು.
ಬಾಬುಸಿಂಗರ ಪೇಡೆ ವಿಶ್ವದಲ್ಲೇ ಉತ್ತಮ ಎಂಬುದಕ್ಕೆ ಅನುಮಾನವಿಲ್ಲ.
ಇಂಗ್ಲಿಶ್ ನ ಅಪಾಸ್ತ್ರುಪಿಯನ್ನು ಕನ್ನಡಕ್ಕೆ ನೇರವಾಗಿ ವರ್ಗಾಯಿಸಿದ್ದಾರೆ. "




ಮತ್ತೊಂದು ಭಾಷಾ ಅವಾಂತರವನ್ನು ಕಾರ್ತಿಕ್ ಸಿ ಸುನಿಲ್ ಅವರು ಕಳಿಸಿಕೊಟ್ಟಿದ್ದಾರೆ. ಅವರ ವಿವರಣೆ ಇಂತಿದೆ:
"Idu nodri, vidhyanagara ante.. Govt board galallooo tappaadre en maadona ?"

Tuesday, March 31, 2009

ಪ್ರತಿ ಸಲ ಒಂದೊಂದೇ ಫೋಟೋ ನೋಡುತ್ತಿದ್ದಿರಿ...ಈ ಬಾರಿ ಎರಡು ವಿಚಿತ್ರ ವಿಶೇಷಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ. ಮೊದಲ ಚಿತ್ರವನ್ನ ಕಳಿಸಿಕೊಟ್ಟವರು ಗಣೇಶ್ ನಮನ ಅವರು. "Site for sale" ಅಂತ ಸಾರ್ವಜನಿಕ ಸ್ವತ್ತಾದ ಬಸ್ ನಿಲ್ದಾಣದ ಮುಂದೆ ಹಾಕಿದ್ದಾರೆ. ನೋಡಿದವರಿಗೆ ಬಸ್ ಸ್ಟಾಪ್ ಮಾರಾಟಕ್ಕಿದೆ ಅನ್ನುವ ಹಾಗನ್ನಿಸತ್ತೆ ಅಂತ ಗಣೇಶ್ ಅವರಿಗೆ ಅನ್ನಿಸಿ ನಮಗೆ ಫೋಟೋ ಕಳಿಸಿದ್ದಾರೆ.




ಇನ್ನೊಂದು ಅತ್ಯದ್ಭುತ, ಅದ್ವಿತೀಯ ಫೋಟೋ. ದೇಶದ ಪ್ರಮುಖ ಪಕ್ಷ ಒಂದು ತನ್ನ ಕಚೇರಿಯನ್ನು ಇಲ್ಲಿ ಸ್ಥಾಪಿಸಲಾಗಿದೆ ಅಂತ ಫಲಕ ಹಾಕಿದೆ. ನಿಮಗೆ ಕಟ್ಟಡ ಕಾಣತ್ತಾ ? ನೀವು ದುರ್ಬೀನು, ಟೆಲೆಸ್ಕೋಪು, ಮೈಕ್ರೋಸ್ಕೋಪ್ ಇಟ್ಟುಕೊಂಡು ನೋಡಿ ಬೇಕಿದ್ರೆ !
ಈ ಫೋಟೋ ಕಳಿಸಿಕೊಟ್ಟವರು ಶ್ರೀಕಾಂತ್ ಕೆ.ಎಸ್.



Tuesday, March 24, 2009


ಇದರ ಬಗ್ಗೆ ನಾನು ಏನೂ ಮಾತಾಡಕ್ಕೇ ಹೋಗಲ್ಲ !

ಫೋಟೋ : ಲಕ್ಷ್ಮೀ

Tuesday, March 17, 2009


ಕೈ ತೋರಿದಲ್ಲಿ ನಿಲ್ಲುವ ವಾಹನ ಅಂತ ಇದೆ. ಇದನ್ನ ನೋಡಿದ ಮೇಲೆ ನನಗೆ ಮೂಡಿದ ಪ್ರಶ್ನೆಗಳು ಇವು:

೧. brakes = ಕೈ. ಹೌದಾ ?

೨. ಕೈ ತೋರಿದರೆ ನಿಲ್ಲತ್ತೆ. ನಿಂತ ಮೇಲೆ ಮತ್ತೆ ಹೇಗೆ ಮುಂದುವರಿಯುತ್ತೆ ? ಅದಕ್ಕೆ ಕಾಲು ತೋರಿಸಬೇಕಾ ಅಥವಾ ಕಾಲು ಕೊಡಬೇಕಾ ?

ಫೋಟೋ ಕಳಿಸಿದವರು : ಶ್ರೀಕಾಂತ್ ಕೆ.ಎಸ್.[ಮನಸಿನ ಪುಟಗಳ ನಡುವೆ ಬ್ಲಾಗಿನವರು]

ಫಲಕೋತ್ಸವ ಸೀಸನ್ ಎರಡು - ೧೯

ಫೋಟೋ ಕಳಿಸಿದವರು ಶ್ರೀಕಾಂತ್ ಕೆ.ಎಸ್.


ಈ ಫಲಕದಲ್ಲಿ ಬರೆದಿರೋದನ್ನ ಒಂದೇ ಬಾರಿಗೆ ಪೂರ್ತಿ ಓದಿಕೊಂಡುಬಿಡಿ , ಮಧ್ಯದಲ್ಲೆಲ್ಲೂ pause ಮಾಡಕೂಡದು :)

Tuesday, March 3, 2009



ಈ ಫೋಟೋವನ್ನು ಕಳಿಸಿದವರು ಸಹ ಬ್ಲಾಗಿಗ ಶ್ರೀನಿವಾಸ ರಾಜನ್(ಗಂಡಭೇರುಂಡ) . ಹೋಟೆಲ್ ಒಂದರಲ್ಲಿ ದೊಡ್ಡ ಕನ್ನಡಿಯನ್ನಿಟ್ಟು" " ಇಲ್ಲಿ ತಲೆ ಬಾಚಿಕೊಳ್ಳುವ ಹಾಗಿಲ್ಲ"ಅಂತ ಹಾಕಿದರೆ ಕನ್ನಡಿ ಇರೋದು ಯಾಕೆ ? " ಅಂತ ಅವರ ಪ್ರಶ್ನೆ. ಮತ್ತು ಅವರಿಗೆ ಆಂಗ್ಲದಲ್ಲಿ ಬರೆಯುವುದು ಹೇಗೆಂದು ಗೊತ್ತಾಗದೆ ಸಿಕ್ಕಾಪಟ್ಟೆ ಕನ್ ಫ್ಯೂಸ್ ಆಗಿರೋದನ್ನ ನೀವು ಆ ಫಲಕದಲ್ಲೇ ನೋಡಬಹುದು.

Sunday, March 1, 2009

ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಚಿತ್ರ ಚಿತ್ರಗಳನ್ನು ಹಾಕಲಿಕ್ಕೆಂದು ಶುರು ಮಾಡಿದ ಈ ಪುಟ್ಟ ಫೋಟೋಬ್ಲಾಗು ಇಂದು ನಿಮ್ಮೆಲ್ಲರ ಪ್ರೋತ್ಸಾಹ, ಕೊಡುಗೆ ಮತ್ತು ಭಾಗವಹಿಸುವಿಕೆಯಿಂದ ಇಂದಿಗೆ ಒಂದು ವರ್ಷ ಪೂರೈಸಿದೆ. ಪರಿಸರಪ್ರೇಮಿ ಅರುಣರ ಕೊಡುಗೆ, ಸಲಹೆ ಮತ್ತು ಮಾರ್ಗದರ್ಶನದಲ್ಲಿ,ಶ್ರೀಕಾಂತ್ ಹಾಗೂ ಶ್ರೀನಿವಾಸ್ ಅವರ ಚಿತ್ರಕೊಡುಗೆಗಳಿಂದ ಶುರುವಾದ ಈ ಬ್ಲಾಗು ಆನಂತರದಲ್ಲಿ ಓದುಗ ಬಾಂಧವರಿಂದ ಕೊಡುಗೆಗಳನ್ನು ಸ್ವೀಕರಿಸುವ ಮಟ್ಟಕ್ಕೆ ಈಗ ಬೆಳೆದು ನಿಂತಿದೆ. ಫಲಕೋತ್ಸವ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಕಂಡು ಈಗ ಎರಡನೆಯ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾನು ಬ್ಲಾಗ್ ಯಶಸ್ವಿಯಾಗಲು ಸಹಕರಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಕೃತಜ್ಞಳಾಗಿದ್ದೇನೆ.

ನಾವು ಫೋಟೋ ತೆಗೆಯಲು ಕ್ಯಾಮೆರಾ ಇರಲೇಬೇಕಲ್ಲವೇ ? ಮೊಬೈಲೋ, ಡಿಜಿಕ್ಯಾಮೋ, ಎಸ್ ಎಲ್ ಆರ್ , ಯಾವುದಿರಲಿ, ನಾನು ಅದಕ್ಕೂ ಕೃತಜ್ಞಳು.ಈ ಸಂದರ್ಭದಲ್ಲಿ ಕ್ಯಾಮೆರಾ ಬೆಳೆದು ಬಂದ ದಾರಿಯ ಒಂದು ಪುಟ್ಟ ಪರಿಚಯ ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ.

ಕ್ಯಾಮೆರಾದ ಮೊದಲ ರೂಪ ಕ್ಯಾಮೆರಾ ಒಬ್ಸ್ ಕ್ಯೂರಾ (camera obscura). ಇದನ್ನು ಕಂಡುಹಿಡಿದವರು ಇರಾನಿಯನ್ ವಿಜ್ಞಾನಿ Ibn al-Haytham (Alhazen).





ಅಂದಿನಿಂದ ೧೯೯೦ವರೆಗೆ ಆದ ಬೆಳವಣಿಗೆಯನ್ನು ಈ ಲಿಂಕಿನಲ್ಲಿ ಕಾಣಬಹುದು.


ಡಿಜಿಟಲ್ ಫೋಟೋಗ್ರಫಿಯ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿದೆ.ಆದ್ದರಿಂದ ಅದನ್ನು ವಿವರಿಸುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ.

ಈ ಬ್ಲಾಗಿನ ಉಗಮಕ್ಕೆ ಕಾರಣವಾದ ನನ್ನ ಮೊಬೈಲ್ ಫೋನ್ ಮತ್ತು ನಮ್ಮ ತಂಡದ ಮೊಬೈಲ್ ಫೋನ್ ಗಳು ಹಾಗೂ ಕ್ಯಾಮೆರಾಗಳಿಗೆ, ಮತ್ತು ನಿಮ್ಮೆಲ್ಲರ ಕ್ಯಾಮೆರಾಗಳಿಗೂ ಒಂದೊಂದು ಥ್ಯಾಂಕ್ಸ್ !

ಫೋಟೋ ಕೃಪೆ: ವಿಕಿಪೀಡಿಯಾ.

Tuesday, February 24, 2009

ಫೋಟೋ ಕೃಪೆ : ಜ್ಯೋತಿ.

ಅವರ ವಿವರಣೆ ಇಂತಿದೆ.

ಇದು ಹುಬ್ಬಳ್ಳಿಯಿಂದ ಬದಾಮಿಗೆ ಹೋಗುವಾಗಿ ದಾರಿ ಮಧ್ಯದಲ್ಲಿ ತೆಗೆದಿದ್ದು.
ವೊಡಾಫೋನ್ ವೂಡಾಫೂನ್ ಆದದ್ದು ಯಾವಾಗ ಅಂತ ಗೊತ್ತಾಗ್ಲಿಲ್ಲ!!
ಹಾಗೆ ಹಿಂದೆ ನೋಡಿದ್ರೆ, professional ಅಂತ ಇಂಗ್ಲೀಷ್ ಅಲ್ಲಿ ಸರಿಯಾಗಿ ಬರೆದು, ಕನ್ನಡದಲ್ಲಿ ಯಾಕೋ ಪ್ರೊಪೇಷನಲ್ ಮಾಡಿ ಬಿಟ್ಟಿದ್ದಾರೆ.

Tuesday, February 17, 2009

ಇಂಥಾ ಬೋರ್ಡನ್ನು ನೀವು ಇದುವರೆಗೂ ನೋಡಿರಲಿಲ್ಲ ಅನ್ಸತ್ತೆ. ನೋಡೀ ಪಾ...ಸಂಪರ್ಕಿಸುವುದಿದ್ದರೆ ಸಂಪರ್ಕಿಸಿ ನೋಡಿ.

ಫೋಟೋ ಕೃಪೆ: ಪ್ರವೀಣ್ ಉಡುಪ (via forwarded mail from Prasad murty)

Tuesday, February 10, 2009

ಈ ಫೋಟೋವನ್ನು ಕಳಿಸಿಕೊಟ್ಟವರು ಕಾರ್ತಿಕ್.ಸಿ.ಸುನಿಲ್. ಅವರ ವಿವರಣೆ ಇಂತಿದೆ.

"Monne Chikkamagalurina hotel nalli kanda phone-u idu. Reception spelling nodi majavaagide. Ado allade, dial 90 or 100 anta baryakke punyaatma 90R100 ante.. "

Tuesday, February 3, 2009

ಅಪ್ರತಿಮ ವಾಗ್ಮಿ, ಅಸಾಮಾನ್ಯ ಬರಹಗಾರ, ಅಸತ್ಯವನ್ನು ಅನ್ವೇಷಿಸುವಲ್ಲಿ ಸದಾ ನಿರತರಾಗಿರುವ ಸಹ ಬ್ಲಾಗಿಗ ಅಸತ್ಯ ಅನ್ವೇಷಿಯವರು ಅಸತ್ಯವನ್ನು ಅನ್ವೇಷಣೆ ಮಾಡುವ ಕೆಲಸಕ್ಕೆ ಅನಾಮತ್ತಾಗಿ ರಜೆ ಘೋಷಿಸಿ ನಮ್ಮ ಚಿತ್ರ ವಿಚಿತ್ರ ಬ್ಲಾಗಿನ ಫಲಕೋತ್ಸವಕ್ಕೆ ಚಿತ್ರವನ್ನು ಅನ್ವೇಷಣೆ ಮಾಡಿ ಕಳಿಸಿದ್ದಾರೆ :) ಅದಕ್ಕೆ ನಾವು ’ಅ’ತ್ಯಂತ ’ಅ’ಭಾರಿಗಳಾಗಿದ್ದೇವೆ.

ಇದು ಕಾಂಚಿಪುರದ ಪ್ರಸಿದ್ಧ ದೇವಾಲಯವೊಂದರಲ್ಲಿ ತೆಗೆದ ಚಿತ್ರವಂತೆ. ದೇವಸ್ಥಾನದ ಅಧಿಕಾರಿಯವರು ಕನ್ನಡದಲ್ಲಿ ಏನನ್ನು ಹೇಳಲು ಬಯಸುತ್ತಿದ್ದಾರೆ ಅಂತ ನಾನು ವಿವರಿಸುವ ಅವಶ್ಯಕತೆ ಇಲ್ಲ ಅಂತ ಅನ್ನಿಸುತ್ತೆ.

ಅಂದ ಹಾಗೆ ಇದು ಚಿತ್ರವಿಚಿತ್ರದ ಐವತ್ತನೆಯ ಪೋಸ್ಟು. ನಿಮ್ಮ ಪ್ರೋತ್ಸಾಹ ನೀವೆಲ್ಲರೂ ಕಳಿಸುವ ಫೋಟೋಗಳ ಮೂಲಕ ಹೀಗೆ ಇರಲಿ ಎಂದು ಆಶಿಸುತ್ತೇವೆ.

--ಚಿತ್ರ ವಿಚಿತ್ರ ತಂಡ

ಫಲಕೋತ್ಸವ ಸೀಸನ್ ಎರಡು-೧೩

ಇದಕ್ಕೆ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)

ಫೋಟೋ ಫಾರ್ವರ್ಡ್ ಮಾಡಿದವರು : ರಾಧಾ . ಆರ್ ( ಮೂಲ ಫೋಟೋ ತೆಗೆದವರ ಹೆಸರು ಗೊತ್ತಿಲ್ಲ)

Tuesday, January 20, 2009

ಇದು ಡಿಸೆಂಬರ್ ೧೦ನೇ ತಾರೀಖು ಉದಯ ವಾಣಿಯಲ್ಲಿ ಮಂಗಳೂರು ಆವೃತ್ತಿಯಲ್ಲಿ ಪ್ರಕಟವಾದ ಒಂದು ಫಲಕದ ಫೋಟೋ. ಆದರೂ ಇದನ್ನ ಬ್ಲಾಗಿಗೆ ಹಾಕಲೇ ಬೇಕು ಅಂತ ಅನಿಸಿ ಪ್ರವೀಣ್ ಉಡುಪರು ಕಳಿಸಿದ್ದಾರೆ. ವಿವರಣೆ ಫೋಟೋ ಕೆಳಗೇ ಇದೆ...ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣತ್ತೆ.

Tuesday, January 13, 2009


ದೇವಸ್ಥಾನವನ್ನೇ ಪ್ರಸಾದವನ್ನಾಗಿ ಕೊಡ್ತಾರಲ್ಲ ಅಂತ ಆಸೆ ಪಟ್ಕೊಂಡ್ ಹೋದೆ...ನೋಡಿದ್ರೆ ಅಂಗಡಿ ನೂ ಇಲ್ಲ, ಪ್ರಸಾದನೂ ಇಲ್ಲ...ಕೋರಿಕೆದಾರನೂ ಇಲ್ಲ...ಹುಡ್ಕಿ ಹುಡ್ಕಿ ಸಾಕಾಯ್ತು !

ಫೋಟೋ: ಲಕ್ಷ್ಮೀ

Tuesday, January 6, 2009

ಈ ಬೋರ್ಡನ್ನು ಬರೆದವರು ಉಪೇಂದ್ರನ ಪಕ್ಕಾ ಅಭಿಮಾನಿ ಅನ್ಸತ್ತೆ. ಪ್ರಚಾರಕ್ಕೆ ಒಳ್ಳೆಯ ಗಿಮಿಕ್ ಅಲ್ವಾ ? :)

ಫೋಟೋ ಕೃಪೆ: ಶ್ರೀಕಾಂತ್ ಕೆ.ಎಸ್

Tuesday, December 30, 2008

ಬ್ಯೂಟಿ ಪಾರ್ಲರ್ ಗಳಲ್ಲಿ ಇದು "Advanced"ಅಂತೆ. ಪಾರ್ಲರ್ ಸ್ಪೆಲ್ಲಿಂಗನ್ನು ಗಮನಿಸಿ.ಹಾಗೇ...arrow head ತೋರಿಸಿ 44 ಅಂತ ಬರ್ದಿದಾರೆ. ಏನಂತ ಅರ್ಥ ಮಾಡ್ಕೊಬೇಕು ಇದನ್ನ ? 44 ಹೆಜ್ಜೆ ಆದ್ಮೇಲೆ ಪಾರ್ಲರ್ ಅಂತಾನ ? ಅಥ್ವಾ ನಲ್ವತ್ತ್ನಾಲ್ಕನೇ ಬಿಲ್ಡಿಂಗ್ ನಲ್ಲಿ ಈ ಪರ್ಲರ್ ಇದೆ ಅಂತಾನಾ ? ಅಡ್ರೆಸ್ಸೇ ಕೊಡದ ಮಹಾಶಯ ಮೊಬೈಲ್ ನಂಬರ್ರನ್ನು ಕೊಟ್ಟಿರುವುದು ನೋಡಿದರೆ ಜನರು ಫೋನ್ ಮಾಡಿ, ಅಪಾಯಿಂಟ್ಮೆಂಟ್ ತಗೊಂಡೇ ಹೋಗಬೇಕೆನ್ನಿಸುತ್ತದೆ!

ಫೋಟೋ ಕೃಪೆ: ಶ್ರೀಕಾಂತ್.ಕೆ.ಎಸ್.

Tuesday, December 23, 2008

ನಮ್ಮ ತಲೆಯ ಬಗ್ಗೆ ಇವರಿಗೆ ಏನು ಕಾಳಜಿ ಏನ್ ಕಥೆ ! ತಲೆ ಹೊಡೆಸಿಕೊಂಡು ಆಸ್ಪತ್ರೆ ಸೇರದಿರಿ ಎಂದು warn ಮಾಡುವ ರೀತಿ ಚೆನ್ನಾಗಿದೆ ಅಲ್ವಾ ? Mind your head ಅಂತೆ...!! ಅಲ್ಲ...ಜನರು ಮೆಟ್ಟಿಲು ಮೇಲೆ ಏನು ಬರೆದಿದ್ದಾರೆ ಎಂದು ನೋಡಿಕೊಂಡು ಹತ್ತದೇ ಇದ್ದರೆ ಈ warning ಉದ್ದೇಶ ಸಾರ್ಥವಾಗದು. ಆದರೂ ಇವರ ಪ್ರಯತ್ನ ಮೆಚ್ಚತಕ್ಕದ್ದು. ಈ ಬಾರಿ ಇದು ವಿಶೇಷ ಫಲಕ.

ಫೋಟೋ ಕೃಪೆ: ಅರುಣ್ ಎಲ್ (ಪರಿಸರಪ್ರೇಮಿ)

Tuesday, December 16, 2008

ಎರಡು complementary ಫಲಕಗಳು. "ತಿರುಮಲ ಹೈರ್ ಸ್ಟೈಲ್" ಮತ್ತು "ಉಗುಳಬೇಡಿ" ತಿರುಮಲದ ಹೈರ್ ಸ್ಟೈಲ್ ಮೇಲೆ ಉಗುಳಬೇಡಿ ಎಂದು ಅರ್ಥೈಸಿಕೊಳ್ಳಬೇಕೆ ?

ಫೋಟೋ ಕೃಪೆ: ಅರುಣ್ ಎಲ್.(ಪರಿಸರಪ್ರೇಮಿ)


ಹೀಗೂ ಉಂಟೇ ?


Tuesday, January 19, 2010

ಈ ಚಿತ್ರದ ಬಗ್ಗೆ ಮಾತೇ ಇಲ್ಲ. ನೋಡಿಬಿಡಿ.






ಫೋಟೋ ಕೃಪೆ: ನಮನ ಬಜಗೋಳಿ

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೧೩

ಹಸಿವಾಗ್ತಿದ್ಯಾ ? ನಿಮಗೂ ಬೇಕಾ ?

ಫೋಟೋ: ಕಾರ್ತಿಕ್ ಸಿ. ಸುನಿಲ್

Tuesday, October 27, 2009


ಅಂಥಿಂಥಾ ಮಿನೆರಲ್ ವಾಟರ್ ಆಗಲ್ಲ...ಬಿಸ್ಲೆರಿ ನೇ ಆಗ್ಬೇಕು ! :)

ಫೋಟೋ ಕೃಪೆ: ಕಾರ್ತಿಕ್ ಸಿ. ಸುನಿಲ್

Tuesday, October 20, 2009


gossipping ಕೋತಿಗಳು ! :)

ಫೋಟೋ :ಪಾಲಚಂದ್ರ

Tuesday, October 13, 2009

ಮತ್ತೊಂದು ಕ್ರೋ ಪಾರ್ಟೀ...
ನಾನೇ ಲೀಡರ್ರು....

ಇರ್ಲಿ...ಇನ್ನೊಂದು ಫೋಟೋ ತೆಗಿರಿ ಪರ್ವಾಗಿಲ್ಲ...ಪ್ಲೀಜ್ !

ಫೋಟೋಗಳು: ಲಕ್ಷ್ಮೀ

Tuesday, October 6, 2009


ಫಲಕವನ್ನ ನೋಡಿ. ಆನಂತರ ಆ ನಾಯಿ ಅಲ್ಲಿ ಏಕೆ ನಿಂತಿದೆ ಅಂತ ನಮಗೆ explain ಮಾಡಿ !

ಫೋಟೋ: ಅರುಣ್ ಎಲ್.

Tuesday, September 29, 2009


ಮುಖ ತಿರುಗಿಸಿಕೊಂಡ ಜೋಡಿ ಹಕ್ಕಿಗಳು.

ಫೋಟೋ: ಲಕ್ಷ್ಮೀ

Tuesday, September 22, 2009

ಬೆಂಗಳೂರಿನ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡದಲ್ಲಿ ಕಂಡ ಕೋತಿ...ಮರಕ್ಕೆ ನೆಗೆಯಲೋಬೇಡವೋ ಎಂದು ಯೋಚನಾಲಹರಿಯಲ್ಲಿ ಮುಳುಗಿದೆ !

ಫೋಟೋ: ಲಕ್ಷ್ಮೀ

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೬


ನಾಯಿಯೊಂದು ತುಳಸಿ ಗಿಡಕ್ಕೆ ಹಾಕಿರುವ ನೀರನ್ನ ಕುಡಿಯುತ್ತಿರುವ ಪರಿಯನ್ನು ನೋಡಿ !
ಫೋಟೋ : ಲಕ್ಷ್ಮೀ

Tuesday, September 8, 2009


ಎಮ್ಮೆ ಇನ್ ಅ ನ್ಯಾಚುರಲ್ ಸ್ವಿಮ್ಮಿಂಗ್ ಪೂಲ್ ! ಕಡೂರು ಜಿಲ್ಲೆಯ ದೇವನೂರಿಗೆ ಪಯಣಿಸುತ್ತಾ ದಾರಿಯಲ್ಲಿ ಕಂಡ ದೃಶ್ಯವಿದು. ಫೋಟೋ: ಲಕ್ಷ್ಮೀ

Tuesday, August 25, 2009


ಭೌತ ಶಾಸ್ತ್ರದಲ್ಲಿ ಒಂದು ವಿವರಣೆ ಇದೆ- " Forces when equal in magnitude but opposite in direction cancel each other " ಅಂತ. ಇವೆರಡು ನಾಯಿಗಳನ್ನು ನೋಡಿದಾಗ ನನಗೆ ಅದೇ ನೆನಪಾಗಿದ್ದು ! ಮಂಗಳೂರಿನ ಬಿಜೈ ಮ್ಯೂಸಿಯಂ ಗೆ ಹೋದಾಗ ಕಂಡ ದೃಶ್ಯವಿದು.

ಫೋಟೋ: ಲಕ್ಷ್ಮೀ

Tuesday, August 18, 2009


ಕೋತಿ ಮೊಸರನ್ನ ತಿಂದು ಮೇಕೆಯ ಮೂತಿಗೆ ಮೆತ್ತಿದ ಕಥೆ ಗೊತ್ತಲ್ಲಾ ? ಇಲ್ಲೂ ಅದೇ ನಡೆಯುತ್ತಿರುವ ಹಾಗಿದೆ !

ಫೋಟೋ : ಲಕ್ಷ್ಮೀ

Tuesday, August 11, 2009


ಪಾಪ ! ಕೋತಿಯ ಅಳುಮುಖ ಮತ್ತು ಸಪ್ಪೆ ಮುಖ ನೋಡಿದವರಿಗೆ ಹೀಗೆ ಅನ್ನಬೇಕು ಅನ್ನಿಸತ್ತೆ ಅಲ್ವಾ ?

ಫೋಟೋ: ಲಕ್ಷ್ಮೀ

Tuesday, August 4, 2009

ನಮ್ಮ ಮುಂದಿನ ಸರಣಿ ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು. ಈ ಕೆಳಗಿನ ಫೋಟೋ ಕಳಿಸಿಕೊಟ್ಟವರು ನಾಗಾಭರಣ ಅವರು. ಹಂಪೆಯಲ್ಲಿ ಕಂಡ ದೃಶ್ಯವಿದು. ಕೋತಿಯೊಂದು ಬಾಟಲಿಯನ್ನು ಹಿಡಿದುಕೊಂಡು ನೀರು ಕುಡಿಯುತ್ತಿರುವ ಭಂಗಿಯನ್ನು ನೋಡಿ!


Tuesday, July 28, 2009


ಹೀಗೂ ಉಂಟೇ ?

ಫೋಟೋ ಕೃಪೆ: ಅರುಣ್ ಎಲ್

ವಿಶೇಷ ಕಸದಬುಟ್ಟಿ


ಇದು ಲಾಲ್ ಬಾಗ್ ನಲ್ಲಿ ಕಂಡ ಒಂದು ವಿಶೇಷ ಕಸದ ಬುಟ್ಟಿ. ಕಡಿದ ಮರದ ಭಾಗದ ತರಹ ಕಾಣತ್ತೆ. creative ಅಲ್ವಾ ?

ಫೋಟೋ ಕೃಪೆ: ಕಾರ್ತಿಕ್ ಸಿ.ಎಸ್.

Tuesday, July 14, 2009


ಈ ಚಿತ್ರ ನೋಡಿದರೆ ಯಾರು ನೆನಪಾಗುತ್ತಾರೆ, ಯಾವ ಹಾಡು ನೆನಪಾಗುತ್ತೆ ಅಂತ ಹೇಳಬೇಕಿಲ್ಲ ಅಲ್ಲವೇ ?

ಫೋಟೋ ಕೃಪೆ: ಪಾಲಚಂದ್ರ

Monday, July 13, 2009

ಕರ್ನಾಟಕದಲ್ಲಿ ಜನಪದ ಸಂಗೀತದಷ್ಟೇ ಪ್ರಸಿದ್ಧವಾಗಿರುವುದು ಗಮಕ ಕಲೆ ಮತ್ತು ಗಮಕ ಶೈಲಿಯ ಗಾಯನ. ಗಮಕ ಎಂದ ತಕ್ಷಣ ಎಲ್ಲರಿಗು ನೆನಪಾಗುವುದು ಕುಮಾರವ್ಯಾಸನ "ಕರ್ನಾಟ ಭಾರತ ಕಥಾ ಮಂಜರಿ "ಯ ವಾಚನ ಮತ್ತು ವ್ಯಾಖ್ಯಾನ. ಕುಮಾರವ್ಯಾಸನ ಕಾವ್ಯ ಮಾತ್ರವಲ್ಲದೆ, ಲಕ್ಷ್ಮೀಶನ ಜೈಮಿನಿ ಭಾರತ, ತೊರವೆ ರಾಮಾಯಣ ಮುಂತಾದ ಕಾವ್ಯಗಳು ಕೂಡ ಪ್ರಚಲಿತವಾಗಿವೆ. ಹೊಸ ಪ್ರಯೋಗಗಳಿಗೆ ಹೆಸರಾದ ಪ್ರಣತಿ ಸಂಸ್ಥೆಯು [www.pranati.in] ಗಮಕ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಾಚನದ ಭಾಗ ರಾಷ್ಟ್ರಕವಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕಾವ್ಯದ "ಶಬರಿಗಾದನು ಅತಿಥಿ ದಾಶರಥಿ". ಜುಲೈ ಹದಿನೆಂಟು ೨೦೦೯ ರ ಸಾಯಂಕಾಲ ಐದು ಘಂಟೆ ಗೆ Indian Insitute of World culture ನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಅತಿಥಿಗಳಾಗಿ ಆಗಮಿಸಿ ಗಮಕ ವಾಚನದ ಆತಿಥ್ಯವನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.


Tuesday, July 7, 2009




ಇಂಥಾ ಭವ್ಯ, ದಿವ್ಯ, ಅತ್ಯಂತ ಪ್ರಾಚೀನ ಗಾಡಿಯೊಂದರಲ್ಲಿ ಪ್ರಯಾಣಿಸುವ ಭಾಗ್ಯವನ್ನು ನನಗೆ ಒದಗಿಸಿಕೊಟ್ಟು, ಇದರ ತುಕ್ಕು ಹಿಡಿದ ಹ್ಯಾಂಡಲ್ ನನಗೆ ಚುಚ್ಚಿದರೂ ನನಗೇನು ಆಗದ ಹಾಗೆ ಕಾಪಾಡಿದ ಸದ್ಯೋಜಾತನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಾ, ಇದು ಚಿತ್ರ ವಿಚಿತ್ರದ ಎಪ್ಪತ್ತೈದನೆಯ ಪೋಸ್ಟು ಎಂದು ನಿಮಗೆ ತಿಳಿಸುತ್ತಾ, ಈ ವಿಚಿತ್ರ ವಿಶೇಷ ವಾಹನಗಳ ಸೀರೀಸ್ ಅನ್ನು ಮುಕ್ತಾಯಗೊಳಿಸುತ್ತಿದ್ದೇವೆ.

ಫೋಟೋ: ಲಕ್ಷ್ಮೀ

Sunday, July 5, 2009

ಈ ಫೋಟೋ ಗಳನ್ನು ಕಳಿಸಿಕೊಟ್ಟವರು ಪಾಲಚಂದ್ರ. ಈ ವರ್ಷ ನಡೆದ ಏರೋ ಇಂಡಿಯಾದ ಏರ್ ಶೋವಿನ ಕೆಲವು ವಿಶೇಷ ಚಿತ್ರಗಳು.









Wednesday, June 17, 2009

ಇಲ್ಲೊಂದು ಸ್ಲಿಡ್ ಶೋ ಇದೆ. ಇದು ಬೆಂಗಳೂರಿನ ಎಚ್. ಏ. ಎಲ್. ವಿಮಾನ ನಿಲ್ದಾಣದ ಹತ್ತಿರ ಎಚ್.ಏ.ಎಲ್ ಸಂಸ್ಥೆ ವಿಮಾನ ಸಂಗ್ರಹಾಲಯ ಮತ್ತು ವಸ್ತು ಸಂಗ್ರಹಾಲಯ ನಿರ್ಮಿಸಿದೆ. ನಾನು ಅಲ್ಲಿಗೆ ಎರಡು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಅಲ್ಲಿನ ವಿಶೇಷ ವಿಮಾನಗಳ ಚಿತ್ರಗಳು ಇಲ್ಲಿವೆ. ಸಂಗ್ರಹಾಲಯಕ್ಕೆ ಭೇಟಿ ನೀಡಲು ಎಲ್ಲರಿಗೂ ಅವಕಾಶ ಇದೆ. ಖಂಡಿತಾ ಹೋಗಿ ಬನ್ನಿ.




Tuesday, June 9, 2009






ಈ ಚಿತ್ರಗಳನ್ನು ಕಳಿಸಿಕೊಟ್ಟವರು ವಿಜಯ್ ಶಂಕರ್. ಇದನ್ನು ನೋಡಿ ನನಗೆ "ಕಾರ್ ಕಾರ್" ಹಾಡು ನೆನಪಾಯ್ತು. ತಮ್ಮ ಜೀವವನ್ನೇ ಪಣಕ್ಕೆ ಒಡ್ಡಿ ಬಸ್ ಮೇಲೆ ಹತ್ತಿ ಕುಳಿತಿರುವ ಇವರೆಲ್ಲರನ್ನು ಪರಮಾತ್ಮ ಕಾಪಾಡಲಿ.