ಫೆಬ್ರ 18, 2011

ಹರಪ್ಪ ನಾಗರಿಕತೆ ( ಸಿಂಧೂ )

ಹರಪ್ಪ ನಾಗರಿಕತೆ ( ಸಿಂಧೂ )


* ಹರಪ್ಪ ನಾಗರಿಕತೆ ಸುಟ್ಟ ಇಟ್ಟಿಗೆಗಳು ಕಾಣಿಸಿಕೊಡ ವರುಸ ----------> ೧೮೫೬
* ಸುಟ್ಟ ಇಟ್ಟಿಗೆಗಳನ್ನು ಅದ್ಯಾಯನ ಮಾಡಿದ ಅಧಿಕಾರಿ ಮತ್ತು ವರುಶ ---->
----> ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ ೧೮೬೨
* ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ ನನ್ನು ಭಾರತ ಪುರತತ್ವದ ಪಿತಾಮಹ ಎನ್ನುವರು
* ಭಾ|| ಪುರತತ್ವ ಸಮಿಕ್ಸೆ ಮಂಡಳಿ ಸ್ಥಾಪನೆಯಾದ ವರುಸ ಮತ್ತು ಸ್ಥಪಕ ಹಾಗು ಸ್ಥಳ
=====> ೧೯೦೪ , ಲಾರ್ಡಕರ್ಜನ್ , ಕಲ್ಕತ್ತ
* ಹರಪ್ಪ ನಾಗರಿಕತೆಯ ಕಾಲ
=====> ೩೦೦೦ ಬಿಸಿ ಇಂದ ೨೦೦೦ ಬಿಸಿ
*ಹರಪ್ಪ ನಾಗರಿಕತೆಯ ನಿರ್ಮಾಪಕರು
=====> ದ್ರಾವಿಡರು
* ಹರಪ್ಪ ನಾಗರಿಕತೆ ಬೆಳೆದು ಬಂದ ನದಿ
=====> ಸಿಂಧೂ
*ಹರಪ್ಪ ನಾಗರಿಕತೆಯ ಧರ್ಮ


=====> ಶ್ಯೆವ
*ಹರಪ್ಪ ನಾಗರಿಕತೆಯ ಭಾಶೆ
=====> ಸಿಂಧಿ
*ಹರಪ್ಪ ನಾಗರಿಕತೆಯ ಲಿಪಿ
=====> ಚಿತ್ರಲಿಪಿ
*ಹರಪ್ಪ ನಾಗರಿಕತೆಯಲ್ಲಿ ಕಂಡು ಬಂದ ಚಿತ್ರಗಳು
====> ೨೫೦ -೪೦೦
* ಲಿಪಿ ಬರೆಯುವ ಶ್ಯೆಲಿ
====> ಮೊದಲ ಸಾಲು ಎಡದಿಂದ ಬಲಕ್ಕೆ ನಂತರದ ಸಾಲು ಬಲದಿಂದ ಎಡಕ್ಕೆ
*ಲಿಪಿಯಲ್ಲಿರುವ ಚಿತ್ರಗಳು
====> ಮಾನವ , ಮೀನು , ಹಡಗು , ಹೂಗಳು
* ನಾಗರಿಕತೆಯ ಒಟ್ಟು ವಿಸ್ತಿರ್ಣ
====> ೨೫೦.೦೦೦ ಚ.ಮ್ಯೆಲಿಗಳು / ೨೩ ಲಕುಸ ಕಿ.ಮೀ
* ನಾಗರಿಕ್ಅತೆ ವಿಸ್ತರಿಸಿದ ಆಕಾರ
=====> ತ್ರಿಭುಜಕಾರ
* ಈ ಸಂಸ್ಕ್ರುತಿಗೆ ಇಳಪಟ್ಟದ್ದ ಇಗಿನ ರಾಜ್ಯಗಳು ( ಭಾರತ)
====> ಮಹಾರಾಸ್ಟ್ರ , ಗುಜರಾತ್ ರಾಜಸ್ಥಾನ , ಪಂಜಾಬ್ , ಹರಿಯಾಣ , ಕಾಸ್ಮೀರ ,ಉತ್ತರ ಪ್ರದೇಶ
* ಪಾಕಿಸ್ಥಾನದ ರಾಜ್ಯಗಳು
====>ಬಲುಚಿಸ್ಥಾನ . ಸಿಂಧ್ ಜಿಲ್ಲೆ
*ಹರಪ್ಪ ನಾಗರಿಕತೆಯ ಒಟ್ಟುನೆಲೆಗಳು
=====> ೧೫೦೦ (ಭಾ-೧೦೦೦,ಪಾ-೫೦೦)
*ಹರಪ್ಪ ನಾಗರಿಕತೆಯಲ್ಲಿ ದೊರಕಿರುವ ಒಟ್ಟು ಮುದ್ರೆಗಳು
=====> ೨೦೦೦( ಟೆಹ್ರಾ ಕೋಟ)
* ಭಾರತದಲ್ಲಿ ಹೆಚ್ಚು ಮುದ್ರೆಗಳು ದೊರೆತ ಸ್ಥಳ
=====> ಸರಸ್ವತಿ ನದಿ ತೀರ
* ಚಿತ್ರಲಿಪಿಯ ಬಗ್ಗೆ ನಿಖರಮಾಹಿತಿ ನೀಡಿದ ಭಾಷಪರಿಣಿತ
=====> ಡಾ|| ಮಹಾದೇವನ್
*ಪ್ರಥಮವಾಗಿ ಮತ್ತು ಹೆಚ್ಚಾಗಿ ಬಳಸಿದ ಲೋಹ ಯವುದು ?
=====> ತಾಮ್ರ
*ಪ್ರಥಮವಾಗಿ ಉತ್ಪಾದಿಸಿದ ಮಿಶ್ರಲೋಹ ಯಾವುದು?
====> ಕಂಚು
*ಕಂಚು ಉತ್ಪಾದನೆಯಲ್ಲಿ ಬಳಸಿದ ಲೋಹಗಳು
====> ತಾಮ್ರ + ತವರ
*ಈ ನಾಗರಿಕತೆ ಜನರು ಬಳಸದೆ ಇದ್ದಲೋಹ
====> ಕಬ್ಬಿಣ
* ಕಬ್ಬಿಣ ಉದಾಹರಣೆಗೆ ಆಧಾರ ದೊರೆತ ಸ್ಥಳ ಮತ್ತು ತಿಳಿಸಿದ ವ್ಯಕ್ತಿ
=====> ೧೯೭೨ . ಜ್.ಪ್ ಜೋಶಿ , ಸೂರ್ ಕುಟ್ ದ್ದ
* ಕಂಡು ಬಂದ ಕಬ್ಬಿಣದ ವಸ್ತುಗಳು
====> ಕುದುರೆಯ ಲಾಳ (ಲಾಲು)
* ನಾಗರಿಕತೆ ಜನರು ಬಳಸಿದ ಪ್ರಾಣಿಗಳು
====> ಎತ್ತು ಮತ್ತು ಕತ್ತೆಗಳು
* ಸಾಕಿದ ಹಕ್ಕಿಗಳು
====> ಪಾರಿವಾಳ , ಕೋಳಿ .ನವಿಲು
* ನಾಗರಿಕತೆಯ ವಿವಿಧ ಹೆಸರುಗಳು
====> ೧ ಮೆಲೂಹ ನಾಗರಿಕತೆ
೨ ತಾಮ್ರ ಶಿಲಾಯುಗ ( ಚಾಲ್ಕೂಲೀಪಿಕ್)
೩ ಕಂಚಿನ ಯುಗ (ಬ್ರ್ವಾಂಚ್ ಲಿಪಿಕ್)
೪ ಇಂಡೂ - ಸುಮೆರೀಯನ್


ನಾಗರಿಕತೆಯ ಸಾಮಾಜಿಕ ಮತ್ತು ಆರ್ಥಿಕ ಜೀವನ
*ಹರಪ್ಪ ಸಮಾಜವನ್ನು ಸಮ್ಮಿಶ್ರ ಸಮೂಹ ಎಂದು ಕರೆದವರು
----> ಸರ್ ಜಾನ್ ಮಾರ್ಷಲ್
* ಹರಪ್ಪ ಜನರ ಅಸ್ಥಿಪಂಜರ ಅಧ್ಯಾಯನ ಮಾಡಿದವರು ಯಾರು ?
----> ಬಿ ಎಸ್ ಗುಹ
* ಹರಪ್ಪ ಜನರ ನಾಗರಿಕ ಪ್ರಗ್ನೆ ಗೆ ಉದಾಹರಣೆ
----> ಒಳಚರಂಡಿ ವ್ಯವಸ್ಥೆ ( ಮ್ಯಾನ್ ಹೋಲ್ ಸಿಸ್ ಟಂ)
*ಮನೆಗಲಲ್ಲಿರುವ ಕನಿಷ್ಟ್ ಕೋಣೆಗಳ ಸಂಖ್ಯೆ
-----> ೩ ರಿಂದ ೫
* ಮನೆಗಲಲ್ಲಿರುವ ಗರಿಷ್ಟ್ ಕೋಣೆಗಳ ಸಂಖ್ಯೆ
----> ೨೫ - ೩೦
* ಮುಖ್ಯಾರಸ್ತೆಯ ಸರಾಸರಿ ಆಗಲ
----> ೧೦ ಮೀಟರ್
* ಉಪರಸ್ತೆಯ ಸರಾಸರಿ ಆಗಲ
----> ೨.೪೫ ಮೀಟರ್
*ಜನಪ್ರಿಯ ಆಟಗಳು
-----> ಪಗಡೆ , ಚದುರಂಗ , ಪ್ರಾಣಿಪಕ್ಶಿ ಕಾಳಗ, ಬೇಟೆಗಾರಿಕೆ, ದೋಣಿಸ್ಪರ್ದೆ.
* ಮೊಲ ಉದ್ಯೋಗ ---> ಕೄಷಿ
* ಬೆಳೆಗಳು ----> ಗೋದಿ , ಭತ್ತ .ಬಾರ್ಲಿ, ಹತ್ತಿ
*ವಾಣಿಜ್ಯ ಬೆಳೆಗಳು ----> ಎಳ್ಳು
* ಪರಿಚಯವಿದ್ದಬೆಳೆ ----> ಕಬ್ಬು
*ತೆರಿಗೆ ಪದ್ದತಿ ----> ಧಾನ್ಯ ಸಂಗ್ರಹಣೆ
*ನೀರಾವರಿ ಪದ್ದತಿ ----> ಭಾವಿ , ನದಿ ,ಕೆರೆ
* ವ್ಯಾಪಾರ ಮಾಧ್ಯಮ --> ವಸ್ತುಗಳ ವಿನಿಮಯ
* ಮುಖ್ಯ ಕೈಗಾರಿಕೆಗಳು --> ಗೊಂಬೆ . ಮಣಿತಾಯಾರಿಸುವ
*ಕೈಗಾರಿಕ ಕೇಂದ್ರಗಳು ---> ಚಿಣ್ಣದಾರೋ(ಪಾಕಿ) ಲಾಥೊಲ್

ಫೆಬ್ರ 15, 2011

ಭಾರತ ರತ್ನ

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೮ ರಲ್ಲಿ).

ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.

ಕ್ರಮಾಂಕ↓↓     ಹೆಸರು↓↓     ಜನನ - ನಿಧನ↓↓     ಪುರಸ್ಕೃತ ವರ್ಷ↓↓     ಬಗ್ಗೆ↓↓     ರಾಜ್ಯ / ರಾಷ್ಟ್ರ↓↓
೧.     ಡಾ. ಸರ್ವೆಪಲ್ಲಿ ರಾಧಾಕೃಷ್ಣನ್     ೧೮೮೮-೧೯೭೫     ೧೯೫೪     ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ.     ತಮಿಳು ನಾಡು
೨.     ಚಕ್ರವರ್ತಿ ರಾಜಗೋಪಾಲಾಚಾರಿ     ೧೮೭೮ - ೧೯೭೨     ೧೯೫೪     ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ     ತಮಿಳು ನಾಡು
೩.     ಡಾ. ಚಂದ್ರಶೇಖರ ವೆಂಕಟ ರಾಮನ್     1888–1970     1954     ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ     ತಮಿಳು ನಾಡು
೪.     ಡಾ. ಭಗವಾನ್ ದಾಸ್     1869–1958     1955     ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ     ಉತ್ತರ ಪ್ರದೇಶ
೫.     ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ     1861–1962     1955     ಅಭಿಯಂತರು (ಇಂಜಿನೀಯರ್)     ಕರ್ನಾಟಕ
೬.     ಜವಾಹರ್‌ಲಾಲ್ ನೆಹರು     1889–1964     1955     ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ     ಉತ್ತರ ಪ್ರದೇಶ
೭.     ಗೋವಿಂದ ವಲ್ಲಭ ಪಂತ್     1887–1961     1957     ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ     ಉತ್ತರ ಪ್ರದೇಶ
೮.     ಡಾ. ಧೊಂಡೊ ಕೇಶವ ಕರ್ವೆ     1858–1962     1958     ಶಿಕ್ಷಣ ತಜ್ಞ,ಸಮಾಜ ಸೇವಕ     ಮಹಾರಾಷ್ಟ್ರ
೯.     ಡಾ. ಬಿಧನ್ ಚಂದ್ರ ರಾಯ್     1882–1962     1961     ವೈದ್ಯ,ರಾಜಕೀಯ ನೇತಾರ     ಪಶ್ಚಿಮ ಬಂಗಾಳ
೧೦.     ಪುರುಷೋತ್ತಮ್ ದಾಸ್ ತಂಡನ್     1882–1962     1961     ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ     ಉತ್ತರ ಪ್ರದೇಶ   
೧೧.     ಡಾ. ಬಾಬು ರಜೇಂದ್ರ ಪ್ರಸಾದ್     1884–1963     1962     ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ     ಬಿಹಾರ
೧೨.     ಡಾ. ಜಾಕಿರ್ ಹುಸೇನ್     1897–1969     1963     ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸ     ಆಂಧ್ರ ಪ್ರದೇಶ
೧೩.     ಡಾ. ಪಾಂಡುರಂಗ ವಾಮನ ಕಾಣೆ     1880–1972     1963     Indologist,ಸಂಸ್ಕೃತ ವಿದ್ವಾಂಸ     ಮಹಾರಾಷ್ಟ್ರ
೧೪.     ಲಾಲ್ ಬಹಾದುರ್ ಶಾಸ್ತ್ರಿ     1904–1966     1966     (ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ     ಉತ್ತರ ಪ್ರದೇಶ
೧೫.     ಇಂದಿರಾ ಗಾಂಧಿ     1917–1984     1971     ಭಾರತದ ಮಾಜಿ ಪ್ರಧಾನಿ     ಉತ್ತರ ಪ್ರದೇಶ
೧೬.     ವಿ ವಿ ಗಿರಿ     1894–1980     1975     ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕ     ಆಂಧ್ರ ಪ್ರದೇಶ
೧೭.     ಕುಮಾರಸ್ವಾಮಿ ಕಾಮರಾಜ್     1903–1975     1976     (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ.     ತಮಿಳು ನಾಡು
೧೮.     ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ)     1910–1997     1980     ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, 1979).     ಪಶ್ಚಿಮ ಬಂಗಾಳ
೧೯.     ವಿನೋಬಾ ಭಾವೆ     1895–1982     1983     (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕ     ಮಹಾರಾಷ್ಟ್ರ
೨೦.     ಖಾನ್ ಅಬ್ದುಲ್ ಗಫಾರ್ ಖಾನ್     1890–1988     1987     ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!)     ಪಾಕಿಸ್ತಾನ್
೨೧.     ಡಾ. ಎಮ್. ಜಿ. ರಾಮಚಂದ್ರನ್     1917–1987     1988     (ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟ     ತಮಿಳು ನಾಡು
೨೨.     ಡಾ. ಬಿ.ಆರ್.ಅಂಬೇಡ್ಕರ್     1891–1956     1990     (ಮರಣೋರತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿ     ಮಹಾರಾಷ್ಟ್ರ
೨೩.     ಡಾ. ನೆಲ್ಸನ್ ಮಂಡೇಲಾ     1918-     1990     ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ.     ದಕ್ಷಿಣ ಆಫ್ರಿಕ
೨೪.     ರಾಜೀವ್ ಗಾಂಧಿ     1944–1991     1991     (ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿ     ನವ ದೆಹಲಿ
೨೫.     ಸರ್ದಾರ್ ವಲ್ಲಭಭಾಯ್ ಪಟೇಲ್     1875–1950     1991     (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವ     ಗುಜರಾತ್
೨೬.     ಮೊರಾರ್ಜಿ ದೇಸಾಯಿ     1896–1995     1991     ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿ     ಗುಜರಾತ್
೨೭.     ಮೌಲಾನಾ ಅಬ್ದುಲ್ ಕಲಮ್ ಆಜಾದ್     1888–1958     1992     (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ     ಪಶ್ಚಿಮ ಬಂಗಾಳ
೨೮.     ಜೆ.ಆರ್.ಡಿ.ಟಾಟಾ     1904–1993     1992     ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿ     ಮಹಾರಾಷ್ಟ್ರ
೨೯.     ಸತ್ಯಜಿತ್ ರೇ     1922–1992     1992     ಭಾರತೀಯ ಚಲನಚಿತ್ರ ನಿರ್ದೇಶಕ     ಪಶ್ಚಿಮ ಬಂಗಾಳ
೩೦.     ಎಪಿಜೆ ಅಬ್ದುಲ್ ಕಲಮ್     1931-     1997     ಭಾರತದ ರಾಷ್ಟ್ರಪತಿ,ವಿಜ್ನಾನಿ     ತಮಿಳು ನಾಡು
೩೧.     ಗುಲ್ಜಾರಿಲಾಲ್ ನಂದಾ     1898–1998     1997     ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ.     ಪಂಜಾಬ
೩೨.     ಅರುಣಾ ಅಸಫ್ ಅಲಿ     1908–1996     1997     (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ.     ಪಶ್ಚಿಮ ಬಂಗಾಳ
೩೩.     ಎಮ್ ಎಸ್ ಸುಬ್ಬುಲಕ್ಷ್ಮಿ     1916–2004     1998     ಶಾಸ್ತ್ರೀಯ ಸಂಗೀತಗಾರ್ತಿ.     ತಮಿಳು ನಾಡು
೩೪.     ಸಿ. ಸುಬ್ರಮಣ್ಯಮ್     1910–2000     1998     ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ).     ತಮಿಳು ನಾಡು
೩೫.     ಜಯಪ್ರಕಾಶ್ ನಾರಾಯಣ್     1902–1979     1998     (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ.     ಉತ್ತರ ಪ್ರದೇಶ
೩೬.     ಪಂಡಿತ್ ರವಿಶಂಕರ್     1920-     1999     ಸಿತಾರ್ ವಾದಕರು.     ಉತ್ತರ ಪ್ರದೇಶ
೩೭.     ಡಾ. ಅಮರ್ತ್ಯ ಸೇನ್     1933-     1999     ನೋಬೆಲ್ ಪುರಸ್ಕೃತ (1998), ಅರ್ಥಶಾಸ್ತ್ರಜ್ಞ     ಪಶ್ಚಿಮ ಬಂಗಾಳ
೩೮.     ಗೋಪಿನಾಥ್ ಬೋರ್ಡೊಲೋಯಿ     1890–1950     1999     (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ.     ಆಸ್ಸಾಮ್
೩೯.     ಲತಾ ಮಂಗೇಶ್ಕರ್     1929-     2001     ಹಿನ್ನಲೆ ಗಾಯಕಿ.     ಮಹಾರಾಷ್ಟ್ರ
೪೦.     ಉಸ್ತಾದ್ ಬಿಸ್ಮಿಲ್ಲಾ ಖಾನ್     1916-2006     2001     ಶೆಹನಾಯ್ ವಾದಕ.     ಉತ್ತರ ಪ್ರದೇಶ
೪೧.     ಭೀಮ್‍ಸೇನ್ ಜೋಷಿ     1922-     2008     ಶಾಸ್ತ್ರೀಯ ಸಂಗೀತಗಾರ.     ಕರ್ನಾಟಕ

ಬೆಳಗೆರೆ ಜಾನಕಮ್ಮ

ಬೆಳಗೆರೆ ಜಾನಕಮ್ಮನವರು ೧೯೧೨ ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಜನಿಸಿದರು.ಇವರ ತಾಯಿ ಅನ್ನಪೂರ್ಣಮ್ಮ;ತಂದೆ ಚಂದ್ರಶೇಖರ ಶಾಸ್ತ್ರಿ. ೬ನೆಯ ವಯಸ್ಸಿಗೆ ಶಾಲೆ ಸೇರಿದ ಇವರು ೨ನೆಯ ತರಗತಿಯನ್ನು ಪೂರೈಸುತ್ತಿದ್ದ ಹಾಗೆ ಅಜ್ಜಿಯ ಆಕ್ಷೇಪಣೆಯಿಂದಾಗಿ ವಿದ್ಯಾಭ್ಯಾಸವನ್ನು ಅಲ್ಲಿಗೆ ಮುಕ್ತಾಯಗೊಳಿಸಬೇಕಾಯಿತು.ಆ ವಯಸ್ಸಿನಲ್ಲೆ ಜಾನಕಮ್ಮನವರು ಮನೆಯಲ್ಲಿಯೆ ಇದ್ದುಕೊಂಡೆ ದೇವರ ನಾಮಗಳನ್ನು, ತೊಟ್ಟಿಲ ಹಾಡುಗಳನ್ನು,, ಬೀಗರ ಪದಗಳನ್ನು ರಚಿಸುತ್ತ, ಹಾರ್ಮೋನಿಯಂ ನುಡಿಸುತ್ತ ಹಾಡುತ್ತಿದ್ದರು. ತಮ್ಮ ತಂದೆಯ ಉತ್ತೇಜನ ಹಾಗು ಸೋದರಿ ಪಾರ್ವತಿಯ ಒತ್ತಾಸೆಯಿಂದಾಗಿ ಜಾನಕಮ್ಮನವರು ಕಾವ್ಯರಚನೆಯನ್ನು ಮುಂದುವರಿಸಿದರು.೧೯೪೮ರಲ್ಲಿ ತಮ್ಮ ಮೂರನೆಯ ಮಗುವಿನ ಪ್ರಸವದ ಸಮಯದಲ್ಲಿ ಮಗುವಿನೊಂದಿಗೇ ನಿಧನರಾದರು.
ಜಾನಕಮ್ಮನವರು ಜನಕಜೆ ಎಂಬ ಕಾವ್ಯನಾಮದಲ್ಲಿ ಸುಮಾರು ೯೦ ಪ್ರಕಟಿತ ಹಾಗು ಅಪ್ರಕಟಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಕವನಗಳು ಜೀವನ,ಜಯಕರ್ನಾಟಕ ಹಾಗು ಪ್ರಬುದ್ಧ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಪ್ರಥಮ ಕವನಸಂಕಲನ:ಕಲ್ಯಾಣ

ಸಂಧಿ


ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.

ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು.

ಒರೆಗೂಡಿಕೆಯನ್ನು ತೋರಿಸಲು ಬರೆಯಲು ಸಮಾನಾರ್ಥಕ /ಒಟ್ಟು(=) ಮತ್ತು ಸಂಕಲನ/ಕೂಡು (+) ಗುರುತುಗಳನ್ನು ಬಳಸುತ್ತಾರೆ. '=' ಮತ್ತು '+' ಗುರುತುಗಳನ್ನು ಬಳಸಿ, ಮೇಲಿನ ಉದಾಹರಣೆಗಳನ್ನು ಹೀಗೆ ಬರೆಯಲಾಗುವುದು.

ಮನದ + ಆಳ = ಮನದಾಳ

ಮರದ + ಎಲೆ = ಮರದೆಲೆ

ಮನೆ + ಕೆಲಸ = ಮನೆಗೆಲಸ

ಹೆರ್‍ + ದಾರಿ = ಹೆದ್ದಾರಿ

ಕನ್ನಡ ನುಡಿಯಲ್ಲಿ ಬಹಳಷ್ಟು ಸಂಸ್ಕೃತದ ಪದಗಳು ಬರೆತಿಯುವರಿಂದ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳನ್ನು ಸೇರಿಸಲಾಗಿದೆ. ಆದುದರಿಂದ ಸಂಧಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು

ಗಮನಿಸಿರಿ:

ಒಂದು ಕನ್ನಡದ ಒರೆ, ಒಂದು ಸಂಸ್ಕೃತಪದವನ್ನು ಸೇರದರೆ ಅಲ್ಲಿ ಯಾವಾಗಲು ಕನ್ನಡಸಂಧಿಯ ನಿಯಮಗಳನ್ನು ಪಾಲಿಸುತ್ತಾರೆ.

ಉದಾ:

ಹಿಂ + ಪಾಲಕ = ಹಿಂಬಾಲಕ ; ಆದೇಶ ಕನ್ನಡಸಂಧಿ

ಇರ್‍ + ಭಾಗ = ಇಬ್ಬಾಗ; ಆದೇಶ ಕನ್ನಡಸಂಧಿ

ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.

ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು.

ಒರೆಗೂಡಿಕೆಯನ್ನು ತೋರಿಸಲು ಬರೆಯಲು ಸಮಾನಾರ್ಥಕ /ಒಟ್ಟು(=) ಮತ್ತು ಸಂಕಲನ/ಕೂಡು (+) ಗುರುತುಗಳನ್ನು ಬಳಸುತ್ತಾರೆ. '=' ಮತ್ತು '+' ಗುರುತುಗಳನ್ನು ಬಳಸಿ, ಮೇಲಿನ ಉದಾಹರಣೆಗಳನ್ನು ಹೀಗೆ ಬರೆಯಲಾಗುವುದು.

ಮನದ + ಆಳ = ಮನದಾಳ

ಮರದ + ಎಲೆ = ಮರದೆಲೆ

ಮನೆ + ಕೆಲಸ = ಮನೆಗೆಲಸ

ಹೆರ್‍ + ದಾರಿ = ಹೆದ್ದಾರಿ

ಕನ್ನಡ ನುಡಿಯಲ್ಲಿ ಬಹಳಷ್ಟು ಸಂಸ್ಕೃತದ ಪದಗಳು ಬರೆತಿಯುವರಿಂದ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳನ್ನು ಸೇರಿಸಲಾಗಿದೆ. ಆದುದರಿಂದ ಸಂಧಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು

ಗಮನಿಸಿರಿ:

ಒಂದು ಕನ್ನಡದ ಒರೆ, ಒಂದು ಸಂಸ್ಕೃತಪದವನ್ನು ಸೇರದರೆ ಅಲ್ಲಿ ಯಾವಾಗಲು ಕನ್ನಡಸಂಧಿಯ ನಿಯಮಗಳನ್ನು ಪಾಲಿಸುತ್ತಾರೆ.

ಉದಾ:

ಹಿಂ + ಪಾಲಕ = ಹಿಂಬಾಲಕ ; ಆದೇಶ ಕನ್ನಡಸಂಧಿ

ಇರ್‍ + ಭಾಗ = ಇಬ್ಬಾಗ; ಆದೇಶ ಕನ್ನಡಸಂಧಿ


ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.

ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು.

ಒರೆಗೂಡಿಕೆಯನ್ನು ತೋರಿಸಲು ಬರೆಯಲು ಸಮಾನಾರ್ಥಕ /ಒಟ್ಟು(=) ಮತ್ತು ಸಂಕಲನ/ಕೂಡು (+) ಗುರುತುಗಳನ್ನು ಬಳಸುತ್ತಾರೆ. '=' ಮತ್ತು '+' ಗುರುತುಗಳನ್ನು ಬಳಸಿ, ಮೇಲಿನ ಉದಾಹರಣೆಗಳನ್ನು ಹೀಗೆ ಬರೆಯಲಾಗುವುದು.

ಮನದ + ಆಳ = ಮನದಾಳ

ಮರದ + ಎಲೆ = ಮರದೆಲೆ

ಮನೆ + ಕೆಲಸ = ಮನೆಗೆಲಸ

ಹೆರ್‍ + ದಾರಿ = ಹೆದ್ದಾರಿ

ಕನ್ನಡ ನುಡಿಯಲ್ಲಿ ಬಹಳಷ್ಟು ಸಂಸ್ಕೃತದ ಪದಗಳು ಬರೆತಿಯುವರಿಂದ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳನ್ನು ಸೇರಿಸಲಾಗಿದೆ. ಆದುದರಿಂದ ಸಂಧಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು

ಗಮನಿಸಿರಿ:

ಒಂದು ಕನ್ನಡದ ಒರೆ, ಒಂದು ಸಂಸ್ಕೃತಪದವನ್ನು ಸೇರದರೆ ಅಲ್ಲಿ ಯಾವಾಗಲು ಕನ್ನಡಸಂಧಿಯ ನಿಯಮಗಳನ್ನು ಪಾಲಿಸುತ್ತಾರೆ.

ಉದಾ:

ಹಿಂ + ಪಾಲಕ = ಹಿಂಬಾಲಕ ; ಆದೇಶ ಕನ್ನಡಸಂಧಿ

ಇರ್‍ + ಭಾಗ = ಇಬ್ಬಾಗ; ಆದೇಶ ಕನ್ನಡಸಂಧಿ


ಕನ್ನಡ ಸಂಧಿಗಳು

ಎರಡು ಕನ್ನಡದ ಒರೆಗಳ ಕೂಡಿಕೆ/ಸೇರಿಕೆ/ಕಲೆತ.

ಮೂರು ಕನ್ನಡದ ಒರೆಗೂಡಿಕೆಗಳು.
ಲೋಪ ಸಂಧಿ

ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.

ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.

ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ.

ಗಮನಿಸಿರಿ:

ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಕೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.

ಮಾದರಿ: ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?

ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.

ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವು.

ಹಾಗೆ

ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವು

"ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.
ಆಗಮ ಸಂಧಿ

ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ,ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ.ಇದರಲ್ಲಿ ಎರಡು ವಿಧ.'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.

ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.

ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.

ಗಮನಿಸಿರಿ:

ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಂತೆ ಹೇಳಿದರೂ, ಹೀಗೆ ಹೇಳುವದು ಹಲವು ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.

ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ" ಎಂದಾಗ ಆ ಸಮಾನ್ಯವಲ್ಲದ( ಅಸಮಾನ್ಯ ) ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.

ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ...

ಮಗು + ಅನ್ನು = ಮಗುವನ್ನು ಆದರೆ ನೀರು + ಅನ್ನು = ನೀರುವನ್ನು ಏಕೆ ತಪ್ಪು?

ಮನೆ + ಅನ್ನು = ಮನೆಯನ್ನು ಆದರೆ ಆದರೆ + ಇಲ್ಲಿ = ಆದರೆಯಿಲ್ಲ ಏಕೆ ಆಗದೇ, ಆದರಿಲ್ಲಿ ಆಗುವುದು?

ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು.

ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು. ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು.

ಮೆನಯು + ಅನ್ನು = ಮೆನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು"

ಮಗುವು + ಅನ್ನು = ಮಗುವನ್ನು; ಉ ಕಾರ ಲೋಪ
ಆದೇಶ ಸಂಧಿ

ಸಂಧಿಯಾಗುವಾಗ ಸ್ವರದ ಮುಂದೆ ಕ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ ವ್ಯಂಜನಗಳು ಅಂದರೆ ಗ,ದ,ಬ ಗಳು ಆದೇಶವಾಗಿ ಬರುತ್ತವೆ.

ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ.

ಗಮನಿಸಿರಿ: ಈ ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ. ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ.

ಮಾದರಿ:

ಹೆರ್‍ + ದಾರಿ = ಹೆದ್ದಾರಿ

ಬೆಲೆ + ಪೆಣ್ಣು(ಹೆಣ್ಣು) = ಬೆಲೆವೆಣ್ಣು

ಮುಂದು + ಪರಿ( ಹರಿ ) = ಮುಂದುವರಿ

ಮುಂದು + ಪರೆ( ಹರೆ ) = ಮುಂದುವರೆ

ತಣ್ + ನೀರು = ತಣ್ಣೀರು

ಕಣ್ + ನೀರು = ಕಣ್ಣೀರು

ಭೂ + ತಾಯಿ = ಭೂದಾಯಿ ಅಲ್ಲ ಏಕೆ?

ಒರ್‍ + ಕೊರಲು = ಒಕ್ಕೊರಲು

ಒರ್‍ + ಕೂಟ = ಒಕ್ಕೂಟ

ಒರ್‍ + ಕೂಡು = ಒಗ್ಗೂಡು

ಹೆರ್‍ + ಪಾವು(ಹಾವು) = ಹೆಬ್ಬಾವು

ಕಿಸು + ಪೊೞಲು(ಹೊಳಲು) = ಕಿಸುವೊಳಲು

ಮೂರ್‍ + ಕಣ್ಣ = ಮುಕ್ಕಣ

ತಣ್ + ಗಾಳಿ = ತಂಗಾಳಿ; ಇಲ್ಲಿ 'ಣ್' ಕಾರಕ್ಕೆ 'ಞ್' ಕಾರ ಆದೇಶ

ಗಮನಿಸಿರಿ: ಕನ್ನಡದಲ್ಲಿ ಹೆಚ್ಚ ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು ಆರುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆರದು.
ಸಂಸ್ಕೃತ ಸಂಧಿಗಳು

ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು.

ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು. ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು.

ಎರಡು ಸಂಸ್ಕೃತದ ಪದಗಳ ಸೇರಿಕೆ.

* ಸವರ್ಣದೀರ್ಘ ಸಂಧಿ
* ಗುಣ ಸಂಧಿ
* ವೃದ್ಧಿ ಸಂಧಿ
* ಯಣ್ ಸಂಧಿ
* ಜಸ್ತ್ವ ಸಂಧಿ
* ಶ್ಚುತ್ವ ಸಂಧಿ
* ಷ್ಟುತ್ವ ಸಂಧಿ
* ಅನುನಾಸಿಕ ಸಂಧಿ
* ವಿಸರ್ಗ ಸಂಧಿ

C ಜೀವ ಸತ್ವ


C ಜೀವಸತ್ವ ಅಥವಾ L-ಆಸ್ಕೋರ್ಬಿಕ್ ಆಮ್ಲ ವು ಮಾನವರಲ್ಲಿ ಜೀವಸತ್ವವಾಗಿ ಕಾರ್ಯನಿರ್ವಹಿಸುವ ಅತ್ಯವಶ್ಯಕ ಪೌಷ್ಟಿಕಾಂಶವಾಗಿದೆ. ಆಸ್ಕೋರ್ಬೇಟ್ (ಆಸ್ಕೋರ್ಬಿಕ್ ಆಮ್ಲದ ಅಯಾನು) ಎಲ್ಲಾ ಪ್ರಾಣಿಗಳಲ್ಲಿ ಮತ್ತು ಸಸ್ಯಗಳಲ್ಲಿ ಚಯಾಪಚಯ ಕ್ರಿಯೆಗಳಿಗೆ ಅತ್ಯವಶ್ಯಕ. ಇದು ಸರಿಸುಮಾರು ಎಲ್ಲಾ ಜೀವಿಗಳಲ್ಲಿ ಆಂತರಿಕವಾಗಿ ಉತ್ಪತ್ತಿಯಾಗುತ್ತದೆ. ಆದರೆ ಗಮನಾರ್ಹವಾಗಿ ಹೆಚ್ಚಿನ ಸಸ್ತನಿಗಳು ಅಥವಾ ಕೈರೋಪ್ಟೆರಾ (ಬಾವಲಿಗಳು) ಗಣಗಳು ಮತ್ತು ಆಂಥ್ರೊಪೊಯಡಿಯ (ಹ್ಯಾಪ್ಲೋರಿನಿ) (ಕಾಡುಪಾಪ, ಮಂಗಗಳು ಮತ್ತು ವಾನರಗಳು) ಉಪಗಣಗಳು ಇದಕ್ಕೆ ಹೊರತಾಗಿದೆ. ಗಿನಿಇಲಿಗಳು, ಪಕ್ಷಿಗಳು ಮತ್ತು ಮೀನುಗಳ ಕೆಲವು ಜಾತಿಗಳಿಗೂ ಇದು ಅವಶ್ಯವಾಗಿದೆ. ಮಾನವರಲ್ಲಿ ಈ ಜೀವಸತ್ವದ ಕೊರತೆಯು ಸ್ಕರ್ವಿ ರೋಗವನ್ನು ಉಂಟುಮಾಡುತ್ತದೆ.[೧][೨][೩] ಇದನ್ನು ವ್ಯಾಪಕವಾಗಿ ಆಹಾರ ಸೇರ್ಪಡೆಯಾಗಿಯ‌ೂ ಬಳಸಲಾಗುತ್ತದೆ.[೪]


ಆಸ್ಕೋರ್ಬೇಟ್ ಅಯಾನು C ಜೀವಸತ್ವದ ಫಾರ್ಮಕೊಫೋರ್ ಆಗಿದೆ. ಸಜೀವಿಗಳಲ್ಲಿ ಆಸ್ಕೋರ್ಬೇಟ್ ಆಕ್ಸಿಡೀಕರಣದ ಒತ್ತಡದಿಂದ[೫] ದೇಹವನ್ನು ಸಂರಕ್ಷಿಸುತ್ತದೆ ಹಾಗೂ ಎಂಜೈಮ್‌ನಿಂದಾಗುವ ಅನೇಕ ಜೈವಿಕ ಕ್ರಿಯೆಗಳಲ್ಲಿ ಇದು ಸಹಾಯಕ ಅಂಶ (=ಕೊಫ್ಯಾಕ್ಟರ್)ವಾಗಿದೆ, ಆದ್ದರಿಂದ ಇದು ಆಕ್ಸಿಡೀಕರಣ-ವಿರೋಧಿಯಾಗಿದೆ.[೬]


ಸ್ಕರ್ವಿ ರೋಗವು ತುಂಬ ಹಿಂದಿನಿಂದಲೇ ತಿಳಿದುಬಂದಿರುವದಿರುವ ಕಾಯಿಲೆ. ಇದು ತಾಜಾ ಸಸ್ಯಾಹಾರದ ಕೊರತೆಯಿಂದ ಉಂಟಾಗುತ್ತದೆಂದು ಪ್ರಪಂಚದ ಹೆಚ್ಚಿನ ಭಾಗದ ಜನರು ತಿಳಿದಿದ್ದರು. ಸ್ಕರ್ವಿ ರೋಗವನ್ನು ತಡೆಗಟ್ಟಲು ಬ್ರಿಟಿಷ್ ನೌಕಾಪಡೆಯು 1795ರಲ್ಲಿ ನಾವಿಕರಿಗೆ ನಿಂಬೆರಸವನ್ನು ನೀಡಲು ಆರಂಭಿಸಿತು.[೭] ಆಸ್ಕೋರ್ಬಿಕ್ ಆಮ್ಲವನ್ನು ಅಂತಿಮವಾಗಿ 1933ರಲ್ಲಿ ಪ್ರತ್ಯೇಕಿಸಿ, 1934ರಲ್ಲಿ ಸಂಶ್ಲೇಷಿಸಲಾಯಿತು.

C ಜೀವಸತ್ವದ ಉಪಯೋಗಗಳು ಮತ್ತು ಅದನ್ನು ಪ್ರತಿನಿತ್ಯ ಸೇವಿಸಬೇಕಾದ ಪ್ರಮಾಣದ ನಿಖರತೆ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, RDI 45ರಿಂದ 95 ಮಿಗ್ರಾಂ/ದಿನಕ್ಕೆ ನಿಗದಿಪಡಿಸಿದೆ. ಅಧಿಕ ಪ್ರಮಾಣ ಸೇವಿಸಲು ಸಲಹೆ ನೀಡುವವರ ಪ್ರಮಾಣದಲ್ಲಿ ದಿನಕ್ಕೆ 200ನಿಂದ 2000 ಮಿಗ್ರಾಂ ತನಕದಷ್ಟು ವ್ಯತ್ಯಾಸವಿದೆ. ಒಟ್ಟು 232,606 ವ್ಯಕ್ತಿಗಳನ್ನು ಒಳಗೊಂಡ ಆಕ್ಸಿಡೀಕರಣ-ವಿರೋಧಿ ಕೊರತೆಯನ್ನು ಪೂರೈಸುವ ಬಗೆಗಿನ 68 ವಿಶ್ವಾಸಾರ್ಹ ಪ್ರಯೋಗಗಳ ಇತ್ತೀಚಿನ ವಿಶ್ಲೇಷಣೆಯು, ಹೆಚ್ಚುವರಿ ಪೂರೈಕೆಯಿಂದ ಆಸ್ಕೋರ್ಬೇಟ್ಅನ್ನು ಬಳಸುವುದು ಯೋಚಿಸಿದಷ್ಟು ಪ್ರಯೋಜನಕಾರಿಯಲ್ಲ ಎಂಬ ನಿರ್ಣಯಕ್ಕೆ ಬಂದಿದೆ.[೮]

ಜೈವಿಕ ಮಹತ್ವ

ಹೆಚ್ಚಿನ ಮಾಹಿತಿ: ascorbic acid

C ಜೀವಸತ್ವವು ಪೂರ್ತಿಯಾಗಿ ಆಸ್ಕೋರ್ಬೇಟ್‌ನ L-ಎನ್ಯಾಂಟಿಮರ್(=ಅಸಮ್ಮಿತ ಅಣುವೊಂದರ ಕನ್ನಡಿ ಪ್ರತಿಬಿಂಬ ರೂಪದ ಅಣು); ಅದಕ್ಕೆ ವಿರುದ್ಧವಾದ D-ಎನ್ಯಾಂಟಿಮರ್ ಯಾವುದೇ ದೈಹಿಕ ಮಹತ್ವವನ್ನು ಹೊಂದಿಲ್ಲ. ಎರಡು ಪ್ರಕಾರಗಳೂ ಒಂದೇ ಅಣು ರಚನೆಯ ದರ್ಪಣ ಪ್ರತಿಬಿಂಬದಂತಿವೆ. [[ಇಲೆಕ್ಟ್ರಾನ್‌(ಅಥವಾ ಹೈಡ್ರೋಜನ್)ಗಳನ್ನು ಕಳೆದುಕೊಳ್ಳುವ ಪ್ರಬಲ ಅಂಶ|ಇಲೆಕ್ಟ್ರಾನ್‌(ಅಥವಾ ಹೈಡ್ರೋಜನ್)ಗಳನ್ನು ಕಳೆದುಕೊಳ್ಳುವ ಪ್ರಬಲ ಅಂಶ]]ವಾದ L-ಆಸ್ಕೋರ್ಬೇಟ್, ಆ ಕ್ರಿಯೆ ಮುಗಿಸಿದ ನಂತರ L-ಡಿಹೈಡ್ರೊಆಸ್ಕೋರ್ಬೇಟ್ ಆಗಿ ಅದರ ಆಕ್ಸಿಡೀಕೃತ ರೂಪಕ್ಕೆ ಪರಿವರ್ತಿತವಾಗುತ್ತದೆ.[೬] L-ಡಿಹೈಡ್ರೊಆಸ್ಕೋರ್ಬೇಟ್ ನಂತರ ದೇಹದಲ್ಲಿ ಎಂಜೈಮ್‌ ಮತ್ತು ಗ್ಲುತಾತಿಯೋನ್‌ನಿಂದಾಗಿ ಹೈಡ್ರೋಜನ್ ಪಡೆದುಕೊಂಡು ಕ್ರಿಯಾತ್ಮಕ L-ಆಸ್ಕೋರ್ಬೇಟ್ ರೂಪಕ್ಕೆ ಬದಲಾಗುತ್ತದೆ.[೯] ಈ ಕ್ರಿಯೆ ನಡೆಯುವಾಗ ಸೆಮಿಡಿಹೈಡ್ರೊಆಸ್ಕೋರ್ಬಿಕ್ ಆಮ್ಲದ ರಾಡಿಕಲ್‌(=ಮೂಲಸ್ವರೂಪ) ಉತ್ಪತ್ತಿಯಾಗುತ್ತದೆ. ಆಸ್ಕೋರ್ಬೇಟ್ ರಹಿತ ರಾಡಿಕಲ್ ಆಮ್ಲಜನಕದೊಂದಿಗೆ ದುರ್ಬಲವಾಗಿ ಪ್ರತಿಕ್ರಯಿಸುತ್ತದೆ, ಆದ್ದರಿಂದ ಸೂಪರ್‌ಆಕ್ಸೈಡ್ ಉತ್ಪತ್ತಿಯಾಗುವುದಿಲ್ಲ. ಬದಲಿಗೆ ಎರಡು ಸೆಮಿಡಿಹೈಡ್ರೊಆಸ್ಕೋರ್ಬೇಟ್ ರಾಡಿಕಲ್‌ಗಳು ಪ್ರತಿಕ್ರಯಿಸಿ ಒಂದು ಆಸ್ಕೋರ್ಬೇಟ್ ಮತ್ತು ಇನ್ನೊಂದು ಡಿಹೈಡ್ರೊಆಸ್ಕೋರ್ಬೇಟ್ ಆಗುತ್ತದೆ. ಗ್ಲುಟಾಥಿಯೋನ್‌ನ ಸಹಾಯದಿಂದ ಡಿಹೈಡ್ರೋಕ್ಸಿಆಸ್ಕೋರ್ಬೇಟ್ ಮತ್ತೆ ಆಸ್ಕೋರ್ಬೇಟ್ ಆಗಿ ಬದಲಾಗುತ್ತದೆ.[೧೦] ಆಸ್ಕೋರ್ಬೇಟ್ ಅನ್ನು ಉಳಿಸಿ ರಕ್ತದ ಆಕ್ಸಿಡೀಕರಣ-ವಿರೋಧಿ ಸಾಮರ್ಥ್ಯವನ್ನು ಸುಧಾರಿಸುವ ಕಾರಣದಿಂದ ಗ್ಲುಟಾಥಿಯೋನ್‌ ಇರಬೇಕಾದ್ದು ಬಹುಮುಖ್ಯವಾಗಿದೆ.[೧೧] ಇದಿಲ್ಲದೆ ಡಿಹೈಡ್ರೋಕ್ಸಿಆಸ್ಕೋರ್ಬೇಟ್ ಮತ್ತೆ ಆಸ್ಕೋರ್ಬೇಟ್ ಆಗಿ ಪರಿವರ್ತನೆಯಾಗಲು ಸಾಧ್ಯವಿಲ್ಲ.


ರಚನಾತ್ಮಕವಾಗಿ ಗ್ಲುಕೋಸ್‌ಗೆ ಸಂಬಂಧಪಟ್ಟಿರುವ L-ಆಸ್ಕೋರ್ಬೇಟ್ ಒಂದು ದುರ್ಬಲ ಶರ್ಕರ ಆಮ್ಲ. ಇದು ನೈಸರ್ಗಿಕವಾಗಿ ಜಲಜನಕ ಅಯಾನಿನೊಂದಿಗೆ ಸೇರಿ ಆಸ್ಕೋರ್ಬಿಕ್ ಆಮ್ಲ ರೂಪದಲ್ಲಿ ಅಥವಾ ಲೋಹದ ಅಯಾನಿನೊಂದಿಗೆ ಜತೆಗೂಡಿ ಖನಿಜ ಆಸ್ಕೋರ್ಬೇಟ್ ರೂಪದಲ್ಲಿರುತ್ತದೆ.

ಕರ್ನಾಟಕ


ಕರ್ನಾಟಕ
ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.

"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.

ಕರ್ನಾಟಕವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳನಾಡುವಿನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.

೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.

ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.


ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು[೧] ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕ್ರತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ.

ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು ನಂದ ಸಾಮ್ರಾಜ್ಯದ ಭಾಗವಾಗಿದ್ದಿತ್ತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು.

ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರಶರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗು ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ.

ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ.ಶ.೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗು ಪೂರ್ವ ಚಾಲುಕ್ಯರ ವಿರುದ್ದ ನಿರಂತರ ಕಾಳಗದಲ್ಲಿರುತ್ತಿದ್ದರು

ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯವು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.

೧೫೬೫ರಲ್ಲಿ,ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು,ದಖನ್ ಪ್ರದೇಶವನ್ನು ಆಳುತ್ತಿದ್ದರು. ೧೭ನೆಯ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲ್ ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗು ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು.

ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟೀಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗು ಬ್ರಿಟೀಷ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.

ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವ ರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸ ರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.

ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.

ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.ದ


ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:

* ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
* ಮಲೆನಾಡು - ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
* ಬಯಲು ಸೀಮೆ - ದಖ್ಖನ್ ಪ್ರಸ್ತಭೂಮಿ(ಅಥವಾ ದಕ್ಷಿಣ ಪ್ರಸ್ಥ ಭೂಮಿ), ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ.

ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ.(೬೩೨೯ ಅಡಿಗಳು))


ಕರ್ನಾಟಕದ ಜಿಲ್ಲೆಗಳು

ಒಟ್ಟು ೩೦ ಜಿಲ್ಲೆಗಳು


1. ಬಾಗಲಕೋಟೆ
2. ಬೆಂಗಳೂರು
3. ಬೆಂಗಳೂರು ಗ್ರಾಮೀಣ
4. ಬೆಳಗಾವಿ
5. ಬಳ್ಳಾರಿ
6. ಬೀದರ್
7. ಬಿಜಾಪುರ
8. ಚಾಮರಾಜನಗರ
9. ಚಿಕ್ಕಮಗಳೂರು
10. ಚಿತ್ರದುರ್ಗ
11. ದಕ್ಷಿಣ ಕನ್ನಡ
12. ದಾವಣಗೆರೆ
13. ಧಾರವಾಡ
14. ಗದಗ್
15. ಗುಲ್ಬರ್ಗ
16. ಹಾಸನ
17. ಹಾವೇರಿ
18. ಕೊಡಗು
19. ಕೋಲಾರ
20. ಕೊಪ್ಪಳ
21. ಮಂಡ್ಯ
22. ಮೈಸೂರು
23. ರಾಯಚೂರು
24. ಶಿವಮೊಗ್ಗ
25. ತುಮಕೂರು
26. ಉಡುಪಿ
27. ಉತ್ತರ ಕನ್ನಡ
28. ರಾಮನಗರ
29. ಯಾದಗಿರಿ
30. ಚಿಕ್ಕಬಳ್ಳಾಪುರ

೨೦೦೧ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು ೫೨,೮೫೦,೫೬೨ ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ ೨೬,೮೯೮,೯೧೮(೫೦.೮೯%) ಹಾಗು ಸ್ತೀಯರ ಸಂಖ್ಯೆ ೨೫,೯೫೧,೬೪೪(೪೯.೧೧%) ಅಂದರೆ ಪ್ರತಿ ೧೦೦೦ ಪುರುಷರಿಗೆ ೯೬೪ ಸ್ತೀಯರು. ೧೯೯೧ರ ಜನಸಂಖ್ಯೆಕ್ಕಿಂತ ೨೦೦೧ರ ಜನಸಂಖ್ಯೆ ೧೭.೨೫%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು ೨೭೫.೬/ಚ.ಕಿಮೀ.ರಷ್ಟಿದೆ ಹಾಗು ನಗರಪ್ರದೇಶಗಳಲ್ಲಿ ೩೩.೯೮%ರಷ್ಟು ಜನ ವಾಸಿಸುತ್ತಾರೆ.

ಸಾಕ್ಷರತೆಯು ೬೬.೬%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು ೭೬.೧% ಮತ್ತು ಸ್ತೀಯರ ಸಾಕ್ಷರತೆಯು ೫೬.೯%ರಷ್ಟಿದೆ.

ಜನಸಂಖ್ಯೆಯ ೮೩% ಹಿಂದುಗಳು, ೧೧% ಮುಸಲ್ಮಾನರು, ೪% ಕ್ರೈಸ್ತ ಧರ್ಮದವರು, ೦.೭೮% ಜೈನರು, ೦.೭೩% ಬುದ್ಧ ಧರ್ಮದವರು ಮತ್ತು ಉಳಿದವರು ಅನ್ಯ ಧರ್ಮದವರು.

ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು ೬೪.೭೫%ರಷ್ಟು ಜನರ ಮಾತೃಭಾಷೆಯಾಗಿದೆ. ೧೯೯೧ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ ೯.೭೨‍% ಉರ್ದು, ೮.೩೪% ತೆಲುಗು, ೫.೪೬% ತಮಿಳು, ೩.೯೫% ಮರಾಠಿ, ೩.೩೮% ತುಳು, ೧.೮೭% ಹಿಂದಿ, ೧.೭೮% ಕೊಂಕಣಿ, ೧.೬೯% ಮಲಯಾಳಂ ಮತ್ತು ೦.೨೫% ಕೊಡವ ತಕ್‌ ಮಾತಾಡುವ ಜನರಿದ್ದರು.

ಕರ್ನಾಟಕದ ಜನನ ದರವು ೧೯.೯(ಪ್ರತಿ ಸಾವಿರ ಜನರಿಗೆ), ಮೃತ್ಯು ದರವು ೭.೩(ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು ೪೭(ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು(ಜನನ ಸಮಯದ) ದರವು ೨೧೩(ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು(ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) ೨.೧ ಆಗಿದೆ.[೩


ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು:

* ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ.
* ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು.

ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.

shanker nag



chitradurga

ಇತಿಹಾಸದಲ್ಲಿ ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.

ವಿಜಯನಗರದ ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ ಮದಕರಿ ನಾಯಕ. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗುದುಕೊಂದನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.

ಇಸಿಲಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.

ಸಿದ್ಧಾಪುರ ಇಲ್ಲಿ ಅಶೋಕನ ಶಾಸನ ದೊರಕಿದೆ.
ಒನಕೆ ಓಬವ್ವ
ಓಬವ್ವನ ಕಿಂಡಿ, ಚಿತ್ರದುರ್ಗದ ಕೋಟೆ.

ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ ಕಾವಲುಗಾರನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ [www.chitharadurga.com]

ಚಿತ್ರದುರ್ಗದ ಪ್ರಮುಖ ಪ್ರವಾಸಿ ಸ್ಥಳಗಳು

* ಏಳು ಸುತ್ತಿನ ಕೋಟೆ
* ಚ೦ದ್ರವಳ್ಳಿ ತೊಟ
* ಮುರುಘಾ ಮಠ
* ಉಪ್ಪಾರಹಟ್ಟಿ

ಜಿಲ್ಲೆಯೆ ತಾಲ್ಲೂಕುಗಳು

* ಚಿತ್ರದುರ್ಗ
* ಹಿರಿಯೂರು
* ಚಳ್ಳಕೆರೆ
* ಮೊಳಕಾಲ್ಮೂರು
* ಹೊಸದುರ್ಗ
* ಹೊಳಲ್ಕೆರೆ

ಪ್ರಮುಖ ವ್ಯಕ್ತಿಗಳು

* ಬೆಳಗೆರೆ ಕೃಷ್ಣಶಾಸ್ತ್ರಿ
* ಬೆಳಗೆರೆ ಜಾನಕಮ್ಮ
* ಡಾ.ಶಿವಮೂರ್ತಿ ಸ್ವಾಮಿಜಿ.ಸಿರಿಗೆರೆ
* ಎಸ್. ನಿಜಲಿಂಗಪ್ಪ
* ಶಿವಮೂರ್ತಿ ಶರಣರು
* ಪ್ರೊ. ಬಿ ರಾಜಶೇಖರಪ್ಪ
* ಬಿ.ಎಲ್.ವೇಣು
* ಜಿ.ದುರ್ಗಪ್ಪ
* ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು (ತಿರುಕ)
* ತ.ರಾ.ಸು
* ಪಿ.ಆರ್.ತಿಪ್ಪೇಸ್ವಾಮಿ

* ಸಿರಿಯಜ್ಜಿ
* ಡಾ.ಬಂಜಗೆರೆ ಜಯಪ್ರಕಾಶ್
* ಟಿ ಎಸ್ ವೆಂಕಣ್ಣಯ್ಯ
* ಡೊಟಾ ರಾಮ
* ಡಾ.ಎಚ್.ಆರ್.ಚಂದ್ರಶೇಖರ್