ಫೆಬ್ರ 15, 2011

C ಜೀವ ಸತ್ವ


C ಜೀವಸತ್ವ ಅಥವಾ L-ಆಸ್ಕೋರ್ಬಿಕ್ ಆಮ್ಲ ವು ಮಾನವರಲ್ಲಿ ಜೀವಸತ್ವವಾಗಿ ಕಾರ್ಯನಿರ್ವಹಿಸುವ ಅತ್ಯವಶ್ಯಕ ಪೌಷ್ಟಿಕಾಂಶವಾಗಿದೆ. ಆಸ್ಕೋರ್ಬೇಟ್ (ಆಸ್ಕೋರ್ಬಿಕ್ ಆಮ್ಲದ ಅಯಾನು) ಎಲ್ಲಾ ಪ್ರಾಣಿಗಳಲ್ಲಿ ಮತ್ತು ಸಸ್ಯಗಳಲ್ಲಿ ಚಯಾಪಚಯ ಕ್ರಿಯೆಗಳಿಗೆ ಅತ್ಯವಶ್ಯಕ. ಇದು ಸರಿಸುಮಾರು ಎಲ್ಲಾ ಜೀವಿಗಳಲ್ಲಿ ಆಂತರಿಕವಾಗಿ ಉತ್ಪತ್ತಿಯಾಗುತ್ತದೆ. ಆದರೆ ಗಮನಾರ್ಹವಾಗಿ ಹೆಚ್ಚಿನ ಸಸ್ತನಿಗಳು ಅಥವಾ ಕೈರೋಪ್ಟೆರಾ (ಬಾವಲಿಗಳು) ಗಣಗಳು ಮತ್ತು ಆಂಥ್ರೊಪೊಯಡಿಯ (ಹ್ಯಾಪ್ಲೋರಿನಿ) (ಕಾಡುಪಾಪ, ಮಂಗಗಳು ಮತ್ತು ವಾನರಗಳು) ಉಪಗಣಗಳು ಇದಕ್ಕೆ ಹೊರತಾಗಿದೆ. ಗಿನಿಇಲಿಗಳು, ಪಕ್ಷಿಗಳು ಮತ್ತು ಮೀನುಗಳ ಕೆಲವು ಜಾತಿಗಳಿಗೂ ಇದು ಅವಶ್ಯವಾಗಿದೆ. ಮಾನವರಲ್ಲಿ ಈ ಜೀವಸತ್ವದ ಕೊರತೆಯು ಸ್ಕರ್ವಿ ರೋಗವನ್ನು ಉಂಟುಮಾಡುತ್ತದೆ.[೧][೨][೩] ಇದನ್ನು ವ್ಯಾಪಕವಾಗಿ ಆಹಾರ ಸೇರ್ಪಡೆಯಾಗಿಯ‌ೂ ಬಳಸಲಾಗುತ್ತದೆ.[೪]


ಆಸ್ಕೋರ್ಬೇಟ್ ಅಯಾನು C ಜೀವಸತ್ವದ ಫಾರ್ಮಕೊಫೋರ್ ಆಗಿದೆ. ಸಜೀವಿಗಳಲ್ಲಿ ಆಸ್ಕೋರ್ಬೇಟ್ ಆಕ್ಸಿಡೀಕರಣದ ಒತ್ತಡದಿಂದ[೫] ದೇಹವನ್ನು ಸಂರಕ್ಷಿಸುತ್ತದೆ ಹಾಗೂ ಎಂಜೈಮ್‌ನಿಂದಾಗುವ ಅನೇಕ ಜೈವಿಕ ಕ್ರಿಯೆಗಳಲ್ಲಿ ಇದು ಸಹಾಯಕ ಅಂಶ (=ಕೊಫ್ಯಾಕ್ಟರ್)ವಾಗಿದೆ, ಆದ್ದರಿಂದ ಇದು ಆಕ್ಸಿಡೀಕರಣ-ವಿರೋಧಿಯಾಗಿದೆ.[೬]


ಸ್ಕರ್ವಿ ರೋಗವು ತುಂಬ ಹಿಂದಿನಿಂದಲೇ ತಿಳಿದುಬಂದಿರುವದಿರುವ ಕಾಯಿಲೆ. ಇದು ತಾಜಾ ಸಸ್ಯಾಹಾರದ ಕೊರತೆಯಿಂದ ಉಂಟಾಗುತ್ತದೆಂದು ಪ್ರಪಂಚದ ಹೆಚ್ಚಿನ ಭಾಗದ ಜನರು ತಿಳಿದಿದ್ದರು. ಸ್ಕರ್ವಿ ರೋಗವನ್ನು ತಡೆಗಟ್ಟಲು ಬ್ರಿಟಿಷ್ ನೌಕಾಪಡೆಯು 1795ರಲ್ಲಿ ನಾವಿಕರಿಗೆ ನಿಂಬೆರಸವನ್ನು ನೀಡಲು ಆರಂಭಿಸಿತು.[೭] ಆಸ್ಕೋರ್ಬಿಕ್ ಆಮ್ಲವನ್ನು ಅಂತಿಮವಾಗಿ 1933ರಲ್ಲಿ ಪ್ರತ್ಯೇಕಿಸಿ, 1934ರಲ್ಲಿ ಸಂಶ್ಲೇಷಿಸಲಾಯಿತು.

C ಜೀವಸತ್ವದ ಉಪಯೋಗಗಳು ಮತ್ತು ಅದನ್ನು ಪ್ರತಿನಿತ್ಯ ಸೇವಿಸಬೇಕಾದ ಪ್ರಮಾಣದ ನಿಖರತೆ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, RDI 45ರಿಂದ 95 ಮಿಗ್ರಾಂ/ದಿನಕ್ಕೆ ನಿಗದಿಪಡಿಸಿದೆ. ಅಧಿಕ ಪ್ರಮಾಣ ಸೇವಿಸಲು ಸಲಹೆ ನೀಡುವವರ ಪ್ರಮಾಣದಲ್ಲಿ ದಿನಕ್ಕೆ 200ನಿಂದ 2000 ಮಿಗ್ರಾಂ ತನಕದಷ್ಟು ವ್ಯತ್ಯಾಸವಿದೆ. ಒಟ್ಟು 232,606 ವ್ಯಕ್ತಿಗಳನ್ನು ಒಳಗೊಂಡ ಆಕ್ಸಿಡೀಕರಣ-ವಿರೋಧಿ ಕೊರತೆಯನ್ನು ಪೂರೈಸುವ ಬಗೆಗಿನ 68 ವಿಶ್ವಾಸಾರ್ಹ ಪ್ರಯೋಗಗಳ ಇತ್ತೀಚಿನ ವಿಶ್ಲೇಷಣೆಯು, ಹೆಚ್ಚುವರಿ ಪೂರೈಕೆಯಿಂದ ಆಸ್ಕೋರ್ಬೇಟ್ಅನ್ನು ಬಳಸುವುದು ಯೋಚಿಸಿದಷ್ಟು ಪ್ರಯೋಜನಕಾರಿಯಲ್ಲ ಎಂಬ ನಿರ್ಣಯಕ್ಕೆ ಬಂದಿದೆ.[೮]

ಜೈವಿಕ ಮಹತ್ವ

ಹೆಚ್ಚಿನ ಮಾಹಿತಿ: ascorbic acid

C ಜೀವಸತ್ವವು ಪೂರ್ತಿಯಾಗಿ ಆಸ್ಕೋರ್ಬೇಟ್‌ನ L-ಎನ್ಯಾಂಟಿಮರ್(=ಅಸಮ್ಮಿತ ಅಣುವೊಂದರ ಕನ್ನಡಿ ಪ್ರತಿಬಿಂಬ ರೂಪದ ಅಣು); ಅದಕ್ಕೆ ವಿರುದ್ಧವಾದ D-ಎನ್ಯಾಂಟಿಮರ್ ಯಾವುದೇ ದೈಹಿಕ ಮಹತ್ವವನ್ನು ಹೊಂದಿಲ್ಲ. ಎರಡು ಪ್ರಕಾರಗಳೂ ಒಂದೇ ಅಣು ರಚನೆಯ ದರ್ಪಣ ಪ್ರತಿಬಿಂಬದಂತಿವೆ. [[ಇಲೆಕ್ಟ್ರಾನ್‌(ಅಥವಾ ಹೈಡ್ರೋಜನ್)ಗಳನ್ನು ಕಳೆದುಕೊಳ್ಳುವ ಪ್ರಬಲ ಅಂಶ|ಇಲೆಕ್ಟ್ರಾನ್‌(ಅಥವಾ ಹೈಡ್ರೋಜನ್)ಗಳನ್ನು ಕಳೆದುಕೊಳ್ಳುವ ಪ್ರಬಲ ಅಂಶ]]ವಾದ L-ಆಸ್ಕೋರ್ಬೇಟ್, ಆ ಕ್ರಿಯೆ ಮುಗಿಸಿದ ನಂತರ L-ಡಿಹೈಡ್ರೊಆಸ್ಕೋರ್ಬೇಟ್ ಆಗಿ ಅದರ ಆಕ್ಸಿಡೀಕೃತ ರೂಪಕ್ಕೆ ಪರಿವರ್ತಿತವಾಗುತ್ತದೆ.[೬] L-ಡಿಹೈಡ್ರೊಆಸ್ಕೋರ್ಬೇಟ್ ನಂತರ ದೇಹದಲ್ಲಿ ಎಂಜೈಮ್‌ ಮತ್ತು ಗ್ಲುತಾತಿಯೋನ್‌ನಿಂದಾಗಿ ಹೈಡ್ರೋಜನ್ ಪಡೆದುಕೊಂಡು ಕ್ರಿಯಾತ್ಮಕ L-ಆಸ್ಕೋರ್ಬೇಟ್ ರೂಪಕ್ಕೆ ಬದಲಾಗುತ್ತದೆ.[೯] ಈ ಕ್ರಿಯೆ ನಡೆಯುವಾಗ ಸೆಮಿಡಿಹೈಡ್ರೊಆಸ್ಕೋರ್ಬಿಕ್ ಆಮ್ಲದ ರಾಡಿಕಲ್‌(=ಮೂಲಸ್ವರೂಪ) ಉತ್ಪತ್ತಿಯಾಗುತ್ತದೆ. ಆಸ್ಕೋರ್ಬೇಟ್ ರಹಿತ ರಾಡಿಕಲ್ ಆಮ್ಲಜನಕದೊಂದಿಗೆ ದುರ್ಬಲವಾಗಿ ಪ್ರತಿಕ್ರಯಿಸುತ್ತದೆ, ಆದ್ದರಿಂದ ಸೂಪರ್‌ಆಕ್ಸೈಡ್ ಉತ್ಪತ್ತಿಯಾಗುವುದಿಲ್ಲ. ಬದಲಿಗೆ ಎರಡು ಸೆಮಿಡಿಹೈಡ್ರೊಆಸ್ಕೋರ್ಬೇಟ್ ರಾಡಿಕಲ್‌ಗಳು ಪ್ರತಿಕ್ರಯಿಸಿ ಒಂದು ಆಸ್ಕೋರ್ಬೇಟ್ ಮತ್ತು ಇನ್ನೊಂದು ಡಿಹೈಡ್ರೊಆಸ್ಕೋರ್ಬೇಟ್ ಆಗುತ್ತದೆ. ಗ್ಲುಟಾಥಿಯೋನ್‌ನ ಸಹಾಯದಿಂದ ಡಿಹೈಡ್ರೋಕ್ಸಿಆಸ್ಕೋರ್ಬೇಟ್ ಮತ್ತೆ ಆಸ್ಕೋರ್ಬೇಟ್ ಆಗಿ ಬದಲಾಗುತ್ತದೆ.[೧೦] ಆಸ್ಕೋರ್ಬೇಟ್ ಅನ್ನು ಉಳಿಸಿ ರಕ್ತದ ಆಕ್ಸಿಡೀಕರಣ-ವಿರೋಧಿ ಸಾಮರ್ಥ್ಯವನ್ನು ಸುಧಾರಿಸುವ ಕಾರಣದಿಂದ ಗ್ಲುಟಾಥಿಯೋನ್‌ ಇರಬೇಕಾದ್ದು ಬಹುಮುಖ್ಯವಾಗಿದೆ.[೧೧] ಇದಿಲ್ಲದೆ ಡಿಹೈಡ್ರೋಕ್ಸಿಆಸ್ಕೋರ್ಬೇಟ್ ಮತ್ತೆ ಆಸ್ಕೋರ್ಬೇಟ್ ಆಗಿ ಪರಿವರ್ತನೆಯಾಗಲು ಸಾಧ್ಯವಿಲ್ಲ.


ರಚನಾತ್ಮಕವಾಗಿ ಗ್ಲುಕೋಸ್‌ಗೆ ಸಂಬಂಧಪಟ್ಟಿರುವ L-ಆಸ್ಕೋರ್ಬೇಟ್ ಒಂದು ದುರ್ಬಲ ಶರ್ಕರ ಆಮ್ಲ. ಇದು ನೈಸರ್ಗಿಕವಾಗಿ ಜಲಜನಕ ಅಯಾನಿನೊಂದಿಗೆ ಸೇರಿ ಆಸ್ಕೋರ್ಬಿಕ್ ಆಮ್ಲ ರೂಪದಲ್ಲಿ ಅಥವಾ ಲೋಹದ ಅಯಾನಿನೊಂದಿಗೆ ಜತೆಗೂಡಿ ಖನಿಜ ಆಸ್ಕೋರ್ಬೇಟ್ ರೂಪದಲ್ಲಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ