ಮಾರ್ಚ್ 28, 2012

‘ಕನ್ನಡ ಹಾಸ್ಯ’

‘ಕನ್ನಡ ಹಾಸ್ಯ’ »» ಸೊಳ್ಳೆ ಕಾಟ ತಡೆಯಲಾರದೆ ಬೂಬಣ್ಣ ಮಂಚದ ಕೆಳಗೆ ಮಲಗಿದ. ಆಗ ಅಲ್ಲಿಗೆ ಬಂದ ಮಿಂಚು ಹುಳವ ನೋಡಿ, ಸೊಳ್ಳೆ ಅಂದುಕೊಂಡು, "ಅಯ್ಯೋ ಪಾಪಿ! ಬ್ಯಾಟರಿ ತಗೊಂಡು ಇಲ್ಲಿಗೂ ಬಂದ್ಯಾ ನೀನು!!" »» ಹುಡುಗ: ಐ ಲವ್ ಯೂ ಕಣ್ರೀ… ಹುಡುಗಿ (ಗುರ್ರಾಯಿಸುತ್ತ): ನನ್ನ ಚಪ್ಪಲಿ ಸೈಜ಼್ ಗೊತ್ತಾ… ಹುಡುಗ: ಛೇ! ಏನ್ ಹುಡ್ಗೀರಪ್ಪಾ… ಐ ಲವ್ ಯೂ ಅಂದ್ರೆ ಸಾಕು, ಗಿಫ್ಟ್ ಕೇಳೋಕೆ ಶುರು ಮಾಡ್ತಾರೆ… »» ವೈದ್ಯ: ನಿಮ್ಮ ದೇಹದಲ್ಲಿ ೨೬೫ ಮೂಳೆಗಳಿವೆ.. ಬೂಬಣ್ಣ: ಮೆತ್ತಗೆ ಹೇಳೊ! ಹಿಂದ್ಗಡೆ ನನ್ನ ನಾಯಿ ಕುಳಿತಿದೆ.. »» ಒಂದು ಬೋರ್ಡ್ ಹೀಗಿತ್ತು: ಬನಾರಸ್ ಸೀರೆ- ರೂ.10 ನೈಲಾನ್ ಸೀರೆ- ರೂ.8 ಕಾಟನ್ ಸೀರೆ- ರೂ 5 ಇದನ್ನು ನೋಡಿದ ಹೆಂಗಸೊಬ್ಬಳು, ತನ್ನ ಗಂಡನ ಬಳಿ: ರೀ, ಐನೂರು ರೂಪಾಯಿ ಕೊಡಿ. ನಾನು ಐವತ್ತು ಸೀರೆ ತಗೊಂಡು ಬರ್ತೀನಿ.. ಗಂಡ: ಲೇ, "ಇಸ್ತ್ರೀ ಅಂಗಡಿ" ಕಣೇ ಅದು!! »» ವೈದ್ಯ: ನೀವು ನಿಮ್ಮ ಮಿತ್ರನನ್ನು ಒಂದು ಘಂಟೆ ಮೊದಲೇ ಆಸ್ಪತ್ರೆಗೆ ತಂದಿದ್ದರೆ ಆತ ಉಳಿಯುತ್ತಿದ್ದ… ಮಿತ್ರ (ಸಿಟ್ಟಿನಿಂದ): ಲೋ ಗೂಬೆ, ಅಪಘಾತ ಆಗಿ ಅರ್ಧ ಘಂಟೆ ಅಷ್ಟೇ ಆಯ್ತು… »» ಹೆಂಡತಿ ಗಂಡನಿಗೆ ವ್ಯಾಕರಣ ಕಲಿಸುತ್ತಿದ್ದಳು: "ನಾನು ಸುಂದರವಾಗಿದ್ದೇನೆ." ಇದು ಯಾವ ಕಾಲ? ಗಂಡ: ಭೂತಕಾಲ… »» ಪಾಶ್ಚಾತ್ಯ ಜೀವನಶೈಲಿಯ ದುಷ್ಪರಿಣಾಮಗಳು: ಹೆಂಡತಿ ಓಡೋಡಿ ಬಂದು, ಗಂಡನ ಬಳಿ: ರ್ರೀ!!! ಬೇಗ ಬನ್ರೀ.. "ನಿಮ್ಮ" ಮಕ್ಕಳು ಹಾಗೂ "ನನ್ನ" ಮಕ್ಕಳು ಸೇರಿಕೊಂಡು "ನಮ್ಮ" ಮಕ್ಕಳನ್ನು ಹೊಡೆಯುತ್ತಿದ್ದಾರೆ… »» ಹುಡುಗ: ಹುಡುಗರ ಹೃದಯ ದೇಗುಲದಷ್ಟು ಪವಿತ್ರವಾದುದು… ಹುಡುಗಿ: ಅದು ಹೇಗೆ? ಹುಡುಗ: ಐ ಲವ್ ಯೂ ಅಂದಾಕ್ಷಣ ಚಪ್ಪಲಿ ತೆಗೀತೀರಲ್ಲಾ.. ಅದಕ್ಕೆ »» ಅಂದು ಬೂಬಣ್ಣ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು.. ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ… ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ… »» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ.. ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ? ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ.. »» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ.. ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು.. ಬೂಬಣ್ಣ: ಸುಮ್ನೆ ಬೋಗಳೆ ಬಿಡಬೇಡ! ಈಗಿನ್ನೂ ೨೦೦೯ (2009)! »» ಒಮ್ಮೆ ಬೂಬಣ್ಣನಿಗೊಂದು ಚಿಕ್ಕ ಹೊಟ್ಟೆಯ ಆಪರೇಷನ್ ಆಯ್ತು. ಅವನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮೊದಲು, ವೈದ್ಯರು(doctor) ಇನ್ನೊಂದು ಕ್ಷ-ಕಿರಣ ತಪಾಸಣೆಗೊಳಪಡಿಸಿದರು(x-ray test). ಆಗ ವೈದ್ಯರಿಗೆ ತಮ್ಮ ಕೈಗವಸು(gloves) ಇನ್ನೂ ಬೂಬಣ್ಣನ ಹೊಟ್ಟೆಯೊಳಗೇ ಇರುವ ಸಂಗತಿ ತಿಳಿಯಿತು! ವೈದ್ಯರು(ಈ ವಿಷಯ ಬೂಬಣ್ಣನಿಗೆ ತಿಳಿಸುತ್ತಾ..): ಬೂಬಣ್ಣ! ಈ ತಪ್ಪಿಗಾಗಿ ಕ್ಷಮಿಸು. ಅದನ್ನು ಹೊರತೆಗೆಯಲು ಇನ್ನೊಂದು ಚಿಕ್ಕ ಆಪರೇಷನ್ ಮಾಡಬೇಕಾಗಿದೆ… ಬೂಬಣ್ಣ: ಅಯ್ಯೋ! ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ?! ಈ ಹಣ ತಗೊಂಡು ಒಂದು ಹೊಸಾ ಕೈಗವಸು ಕೊಂಡುಕೊಳ್ಳಿ… »» ಬೂಬಣ್ಣ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ! ರಾಮಣ್ಣ: ನಿಜವಾಗಿಯೂ?! ಏನದರ ಹೆಸರು? ಬೂಬಣ್ಣ: "ಮೀಯಾಂವ್"! »» ರಾಮಣ್ಣ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ? ಬೂಬಣ್ಣ: ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?! »» ರಾಮಣ್ಣ: ಬರಲೇ ಬೂಬಣ್ಣ, ನಾನು ಹಂಪನಕಟ್ಟೆಯಲ್ಲಿ ಬಸ್ಸು ಹಿಡಿದು ಹೋಗುತ್ತೇನೆ… ಬೂಬಣ್ಣ: ಅದನ್ನು ಹಿಡಿಯಲು ಹೇಗೆ ಸಾಧ್ಯ?! ಬಸ್ಸುಗಳು ನಿನಗಿಂತ ತುಂಬಾ ದೊಡ್ಡ ಹಾಗೂ ಭಾರ ಇರುತ್ತವೆ.. »» ಬೂಬಣ್ಣ ಚಿಕ್ಕವನಿರುವಾಗ, ದೀಪಾವಳಿ ಸಮಯದಲ್ಲಿ ತನ್ನ ಅಮ್ಮನ ಜೊತೆಯಲ್ಲಿ ಖರೀದಿಗೆ ಹೊರಟಾಗ… ಚಿಕ್ಕ ಬೂಬಣ್ಣ: ಅಮ್ಮಾ! ಅಮ್ಮಾ!.. ನಂಗೆ ಆ ಕೆಂಪು ಬಣ್ಣದ ದೊಡ್ಡ ಪಟಾಕಿ ಬೇಕು! ಅದ್ರಿಂದ ದೊಡ್ಡ ಸದ್ದಾಗುತ್ತದೆ.. ನಂಗದೇ ಬೇಕು!.. ಅಮ್ಮ: ಏನು.. ..!!!!.. ಅಯ್ಯೊ! ದೇವರೇ!! ಮೂರ್ಖಾ! ಅದು ದೊಡ್ಡ ಪಟಾಕಿಯಲ್ಲ, ಗ್ಯಾಸ್ ಸಿಲಿಂಡರು!! »» ಚಿಕ್ಕವನಾಗಿದ್ದಾಗ, ಬೂಬಣ್ಣನಿಗೊಮ್ಮೆ ಒಂದು ಹುಲಿಮರಿ ಸಿಕ್ಕಿತು. ಅದನ್ನು ಹಿಡಿದುಕೊಂಡು ತನ್ನ ತಂದೆಯ ಬಳಿ ತಂದನು.. ಬೂಬಣ್ಣ: ಅಪ್ಪಾ! ನಂಗಿದು ದಾರಿಯಲ್ಲಿ ಸಿಕ್ಕಿತು. ಏನು ಮಾಡಲಿ? ಅಪ್ಪ(ಹೆದರಿಕೊಂಡು): ಅದನ್ನು ಈಗಲೇ ಮೃಗಾಲಯಕ್ಕೆ(zoo) ಕರೆದುಕೊಂಡು ಹೊಗು! ಮರುದಿನ ಬೂಬಣ್ಣನ ಅಪ್ಪ ನೋಡಿದ್ರೆ, ಆ ಹುಲಿಮರಿಯು ಇನ್ನೂ ಬೂಬಣ್ಣನ ಬಳಿಯೇ ಇತ್ತು! ಅಪ್ಪ: ನಿನಗೆ ಹೇಳಿದ್ರೆ ಭಾಷೆ ಇಲ್ಲವೇ?! ಅದನ್ನು ನಿನ್ನೆಯೇ ಮೃಗಾಲಯಕ್ಕೆ ಕರೆದುಕೊಂಡು ಹೋಗೆಂದು ಹೇಳಿದ್ದೆನಲ್ಲಾ.. ಬೂಬಣ್ಣ: ಆದ್ರೆ ಅಪ್ಪಾ! ನೀನು ಹೇಳಿದ ಹಾಗೆಯೇ ನಿನ್ನೆ ಮೃಗಾಲಯಕ್ಕೆ ಅದನ್ನು ಕೊಂಡೊಯ್ದಿದ್ದೆ.. ಇವತ್ತು ಅದನ್ನು ತಿರುಗಾಡಿಸಲು ಒಂದು ಸಿನಿಮಾಕ್ಕೆ ಕರೆದುಕೊಂಡು ಹೋಗೋಣ ಅಂತಿದ್ದೇನೆ.. »» ಚಿಕ್ಕವನಾಗಿದ್ದಾಗ, ಒಮ್ಮೆ ಬೂಬಣ್ಣ ತನ್ನ ತಂದೆಯೊಡನೆ ಊಟ ಮಾಡುತ್ತಿದ್ದನು… ಬೂಬಣ್ಣ: ಅಪ್ಪಾ! ಒಂದು ವಿಷಯ… ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು! ಬೂಬಣ್ಣ: ಆದ್ರೆ ಅಪ್ಪಾ!… ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು! ಮತ್ತೆ ಬೂಬಣ್ಣ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ… ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು? ಬೂಬಣ್ಣ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು… »» ಚೋಮಣ್ಣ: ಬೂಬಣ್ಣ! ಸೆಖೆ ಆದಾಗ ಏನು ಮಾಡುವುದು? ಬೂಬಣ್ಣ: ಹವಾನಿಯಂತ್ರಕದ(air conditioner) ಎದುರು ಕುಳಿತುಬಿಡು. ಚೋಮಣ್ಣ: ಇನ್ನೂ ಹೆಚ್ಚಿಗೆ ಸೆಖೆ ಆದರೆ….? ಬೂಬಣ್ಣ: ಆಗ ಹವಾನಿಯಂತ್ರಕವನ್ನು ಚಾಲೂ (on) ಮಾಡು… »» ರೋಗಿ: ನನಗೆ ಬಸ್ಸಿನಲ್ಲಿ ಕುಳಿತ ಕೂಡಲೇ ನಿದ್ರೆ ಬರುತ್ತದೆ… ವೈದ್ಯ: ಅದಕ್ಕೇನೀಗ? ಚೆನ್ನಾಗಿ ನಿದ್ರೆ ಮಾಡಿ. ಏನು ಗೊರಕೆ ಸಮಸ್ಯೆನಾ? ರೋಗಿ: ಪೂರ್ತಿ ಕೇಳಿಸ್ಕೊಳ್ಳಿ ಸಾರ್. ಗೊರಕೆ ಗಿರಕೆ ಆಮೇಲಾಯ್ತು ಬಿಡಿ, ಆ ಬಸ್ಸಿನ ಚಾಲಕ* (driver) ನಾನೇ! »» ಬೂಬಣ್ಣ: ಸ್ವಾಮೀಜಿ! ನಾನು ಏನೂ ಕೆಲಸ ಮಾಡುವ ಅಗತ್ಯವಿಲ್ಲದೇ ಇರೋ ನೌಕರಿ ಯಾವುದಿದೆ? ಅದರಲ್ಲಿ ಬೇರೆಯವರೇ ಕೆಲಸ ಮಾಡಬೇಕು, ಆದರೆ ಹಣ ನನಗೆ ಸಿಗಬೇಕು… ಸ್ವಾಮೀಜಿ: ಮಗೂ.. ಹೋಗು! ಶೌಚಾಲಯದಲ್ಲಿ ಕೆಲಸ ಮಾಡು… »» ಬೂಬಣ್ಣನವರು ಚಿಕ್ಕವರಾಗಿದ್ದಾಗ… ರಾಮಣ್ಣ: ಪರೀಕ್ಷೆಯಲ್ಲಿ ಬರೆಯಲು ನನಗೇನೂ ಗೋಚರಿಸಲಿಲ್ಲ. ಹಾಳೆ ಖಾಲಿ ಬಿಟ್ಟು ಬಂದೆ.. ಚೋಮಣ್ಣ: ನಾನೂ ಸಹ… ಖಾಲಿ ಹಾಳೆ ಕೊಟ್ಟು ಬಂದೆ.. ಬೂಬಣ್ಣ: ಆಯ್ಯಯ್ಯೋ! ನನ್ನ ಹಾಳೆಯೂ ಖಾಲಿಯಾಗೇ ಇತ್ತು! ನಾವು ನಕಲು*(copy) ಹೊಡೆದಿದ್ದೇವೆಂದು ಮೇಷ್ಟ್ರು ಭಾವಿಸುತ್ತಾರೆ!! »» ಜೀವಶಾಸ್ತ್ರದ ಶಿಕ್ಷಕಿ: ನಮಗೆ ಮೊಟ್ಟೆ ಕೊಡುವ ಯಾವುದಾದರೂ ನಾಲ್ಕು ಜೀವಿಗಳ ಹೆಸರು ಹೇಳು. ಬೂಬಣ್ಣ: ಭೌತಶಾಸ್ತ್ರ ಅಧ್ಯಾಪಕರು, ಗಣಿತಶಾಸ್ತ್ರ ಅಧ್ಯಾಪಕರು, ರಾಸಯನಶಾಸ್ತ್ರದ ಅಧ್ಯಾಪಕಿ, ಹಾಗೂ ಕನ್ನಡದ ಅಧ್ಯಾಪಕಿ… »» ತರಗತಿ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಚೋಮಣ್ಣ ಎದ್ದು ಹೊರಗೆ ನಡೆದ. ಶಿಕ್ಷಕ: ಇದೇನಿದು?! ಇವನಿಗೇನಾಗಿದೆ? ಬೂಬಣ್ಣ: ಸಾರ್, ಅವನಿಗೆ ಒಳ್ಳೇ ನಿದ್ರೆಯಲ್ಲಿ ನಡೆದಾಡುವ ಅಭ್ಯಾಸವಿದೆ… »» ಬೂಬಣ್ಣನ ಮನೆಯ ಪ್ಲಗ್ನಲ್ಲಿ ಹೊಗೆ ಬರ್ತಾ ಇತ್ತು. ತಕ್ಷಣ ಬೂಬಣ್ಣ ಮೆಸ್ಕೋಮ್ ಗೆ (MESCOM) ಫೋನ್ ಮಾಡಿ, "ಏಯ್! ಯಾರಯ್ಯಾ ಅದು? ಸಿಗರೇಟು ಸೇದಿ ನಮ್ಮನೆ ಪ್ಲಗ್ಗಿನಲ್ಲಿ ಹೊಗೇ ಬಿಡೋದು?!" »» ಬಸ್ ಕಂಡಕ್ಟರ್: ಅಜ್ಜಿ! ಮೂರು ಸಲ ನಿಮ್ಮ ಸ್ಟಾಪ್ ಬಂತು ಅಂತ ಶಿಳ್ಳೆ ಹೊಡೆದ್ರೂ ತಿರುಗಿಯೂ ನೋಡಿಲ್ವಲ್ಲಾ ನೀವು… ಅಜ್ಜಿ: ಮಗೂ, ಶಿಳ್ಳೆ ಹೊಡೆದ್ರೆ ತಿರುಗಿ ನೋಡೊ ವಯಸ್ಸಲ್ಲಪ್ಪಾ ನಂದು… ಹಾಗೂ ಇಂದಿಗೆ ಕೊನೆಯದಾಗಿ… »» ರಾಮಣ್ಣ: ನೀರು ಕುದಿಸಿದಾಗ ಅದರಲ್ಲಿರುವ ಕೀಟಾಣುಗಳೆಲ್ಲ ಸತ್ತು ಹೋಗುತ್ತವೆ. ಆದ್ದರಿಂದ ಕುದಿಸಿದ ನೀರನ್ನು ಸುರಕ್ಷಿತವಾಗಿ ಕುಡಿಯಬಹುದು… ಬೂಬಣ್ಣ: ಅಯ್ಯೋ! ಆದರೆ ಸತ್ತು ಹೋದ ಕೀಟಾಣುಗಳ ಶವಗಳು ಆ ನೀರಲ್ಲೇ ತೇಲುತ್ತಿರುತ್ತವಲ್ಲಾ!!! - ಬಸವರಾಜ್ ಎ.ಎನ್. Basavaraj. A.N. Bangalore. E-mail : angadi.com@gmail.com

ಕನ್ನಡಿಗರಿಗೆ ಏರ್‌ಟೆಲ್ ನಾಮ !

ಕನ್ನಡಿಗರಿಗೆ ಏರ್‌ಟೆಲ್ ನಾಮ !
ನಾನು ಏಳೆಂಟು ವರ್ಷದಿಂದ ಏರ್‌ಟೆಲ್ ಪ್ರೀಪೇಡ್ ಮೊಬೈಲ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಮೂರ್ನಾಲ್ಕು ವರ್ಷದಿಂದ ಮತ್ತೊಂದು ಪೋಸ್ಟ್‌ಪೇಡ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಒಂದು ವರ್ಷದಿಂದ ಏರ್‌ಟೆಲ್ ಡಿಶ್ ಟಿವಿ ಉಪಯೋಗಿಸುತ್ತಿದ್ದೇನೆ. ಆದರೂ ಇವರ ಸೇವೆ ನನಗೆ ತೃಪ್ತಿದಾಯಕವಾಗಿಲ್ಲ. ಪ್ರಿಪೇಡ್‌ ಸಿಮ್‌ನಲ್ಲಿ ಈ ಹಿಂದೆ ಆಗಾಗ ಇದ್ದಕ್ಕಿದ್ದಂತೆ ದುಡ್ಡು ಕಟಾವು ಆಗುತಿತ್ತು. ಕೇಳಿದರೆ ನೀವು "ಅದನ್ನು ಆಯ್ಕೆ ಮಾಡಿದ್ದೀರಿ, ಇದನ್ನು ಒತ್ತಿದ್ದೀರಿ" ಎಂದು ಕಾಗೆ ಹಾರಿಸುತ್ತಿದ್ದರು. ಒಂದು ಸಲ ಜಗಳ ಮಾಡಿದ ನಂತರ ಕಟಾವು ಆದ ಹಣ ಹಿಂದಿರುಗಿಸಿದ್ದರು. ಯಾವುದಾದರೂ ವಿಷಯವನ್ನು ನೀವು ಪಟ್ಟು ಹಿಡಿದು ಕೇಳಿದರೆ, "ಸರ‍್ ಅರ್ಧ ಗಂಟೆಯಲ್ಲಿ ಸರಿ ಮಾಡಿ ಕೊಡುತ್ತೇವೆ", ಎಂದು ಹೇಳುತ್ತಾರೆ. ಅರ್ಧ ಗಂಟೆ ಕಳೆದ ನಂತರ ಮತ್ತೆ ಕರೆ ಮಾಡಿದರೆ ’ಗ್ರಾಹಕ ಸೇವಾ ಪ್ರತಿನಿಧಿ’ಗಳಿಗೆ ಕರೆ ಹೋಗುವುದೇ ಇಲ್ಲ. ಕಂಪ್ಯೂಟರ‍್ ಆಂಟೀ "ಒಂದು ಒತ್ತಿ, ಎರಡು ಒತ್ತಿ, ಅದನ್ನು ಒತ್ತಿ, ಇದನ್ನು ಒತ್ತಿ’ ಎಂದು ನಮ್ಮ ಸಮಯ ತಿನ್ನುತ್ತಾಳೇಯೇ ಹೊರತೂ, ’ಒಂಬತ್ತು ಒತ್ತಿ’ ಎಂದು ಹೇಳುವುದೇ ಇಲ್ಲ. ಸುಮಾರು ಹದಿನೈದು ದಿನ ನಾವು ಏನೇ ತಿಪ್ಪರಲಾಗ ಹಾಕಿದರೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಆ ವಿಷಯವೇ ಮರೆತು ಹೋಗಿರುತ್ತದೆ. ಎರಡು ವರ್ಷದ ಹಿಂದೆ ಟ್ರಾಯ್ ಸೂಚನೆ ಮೇರೆಗೆ "ಆಜೀವ ಸದಸ್ಯತ್ವ" ಎಂದು ಹೇಳಿ ರೂ. 1,200/- ಕಟ್ಟಿಸಿಕೊಂಡರು. ಆಗಲೂ ’ಆಜೀವ ಎಂದರೆ ಎಷ್ಟು ದಿನ?" ಎಂದು ಕೇಳಿದ್ದೆ. "ನೀವು ಜೀವಂತ ಇರುವವರೆಗೆ" ಎಂದು ತಿಳಿಸಿದ್ದರು. ನಾನೂ ಖುಷಿ ಆಗಿದ್ದೆ. ಆದರೆ ಈಗ ಅದು ಕೊನೆಗೊಳ್ಳುವ ದಿನಾಂಕವನ್ನು ಪರಿಶೀಲಿಸಿದರೆ 22 ಮೇ 2012 ಎಂದು ತೋರಿಸುತ್ತಿದೆ. ಅಂದರೆ ಏರ್‌ಟೆಲ್‌ನವರ ಪ್ರಕಾರ ನಾನು ಸಾಯಲು ಇನ್ನೆರಡೇ ತಿಂಗಳು ಬಾಕಿ ! ಇವರೇ ಬೇಗನೆ ಒಂದು ಪ್ರಳಯ ಮಾಡುತ್ತಾರೋ ಏನೋ !? ಅಥವಾ ಸುಪಾರಿ ಕೊಟ್ಟು ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆಯೇ ? ಗೊತ್ತಿಲ್ಲ. ಆ ನಂತರ DND ಸೇವೆ ಬಂತು. ಈಗ ಆ ತೊಂದರೆ ಇಲ್ಲ. ಪೋಸ್ಟ್‌ಪೇಡ್ ಸಿಮ್‌ನಿಂದ ಅಷ್ಟೇನೂ ತೊಂದರೆ ಆಗಿಲ್ಲ. ಆದರೆ ಬಿಲ್ ಕಟ್ಟುವುದು ಒಂದು ದಿನ ತಡವಾದರೂ ದಿನಕ್ಕೆ ನಾಲ್ಕಾರು ಜನ ಕರೆ ಮಾಡಿ ಏನೋ ಲಕ್ಷ ರೂಪಾಯಿ ಸಾಲ ಕೊಟ್ಟವರಂತೆ "ಯಾವಾಗ ಕಟ್ಟುತ್ತೀರಿ?" ಎಂದು ಕೇಳುತ್ತಿದ್ದರು. ಮೊನ್ನೆ ಒಂದು ದಿನ "ನಾನು ಕಟ್ಟಲ್ಲ, ಡಿಸ್‌ಕನೆಕ್ಟ್ ಮಾಡಿ," ಎಂದು ಹೇಳಿದೆ. ಅದಾದ ನಂತರ ಕರೆ ಬಂದಿಲ್ಲ, ನಾನು ಬಿಲ್ ಕಟ್ಟಿಲ್ಲ, ಅವರು ಡಿಸ್‌ಕನೆಕ್ಟ್ ಸಹ ಮಾಡಿಲ್ಲ! ಅದೆಲ್ಲಾ ಒಂದೆಡೆಗಿರಲಿ, ಅಸಲಿ ವಿಷಯ ಇರುವುದು ಏರ್‌ಟೆಲ್‌ನವರ ಡಿಶ್ ಟಿವಿ ಒಳಗೆ. ರೂ 1,590/- ನೀಡಿ ಇವರ ಕೊಡೆ (ಆಂಟೆನಾ) ಹಾಕಿಸಿಕೊಳ್ಳುವಾಗ ಇವರು ಹೇಳಿದ್ದು ಕನ್ನಡದ ಎಲ್ಲಾ ವಾಹಿನಿಗಳೂ ಬರುತ್ತವೆ ಎಂದು. ನಾನು ಕ್ರಿಕೆಟ್ ವಿಶ್ವಕಪ್‌ ಸಮಯದಲ್ಲಿ ಹಾಕಿಸಿದ್ದು. ಹಾಗಾಗಿ ಆಗ ಸಮಯವಿದ್ದಾಗೆಲ್ಲಾ ಬರೀ ಕ್ರಿಕೆಟ್ ನೋಡೋದೇ ಆಯ್ತು. ಕ್ರಿಕೆಟ್ ಹಂಗಾಮ ಮುಗಿದ ನಂತರವೇ ನನಗೆ ತಿಳಿದಿದ್ದು, ಏರ್‌ಟೆಲ್‌ನವರ ಕೊಡೆ ಕೊಡೆಯಲ್ಲ, ಅದೊಂತರ ಟೋಪಿ ಎಂದು. ಇವರ ಡಿಶ್‌ನಲ್ಲಿ ಕನ್ನಡದ ಅನೇಕ ವಾಹಿನಿಗಳು ಸಿಗುವುದೇ ಇಲ್ಲ. (ಉದಾ : ರಾಜ್‌ ಮ್ಯುಸಿಕ್, ಸಮಯ, ಚಿಂಟೂ ಇತ್ಯಾದಿ). ಸುವರ್ಣಾ, ಜನಶ್ರೀ ವಾಹಿನಿಯನ್ನು ಕೇಳಿದ ನಂತರ ಹಾಕಿ ಕೊಟ್ಟರು. ಉದಯ ಕಾಮೆಡಿ ಬೇಕಾದರೆ ಮತ್ತೊಂದಿಷ್ಟು ಹಣ ನೀಡಬೇಕಂತೆ. ಹಣ ನೀಡಿದರೂ ರಾಜ್‌ ಮ್ಯುಸಿಕ್, ಚಿಂಟೂ ಹಾಗೂ ಇತ್ತೀಚಿನ ಪಬ್ಲಿಕ್ ಟಿವಿಗಳು ಸಿಗುವುದಿಲ್ಲವಂತೆ ! ಆದರೆ ಹಣ ನೀಡಿದ ತಪ್ಪಿಗೆ ಅನೇಕ ಇತರೆ ಭಾಷೆಗಳ ವಾಹಿನಿಗಳನ್ನು ಬಳುವಳಿಯಾಗಿ ನೀಡಿದ್ದಾರೆ. ನಮ್ಮ ದುಡ್ಡು ಸದುಪಯೋಗ ಆಗಬೇಕೆಂದರೆ ಅವುಗಳನ್ನು ನೋಡಿ ಕರ್ಮ ಕಳೆದುಕೊಳ್ಳಬೇಕು ಅನ್ನುವುದು ಏರ್‌ಟೆಲ್ ಗ್ರಾಹಕ ಸೇವಾ ಶತ್ರುಗಳ ಅಂಬೋಣ. ಮತ್ತೊಂದು ಗಮನಾರ್ಹ ಅಂಶವೆಂದರೆ ಇವರು ಅನೇಕ ಪ್ಯಾಕೇಜ್‌ಗಳನ್ನು ಮಾಡಿದ್ದಾರೆ. ಆದರೆ ಅವುಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪ್ಯಾಕೇಜ್ ಇಲ್ಲ. ಕನ್ನಡವೊಂದೇ ಅಲ್ಲದೇ ದಕ್ಷಿಣ ಭಾರತದ ಯಾವ ಭಾಷೆಗೂ ಪ್ರತ್ಯೇಕ ಪ್ಯಾಕೇಜ್ ಇಲ್ಲ. "ಸೌತ್ ಇಂಡಿಯಾ ಪ್ಯಾಕೇಜ್" ಅಂತ ಒಂದಿದೆ. ಅದನ್ನೇ ಹಾಕಿಸಿಕೊಳ್ಳಬೇಕು. ಅದರಲ್ಲೂ ದಕ್ಷಿಣ ಭಾರತದ ಎಲ್ಲಾ ವಾಹಿನಿಗಳೂ ಬರುವುದಿಲ್ಲ ಅನ್ನೋದು ಅವರ ಕೊಡೆಯಷ್ಟೇ ದಿಟ. ಕನ್ನಡಿಗರಿಂದ ಸುಲಿಗೆ ಮಾಡಿ ಕನ್ನಡದ ಎಲ್ಲಾ ವಾಹಿನಿಗಳನ್ನೂ ತೋರಿಸದೇ ನಮ್ಮ ದುಡ್ಡಿನಿಂದ ಬೇರೆ ಭಾಷೆಯ ವಾಹಿನಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ "ಪ್ಯಾಕೇಜ್‌ ಇರೋದೇ ಹೀಗೆ!" ಎಂಬ ಉತ್ತರ ಬರುತ್ತದೆ. ಅಂದರೆ ಅವರು ಇರೋದೇ ಹೀಗೆ! ಹಾಗಾದ್ರೆ ಕನ್ನಡಿಗರು ಸುಮ್ಮನಿರೋದಾದ್ರೂ ಹೇಗೆ ?

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ 2009
ಪರೀಕ್ಷೆ ನಡೆದ ದಿನಾಂಕ : ..................

01. 1970 ರ ದಶಕದಲ್ಲಿ ದಲಿತರನ್ನು ಒಗ್ಗೂಡಿಸಿದ ಚಳುವಳಿ.
ಎ. ರೈತ ಚಳುವಳಿ
ಬಿ. ಬಂಡಾಯ ಚಳುವಳಿ
ಸಿ. ಮಹಿಳಾ ಚಳುವಳಿ
ಡಿ. ಬೂಸಾ ಚಳುವಳಿ
ಉತ್ತರ: ಬಿ. ಬಂಡಾಯ ಚಳುವಳಿ
02. 'ಬೆಳ್ಳಿ' ಈ ಕಾದಂಬರಿಯಲ್ಲಿ ಒಂದು ಮುಖ್ಯ ಪಾತ್ರವಾಗಿದೆ
ಎ. ಕೊಳೆ
ಬಿ. ಚೋಮನದುಡಿ
ಸಿ. ಕುಡಿಯರ ಕೂಸು
ಡಿ. ಮಾಗಿ
ಉತ್ತರ: ಬಿ. ಚೋಮನದುಡಿ
03. ಬಸವಣ್ಣನವರ ಜಾತಿ ಮೂಲವನ್ನು ಕೆದಕಲು ಹೊರಟು ನಿಷೇಧಕ್ಕೆ ಒಳಗಾದ ಇತ್ತೀಚಿನ ಕೃತಿ.
ಎ. ಮಹಾಚೈತ್ರ
ಬಿ. ಮಾರ್ಗ
ಸಿ. ಸಂಕ್ರಾಂತಿ
ಡಿ. ಆನುದೇವಾ ಹೊರಗಣವನು
ಉತ್ತರ: ಡಿ. ಆನುದೇವಾ ಹೊರಗಣವನು
04. 'ಕ್ಯಾದಿಗಿ ಬನದಾಗ ಕತೆಯಾಗಿ ನಿಂತವರು' - ಇದು ಇವರ ಕೃತಿ
ಎ. ಗೀತಾ ನಾಗಭೂಷಣ್
ಬಿ. ದು. ಸರಸ್ವತಿ
ಸಿ. ಬಿ.ಟಿ.ಜಾಹ್ನವಿ
ಡಿ. ವೈದೇಹಿ
ಉತ್ತರ: ಸಿ. ಬಿ.ಟಿ.ಜಾಹ್ನವಿ
05. 'ಅಭಿನವ ಕಾಳಿದಾಸ' ಎಂಬ ಬಿರುದಿಗೆ ಪಾತ್ರರಾಗಿರುವವರು
ಎ. ಬಸವಪ್ಪ ಶಾಸ್ತ್ರಿ
ಬಿ. ಎಂ.ಗೋವಿಂದ ಪೈ
ಸಿ. ಬಿ.ಎಂ.ಶ್ರೀ
ಡಿ. ಆರ್. ನರಸಿಂಹಾಚಾರ್
ಉತ್ತರ: ಎ. ಬಸವಪ್ಪ ಶಾಸ್ತ್ರಿ
06. ಚಂದ್ರಶೇಖರ ಪಾಟೀಲರ ಸಂಪಾದಕತ್ವದ ಸಾಹಿತ್ಯಿಕ ಪತ್ರಿಕೆಯ ಹೆಸರು
ಎ. ಹೊಸತು
ಬಿ. ಕನ್ನಡ ಟೈಮ್ಸ್
ಸಿ. ಸಂವಾದ
ಡಿ. ಸಂಕ್ರಮಣ
ಉತ್ತರ: ಡಿ. ಸಂಕ್ರಮಣ
07. 'ಅಲೆಗಳಲ್ಲಿ ಅಂತರಂಗ' ಇದು ವೈದೇಹಿಯವರ ಸಮಗ್ರ
ಎ. ಪ್ರಬಂಧಗಳ ಸಂಕಲನ
ಬಿ. ಮಕ್ಕಳ ನಾಟಕಗಳ ಸಂಕಲನ
ಸಿ. ಕವಿತೆಗಳ ಸಂಕಲನ
ಡಿ. ಕತೆಗಳ ಸಂಕಲನ
ಉತ್ತರ: ಡಿ. ಕತೆಗಳ ಸಂಕಲನ
08. ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ
ಎ. ಮೈಸೂರು
ಬಿ. ಬೆಳಗಾವಿ
ಸಿ. ಧಾರವಾಡ
ಡಿ. ಬೆಂಗಳೂರು
ಉತ್ತರ: ಡಿ. ಬೆಂಗಳೂರು
09. 'ಸಿರಿಸಂಪಿಗೆ' ನಾಟಕವನ್ನು ಬರೆದವರು
ಎ. ಚಂದ್ರಶೇಖರ ಪಾಟೀಲ
ಬಿ. ಪಿ. ಲಂಕೇಶ್
ಸಿ. ಶಾಂತಿನಾಥ ದೇಸಾಯಿ
ಡಿ. ಚಂದ್ರ ಶೇಖರ ಕಂಬಾರ
ಉತ್ತರ: ಡಿ. ಚಂದ್ರ ಶೇಖರ ಕಂಬಾರ

10. 'ಸಂಜೆಗಣ್ಣಿನ ಹಿನ್ನೋಟ' ಎಂಬುದು ಇವರ ಕೃತಿ
ಎ. ಅನಕೃ
ಬಿ. ಎ.ಎನ್. ಮೂರ್ತಿರಾವ್
ಸಿ. ಪೂರ್ಣ ಚಂದ್ರ ತೇಜಸ್ವೀ
ಡಿ. ಶಿವರಾಮ ಕಾರಂತ
ಉತ್ತರ: ಬಿ. ಎ.ಎನ್. ಮೂರ್ತಿರಾವ್
11. 'ಮಲ್ಲಿಗೆಯ ಮಾಲೆ' ಇದು ಇವರ ಸಮಗ್ರ ಕವಿತೆಗಳ ಸಂಕಲನವಾಗಿದೆ.
ಎ. ಪು.ತಿ.ನ
ಬಿ. ಕೆ.ಎಸ್.ನರಸಿಂಹಸ್ವಾಮಿ
ಸಿ. ಜಿ.ಎಸ್.ಶಿವರುದ್ರಪ್ಪ
ಡಿ. ಕುವೆಂಪು
ಉತ್ತರ: ಬಿ. ಕೆ.ಎಸ್.ನರಸಿಂಹಸ್ವಾಮಿ
12. 'ಧನಿಯರ ಸತ್ಯನಾರಾಯಣ' ಎಂಬ ಪ್ರಸಿದ್ಧ ಕೃತಿಯನ್ನು ಬರೆದವರು
ಎ. ಕಟಪಾಡಿ ಶ್ರೀನಿವಾಸ ಶೆಣೈ
ಬಿ. ಕುಡ್ಪಿ ವಾಸುದೇವ ಶೆಣೈ
ಸಿ. ಕೊರಡ್ಕಲ್ ಶ್ರೀನಿವಾಸ ರಾವ್
ಡಿ. ಶಿವರಾಮ ಕಾರಂತ
ಉತ್ತರ: ಬಿ. ಕುಡ್ಪಿ ವಾಸುದೇವ ಶೆಣೈ
13. ಕಲಾವಿದ ಮೈಕೆಲ್ ಎಂಜಲೋನ ಜೀವನವನ್ನು ಕುರಿತು 'ರೂಪದರ್ಶಿ' ಕಾದಂಬರಿಯನ್ನು ಬರೆದವರು
ಎ. ಕೆ.ವಿ.ಐಯ್ಯರ್
ಬಿ. ಮಿರ್ಜಿ ಅಣ್ಣಾರಾಯ
ಸಿ. ಎಸ್.ವಿ.ಪರಮೇಶ್ವರಭಟ್ಟ
ಡಿ. ವಿ.ಕೃ.ಗೋಕಾಕ್
ಉತ್ತರ: ಎ. ಕೆ.ವಿ.ಐಯ್ಯರ್
14. ಇವರು ಲಲಿತ ಪ್ರಬಂಧಗಳಿಗಾಗಿ ಪ್ರಸಿದ್ಧರು
ಎ. ಬೆಸಗರಹಳ್ಳಿ ರಾಮಣ್ಣ
ಬಿ. ವಿಜಯಾ ದಬ್ಬೆ
ಸಿ. ಹಾ.ಮಾ.ನಾಯಕ
ಡಿ. ಎ.ಎನ್.ಮೂರ್ತಿರಾವ್
ಉತ್ತರ: ಸಿ. ಹಾ.ಮಾ.ನಾಯಕ್
15. 'ಪುರಾಣ ಭಾರತ ಕೋಶ' ಈ ಕೃತಿಯನ್ನು ಬರೆದವರು
ಎ. ಬೆನಗಲ್ ರಾಮರಾವ್
ಬಿ. ಸ.ಸ.ಮಾಳವಾಡ
ಸಿ. ಜಿ.ವೆಂಕಟಸುಬ್ಬಯ್ಯ
ಡಿ. ಯಜ್ಞನಾರಾಯಣ ಉಡುಪ
ಉತ್ತರ: ಡಿ. ಯಜ್ಞನಾರಾಯಣ ಉಡುಪ
16. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಲೇಖಕಿ
ಎ. ಗೀತಾ ನಾಗಭೂಷಣ್
ಬಿ. ಅನುಪಮಾ ನಿರಂಜನ
ಸಿ. ವೈದೇಹಿ
ಡಿ. ಸಾರಾ ಅಬೂಬಕರ್
ಉತ್ತರ: ಎ. ಗೀತಾ ನಾಗಭೂಷಣ್
17. 'ಇಗೋ ಕನ್ನಡ' ಹೆಸರಿನ ಅಂಕಣ ಬರೆಯುತ್ತಿದ್ದವರು
ಎ. ಅಮೃತ ಸೋಮೇಶ್ವರ
ಬಿ. ಕೆ.ವಿ.ನಾರಾಯಣ
ಸಿ. ಜಿ. ವೆಂಕಟಸುಬ್ಬಯ್ಯ
ಡಿ. ಪಾ.ವೆಂ.ಆಚಾರ್ಯ
ಉತ್ತರ: ಸಿ. ಜಿ. ವೆಂಕಟಸುಬ್ಬಯ್ಯ
18. 'ತಟ್ಟು ಚಪ್ಪಾಳೆ ಪುಟ್ಟ ಮಗು' ಇದರ ಸಂಪಾದಕರು
ಎ. ಸಿಸು ಸಂಗಮೇಶ
ಬಿ. ಬೋಳುವಾರು ಮಹಮದ್ ಕುಂಞ
ಸಿ. ವೈದೇಹಿ
ಡಿ. ಪಂಜೆ ಮಂಗೇಶರಾಯರು
ಉತ್ತರ: ಬಿ. ಬೋಳುವಾರು ಮಹಮದ್ ಕುಂಞ
19. ಇವರು ಓರ್ವ ಪ್ರಸಿದ್ಧ ಜಾನಪದ ತಜ್ಞರು
ಎ. ಡಿ.ಎಲ್.ನರಸಿಂಹಾಚಾರ್
ಬಿ. ಎಚ್. ತಿಪ್ಪೇರುದ್ರಸ್ವಾಮಿ
ಸಿ. ಜಿ.ಶಂ.ಪರಮಶಿವಯ್ಯ
ಡಿ. ಕರೀಂಖಾನ್
ಉತ್ತರ: ಡಿ. ಕರೀಂಖಾನ್
20. 'ಹರಿಜನ್ವಾರ' ಇದೊಂದು
ಎ. ನಾಟಕ
ಬಿ. ಕತೆ
ಸಿ. ಪ್ರಬಂಧ
ಡಿ. ಕಾದಂಬರಿ
ಉತ್ತರ: ಎ. ನಾಟಕ
21. 'ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿ:' ಎಂಬುದು ಈತನ ಸೂತ್ರ
ಎ. ಭರತ
ಬಿ. ಆನಂದವರ್ಧನ
ಸಿ. ಭಾಮಹ
ಡಿ. ದಂಡಿ
ಉತ್ತರ: ಎ. ಭರತ
22. ಔಚಿತ್ಯ ವಿಚಾರವನ್ನು ಪ್ರತಿಪಾದಿಸಿದ ಲಾಕ್ಷಣಿಕ
ಎ. ವಿಶ್ವನಾಥ
ಬಿ. ಅಭಿನವಗುಪ್ತ
ಸಿ. ಮಮ್ಮಟ
ಡಿ. ಕ್ಷಮೇಂದ್ರ
ಉತ್ತರ: ಡಿ. ಕ್ಷಮೇಂದ್ರ
23. ಇದು ಆನಂದವರ್ಧನನ ಕೃತಿ
ಎ. ಕಾವ್ಯಾಲಂಕಾರ
ಬಿ. ಧ್ವನ್ಯಾಲೋಕ
ಸಿ. ದಶರೂಪಕ
ಡಿ. ಕಾವ್ಯಪ್ರಕಾಶ
ಉತ್ತರ: ಬಿ. ಧ್ವನ್ಯಾಲೋಕ
24. ಸಂಚಾರಿ ಭಾವಗಳು ಒಟ್ಟು
ಎ. ಮೂವತ್ತು
ಬಿ. ಮೂವತ್ತ ಮೂರು
ಸಿ. ಮೂವತ್ತೈದು
ಡಿ. ಎಂಟು
ಉತ್ತರ: ಬಿ. ಮೂವತ್ತ ಮೂರು
25. ಕಾವ್ಯ ಮೀಮಾಂಸೆಯನ್ನು ವ್ಯವಸ್ಥಿತವಾಗಿ ವಿವೇಚಿಸಿದ ಮೊತ್ತಮೊದಲ ಕೃತಿ
ಎ. ಕಾವ್ಯಾದರ್ಶ
ಬಿ. ವಕ್ರೋಕ್ತಿ ಜೀವಿತ
ಸಿ. ಕಾವ್ಯಪ್ರಕಾಶ
ಡಿ. ಕಾವ್ಯಾಲಂಕಾರ
ಉತ್ತರ: ಡಿ. ಕಾವ್ಯಾಲಂಕಾರ
26. 'ಊರಿಗೆ ಊರೇ ಕಣ್ಣಿರು ಸುರಿಸಿತು' ಎಂಬಲ್ಲಿ ಬಳಕೆಯಾಗಿರುವ ಅರ್ಥ
ಎ. ಲಕ್ಷ್ಯಾರ್ಥ
ಬಿ. ವ್ಯಂಗ್ಯಾರ್ಥ
ಸಿ. ಯಾವುದೂ ಅಲ್ಲ
ಡಿ. ವಾಚ್ಯಾರ್ಥ
ಉತ್ತರ: ಎ. ಲಕ್ಷ್ಯಾರ್ಥ
27. ಎರಡನೆಯ ನಾಗವರ್ಮನ ಕೃತಿ
ಎ. ಶೃಂಗಾರ ರತ್ನಾಕರ
ಬಿ. ರಸರತ್ನಾಕರ
ಸಿ. ಕಾವ್ಯಾದರ್ಶ
ಡಿ. ಕಾವ್ಯಾವಲೋಕನ
ಉತ್ತರ:
28. ಭಟ್ಟನಾಯಕನು ಪ್ರತಿಪಾದಿಸಿದ ವಿಚಾರ
ಎ. ಧ್ವನಿ
ಬಿ. ಸಾಧಾರಣೀಕರಣ
ಸಿ. ಔಚಿತ್ಯ
ಡಿ. ರಸತತ್ವ
ಉತ್ತರ:
29. 'ಭಾರತೀಯ ಕಾವ್ಯ ಮೀಮಾಂಸೆ' ಇದನ್ನು ಬರೆದವರು
ಎ. ಎಂ.ಆರ್.ಶ್ರೀ
ಬಿ. ತೀ.ನಂ.ಶ್ರೀ
ಸಿ. ವಿ.ಎಂ.ಇನಾಂದಾರ್
ಡಿ. ಬಿ.ಎಂ.ಶ್ರೀ
ಉತ್ತರ: ಬಿ. ತೀ.ನಂ.ಶ್ರೀ.
30. 'ಖಂಡಪ್ರಾಸಮನತಿಶಯಮಿದೆಂದು ಯತಿಯಂ ಮಿಕ್ಕರ್' ಎಂದವರು
ಎ. ನಾಗವರ್ಮ
ಬಿ. ಜಯಕೀರ್ತಿ
ಸಿ. ಸೋಮೇಶ್ವರ
ಡಿ. ಶ್ರೀವಿಜಯ
ಉತ್ತರ:
31. ಪದ್ಯದಲ್ಲಿ ಆಯಾ ಪಾದದ ಮೊದಲನೇ ಅಕ್ಷರ ಅಥವಾ ಸವರ್ಣವು ಯತಿಯ ನಂತರ ಆವೃತ್ತಿಗೊಂಡರೆ ಅದು
ಎ. ಅನುಪ್ರಾಸ
ಬಿ. ವಡಿ
ಸಿ. ಅಂತ್ಯಪ್ರಾಸ
ಡಿ. ಆದಿಪ್ರಾಸ
ಉತ್ತರ:
32. ಪ್ರತೀ ಪಾದದಲ್ಲಿ ಭರನಭಭರ ಗಣಗಳು ಮತ್ತು ತಲಾ ಒಂದೊಂದು ಲಘು, ಗುರು ಬಂದರೆ ಆ ವೃತ್ತವು...
ಎ. ಚಂಪಕಮಾಲ
ಬಿ. ಸ್ರಗ್ದರೆ
ಸಿ. ಮತ್ತೇಭವಿಕ್ರೀಡಿತ
ಡಿ. ಉತ್ಪಲಮಾಲೆ
ಉತ್ತರ:
33. ಸಂಚಿಹೊನ್ನಮ್ಮನ 'ಹದಿಬದೆಯ ಧರ್ಮ' ಕೃತಿಯು ಈ ಛಂದೋ ರೂಪದಲ್ಲಿದೆ
ಎ. ಏಳೆ
ಬಿ. ಅಕ್ಕರ
ಸಿ. ಸಾಂಗತ್ಯ
ಡಿ. ತ್ರಿಪದಿ
ಉತ್ತರ:
34. 'ಕನ್ನಡ ಗಾಯತ್ರಿ' ಎಂದು ಈ ಛಂದೋರೂಪಕ್ಕೆ ಹೇಳುತ್ತಾರೆ...
ಎ. ಸಾಂಗತ್ಯ
ಬಿ. ತ್ರಿಪದಿ
ಸಿ. ಅಕ್ಕರ
ಡಿ. ಏಳೆ
ಉತ್ತರ:
35. ಅಂಶ ಛಂದಸ್ಸಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಗಣ
ಎ. ರುದ್ರಗಣ
ಬಿ. ವಿಷ್ಣುಗಣ
ಸಿ. ಎಲ್ಲವೂ
ಡಿ. ಬ್ರಹ್ಮಗಣ
ಉತ್ತರ:
36. ಇವುಗಳಲ್ಲಿ ಸಾಂಗತ್ಯದಲ್ಲಿ ರಚಿತವಾದ ಕಾವ್ಯ
ಎ. ಭರತೇಶ ವೈಭವ
ಬಿ. ಗಿರಿಜಾ ಕಲ್ಯಾಣ
ಸಿ. ಅನಂತನಾಥ ಪುರಾಣ
ಡಿ. ಶಾಂತಿ ಪುರಾಣ
ಉತ್ತರ: ಎ. ಭರತೇಶ ವೈಭವ
37. 'ಜೈಮಿನಿ ಭಾರತ'ವು ಈ ಷಟ್ಪದಿಯಲ್ಲಿ ರಚಿತವಾಗಿದೆ.
ಎ. ಭಾಮಿನಿ
ಬಿ. ವಾರ್ಧಕ
ಸಿ. ಪರಿವರ್ಧಿನಿ
ಡಿ. ಭೋಗ
ಉತ್ತರ:
38. 'ಕಲ್ಲೋಳ್ ತೋರ್ಪ' ಈ ಪದದ ಸರಿಯಾದ ಪ್ರಾಸ ವಿನ್ಯಾಸ
ಎ. U U - U
ಬಿ. - U - U
ಸಿ. - - - U
ಡಿ. - - - -
ಉತ್ತರ: ಸಿ. - - - U
39. 'ಗಿರಿಜಾನಾಥ' ಎಂಬ ಪದದಲ್ಲಿ ಇರುವ ಅಂಶಗಳ ಸಂಖ್ಯೆ
ಎ. ಮೂರು
ಬಿ. ಐದು
ಸಿ. ಆರು
ಡಿ. ನಾಲ್ಕು
ಉತ್ತರ:
40. ಅಂಶ ಷಟ್ಪದಿಯ ಮೊದಲ ಅರ್ಧದಲ್ಲಿ ಬರುವ ಗಣಗಳ ವಿನ್ಯಾಸ
ಎ. ಒಂದು ಬ್ರಹ್ಮಗಣ, ಆರು ವಿಷ್ಣು ಗಣ
ಬಿ. ಆರು ವಿಷ್ಣುಗಣ, ಒಂದು ರುದ್ರಗಣ
ಸಿ. ಒಂದು ಬ್ರಹ್ಮಗಣ, ಐದು ವಿಷ್ಣುಗಣ, ಒಂದು ರುದ್ರಗಣ
ಡಿ. ಏಳು ವಿಷ್ಣುಗಣಗಳು
ಉತ್ತರ:
41. 'ಸುನೀತ' ದಲ್ಲಿ ಇರುವ ಸಾಲುಗಳ ಸಂಖ್ಯೆ
ಎ. ಹದಿನಾಲ್ಕು
ಬಿ. ಹದಿನೆಂಟು
ಸಿ. ಹನ್ನೆರಡು
ಡಿ. ಹದಿನಾರು
ಉತ್ತರ: ಎ. ಹದಿನಾಲ್ಕು
42. ಇದು ವರ್ಗಗಣ ಘಟಿತ ಪದ್ಯಜಾತಿ
ಎ. ಮಲ್ಲಿಕಾಮಾಲೆ
ಬಿ. ರಗಳೆ
ಸಿ. ಏಳೆ
ಡಿ. ತ್ರಿಪದಿ
ಉತ್ತರ:
43. 'ಕಂದಗಳ್ ಅಮೃತಲತಿಕಾ ಕಂದಗಳ್' ಎಂದವನು
ಎ. ಜನ್ನ
ಬಿ. ರಾಘವಾಂಕ
ಸಿ. ಲಕ್ಷ್ಮೀಶ
ಡಿ. ಹರಿಹರ
ಉತ್ತರ:
44. ಋ, ಖೂ ಇವು
ಎ. ಸಂಧ್ಯಾಕ್ಷರಗಳು
ಬಿ. ಯೋಗವಾಹಕಗಳು
ಸಿ. ವ್ಯಂಜನಗಳು
ಡಿ. ಸ್ವರಗಳು
ಉತ್ತರ:
45. 'ಗದ್ದೆ' ಶಬ್ದದ ಹಳೆಗನ್ನಡ ರೂಪ
ಎ. ಕಱ್ದೆ
ಬಿ. ಗಱ್ದೆ
ಸಿ. ಗಳ್ದೆ
ಡಿ. ಗರ್ದೆ
ಉತ್ತರ:
46. 'ಬೆಟ್ಟದಾವರೆ' ಎಂಬಲ್ಲಿ ಇರುವ ಸಂಧಿ
ಎ. ಆಗಮ
ಬಿ. ಆದೇಶ
ಸಿ. ಸವರ್ಣಧೀರ್ಘ
ಡಿ. ಲೋಪ
ಉತ್ತರ: ಬಿ. ಆದೇಶ
47. ಕುಳ್ಳ, ಕುಂಟ ಇವು
ಎ. ಅಂಕಿತ ನಾಮ
ಬಿ. ಭಾವನಾಮ
ಸಿ. ಅನ್ವರ್ಥನಾಮ
ಡಿ. ರೂಢನಾಮ
ಉತ್ತರ: ಸಿ. ಅನ್ವರ್ಥನಾಮ
48. ಕನ್ನಡದಲ್ಲಿ ಈ ವಿಭಕ್ತಿ ಇಲ್ಲವೆಂದು ಹೇಳುತ್ತಾರೆ
ಎ. ದ್ವಿತೀಯಾ
ಬಿ. ಚತುರ್ಥಿ
ಸಿ. ಸಪ್ತಮೀ
ಡಿ. ಪ್ರಥಮಾ
ಉತ್ತರ:
49. ಮಧ್ಯಮ ಪುರುಷ ಸರ್ವನಾಮಕ್ಕೆ ಇದೊಂದು ಉದಾಹರಣೆ
ಎ. ನೀನು
ಬಿ. ಅವರು
ಸಿ. ತಾವು
ಡಿ. ನಾನು
ಉತ್ತರ:

50. ಇದು ಸಂಧ್ಯಕ್ಷರವಾಗಿದೆ
ಎ. ಆಂ
ಬಿ. ಐ
ಸಿ. ಓ
ಡಿ. ಋ
ಉತ್ತರ:
51.'ಡ' ಕಾರ ಪುಟ್ಟುವ ತಾಣಮಂ ಬೆಟ್ಟಿತ್ತಾಗಿ ಉಚ್ಚರಿಸಿದರೆ ಹುಟ್ಟುವ ವರ್ಣ ಎಂದು ಕೇಶಿರಾಜ ಸೂಚಿಸಿದ್ದು
ಎ. ಳ
ಬಿ. ಱಿ
ಸಿ. ಲ
ಡಿ. ಱ
ಉತ್ತರ:
52. 'ಕನ್ನಡ ಮಧ್ಯಮ ವ್ಯಾಕರಣ' ಇದನ್ನು ಬರೆದವರು ಯಾರು ?
ಎ. ಬಿ.ಎಂ.ಶ್ರೀ
ಬಿ. ಟಿ.ಬರೋ
ಸಿ. ಭ. ಕೃಷ್ಣಮೂರ್ತಿ
ಡಿ. ತೀ.ನಂ.ಶ್ರೀ
ಉತ್ತರ:

53. ತೆಲುಗಿನಲ್ಲಿ ಲಿಂಗವಿವಕ್ಷೆಯ ಕ್ರಮ ಹೀಗಿದೆ...
ಎ. ಒಂಭತ್ತು ವಿಧ
ಬಿ. ಎರಡು ವಿಧ
ಸಿ. ಲಿಂಗವಿವಕ್ಷೆ ಇಲ್ಲ
ಡಿ. ಮೂರು ವಿಧ
ಉತ್ತರ:
54. ಧೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ
ಎ. ಮಲ್ತೋ
ಬಿ. ಬ್ರಾಹೂಈ
ಸಿ. ಕೋಲಾಮಿ
ಡಿ. ಕುರುಖ್
ಉತ್ತರ:
55. ಕೇಶಿರಾಜನು ಹೇಳುವ ಶುದ್ಧಗೆಗಳ ಸಂಖ್ಯೆ
ಎ. 37
ಬಿ. 35
ಸಿ. 47
ಡಿ. 57
ಉತ್ತರ:
56. ಪ್ರೇರಣಾರ್ಥಕ ಕ್ರಿಯಾ ಪದಕ್ಕೆ ಒಂದು ನಿದರ್ಶನ
ಎ. ಓಡಳು
ಬಿ. ಓಡಿಸು
ಸಿ. ಓಡುವುದು
ಡಿ. ಓಡು
ಉತ್ತರ:
57. 'ನಲ್ಲಳ್' ಇದು ಒಂದು
ಎ. ಕ್ರಿಯಾಪದ
ಬಿ. ಗುಣವಾಚಕ
ಸಿ. ವಿಭಕ್ತಿ ಪ್ರತ್ಯಯ
ಡಿ. ನಾಮಪದ
ಉತ್ತರ:
58. 'ತಂಗಾಳಿ' ಇಲ್ಲಿ ಇರುವ ಸಮಾಸ
ಎ. ದ್ವಿಗು
ಬಿ. ಅಂಶಿ
ಸಿ. ಅರಿ
ಡಿ. ಕರ್ಮಧಾರೆಯ
ಉತ್ತರ: ಡಿ. ಕರ್ಮಧಾರೆಯ
59. ಪರುಷ ಮತ್ತು ಸರಳ ವರ್ಣಗಳ ವಿನಿಮಯ ಸೂತ್ರವನ್ನು ಮೊತ್ತಮೊದಲು ಗುರುತಿಸಿ ಚರ್ಚಿಸಿದವರು
ಎ. ಎಂ.ಬಿ. ಎಮಿನೋ
ಬಿ. ಭ.ಕೃಷ್ಣಮೂರ್ತಿ
ಸಿ. ರಾಬರ್ಟ್ ಎಂ. ಕಾಲ್ಡ್ವೆಲ್
ಡಿ. ಟಿ. ಬರೋ
ಉತ್ತರ:
60. 'ಮಮಿಂಕೆಯದದೊಳ್' ಈ ಪ್ರತ್ಯಯಗಳನ್ನು ಸೂಚಿಸುತ್ತದೆ
ಎ. ವಿಭಕ್ತಿ ಪ್ರತ್ಯಯಗಳು
ಬಿ. ಕಾಲಸೂಚಕ ಪ್ರತ್ಯಯಗಳು
ಸಿ. ತದ್ಧಿತ ಪ್ರತ್ಯಯಗಳು
ಡಿ. ಅಖ್ಯಾತ ಪ್ರತ್ಯಯಗಳು
ಉತ್ತರ:
61. 'ಆದರೆ', 'ಅಥವಾ' ಇವು
ಎ. ಅನುಸರ್ಗ ಅವ್ಯಯ
ಬಿ. ಸಂಬಂಧ ಸೂಚಕ ಅವ್ಯಯ
ಸಿ. ಭಾವಸೂಚಕ ಅವ್ಯಯ
ಡಿ. ಸಾಮಾನ್ಯ ಅವ್ಯಯ
ಉತ್ತರ:
62. 'ಕರಡಿಯ ಕುಣಿತವನ್ನು ನೋಡಿ ಮಕ್ಕಳೆಲ್ಲರೂ ನಕ್ಕರು' ಈ ವಾಕ್ಯದಲ್ಲಿ ಕೃದಂತ ಭಾವನಾಮ
ಎ. ಕುಣಿತ
ಬಿ. ನೋಡಿ
ಸಿ. ಮಕ್ಕಳೆಲ್ಲರೂ
ಡಿ. ಕರಡಿ
ಉತ್ತರ:
63. ದೇಗುಲಮಾನ್, ಮಿಕ್ಕುದಾನ್ ಎಂಬ ಭಾಷಾರೂಪಗಳು ಪ್ರತಿನಿಧಿಸುವ ಕಾಲ
ಎ. ಹಳಗನ್ನಡ
ಬಿ. ನಡುಗನ್ನಡ
ಸಿ. ಹೊಸಗನ್ನಡ
ಡಿ. ಪೂರ್ವದ ಹಳಗನ್ನಡ
ಉತ್ತರ:
64. ಕಪ್ಪೆ ಆರಭಟ್ಟನ ಬಾದಾಮಿ ಶಾಸನದಲ್ಲಿ ಬಳಕೆಯಾಗಿರುವ ಛಂದೋರೂಪ
ಎ. ಅಕ್ಕರ
ಬಿ. ತ್ರಿಪದಿ
ಸಿ. ಕಂದ
ಡಿ. ರಗಳೆ
ಉತ್ತರ:

65. ಬೆಳತೂರಿನ ದೇಕಬ್ಬೆಯ ಶಾಸನವು ಈ ಪ್ರಾಕಾರಕ್ಕೆ ಸೇರುತ್ತದೆ
ಎ. ಪ್ರಶಸ್ತಿ ಶಾಸನ
ಬಿ. ಮಾಸ್ತಿಕಲ್ಲು
ಸಿ. ವೀರಗಲ್ಲು
ಡಿ. ದಾನಶಾಸನ
ಉತ್ತರ:
66. ಸಾಕುಪ್ರಾಣಿಯ ನೆನಪಿಗಾಗಿ ನೆಟ್ಟ ಏಕೈಕ ವೀರಗಲ್ಲು
ಎ. ಬೇಲೂರು ಶಾಸನ
ಬಿ. ತಮ್ಮಟಕಲ್ಲು ಶಾಸನ
ಸಿ. ಲಕ್ಕುಂಡಿ ಶಾಸನ
ಡಿ. ಆತಕೂರು ಶಾಸನ
ಉತ್ತರ:
67. ಇದು ಚಾಲುಕ್ಯರ ರಾಜಧಾನಿಯಾಗಿತ್ತು
ಎ. ವಾತಾಪಿ
ಬಿ. ಮಾನ್ಯಖೇಟ
ಸಿ. ದೋರಸಮುದ್ರ
ಡಿ. ಬನವಾಸಿ
ಉತ್ತರ: ಎ. ವಾತಾಪಿ
68. ಅತ್ತಿಮಬ್ಬೆಯ ಲಕ್ಕುಂಡಿ ಶಾಸನವು ಈ ಜಿಲ್ಲೆಯದು
ಎ. ಬೆಳಗಾವಿ
ಬಿ. ಬಾಗಲಕೋಟೆ
ಸಿ. ಗದಗ
ಡಿ. ಧಾರವಾಡ
ಉತ್ತರ:
69. ವಸಾಹತು ವಿರೋಧಿ ಲಾವಣಿಗಳನ್ನು ಸಂಗ್ರಹಿಸಿದ ಬ್ರಿಟೀಷ್ ಅಧಿಕಾರಿ
ಎ. ಜೆ.ಎಫ್.ಪ್ಲೀಟ್
ಬಿ. ಕರ್ನಲ್ ಮೆಕೆಂಜೆ
ಸಿ. ಕನ್ನಿಂಗ್ ಹ್ಯಾಂ
ಡಿ. ಬಿ.ಎಲ್.ರೈಸ್
ಉತ್ತರ:
70. ಹೊಯ್ಸಳರ ವೀರ ಬಲ್ಲಾಳನಿಂದ ಚಕ್ರವರ್ತಿ ಬಿರುದು ಪಡೆದ ಕವಿ
ಎ. ರನ್ನ
ಬಿ. ಪೊನ್ನ
ಸಿ. ಜನ್ನ
ಡಿ. ಪಂಪ
ಉತ್ತರ:
71. ರಾಮನಗರದ ಸಮೀಪ ಇರುವ 'ಜಾನಪದ ಲೋಕ'ವನ್ನು ಸ್ಥಾಪಿಸಿದವರು
ಎ. ಹಾ.ಮಾ.ನಾಯಕ
ಬಿ. ಎಚ್.ಎಲ್.ನಾಗೇಗೌಡ
ಸಿ. ಹಿ.ಶೀ.ರಾಮಚಂದ್ರ ಗೌಡ
ಡಿ. ಜೀ.ಶಂ.ಪರಮಶಿವಯ್ಯ
ಉತ್ತರ: ಬಿ. ಎಚ್.ಎಲ್.ನಾಗೇಗೌಡ
72. ಇವರು ದಕ್ಷಿಣ ಕನ್ನಡ ಮುಸ್ಲಿಂ ಬದುಕನ್ನು ಸಮರ್ಥವಾಗಿ ಕಟ್ಟಿಕೊಟ್ಟವರು
ಎ. ಬಿ.ಎ.ಸನದಿ
ಬಿ. ಫಕೀರ್ ಅಹಮದ್ ಕಟ್ಟಾಡಿ
ಸಿ. ರಂಜಾನ್ ದರ್ಗಾ
ಡಿ. ನಿಸಾರ್ ಅಹಮದ್
ಉತ್ತರ:
73. ಇದು ಶಾಂತಿನಾಥ ದೇಸಾಯಿ ಅವರ ಕೃತಿ
ಎ. ಓಂ ಣಮೋ
ಬಿ. ಉರಿಯ ನಾಲಿಗೆ
ಸಿ. ಸಾಹಿತ್ಯ ಕಥನ
ಡಿ. ಸೆರಗಿನ ಕೆಂಡ
ಉತ್ತರ: ಎ. ಓಂ ಣಮೋ
74. 'ಹೊಸತು' ಮಾಸಿಕದ ಸಂಪಾದಕರು
ಎ. ನಟರಾಜ ಹುಳಿಯಾರ್
ಬಿ. ಮಹಾಬಲ ಮೂರ್ತಿ ಕೊಡ್ಲೆಕೆರೆ
ಸಿ. ಇಂದೂಧರ ಹೊನ್ನಾಪುರ
ಡಿ. ಜಿ. ರಾಮಕೃಷ್ಣ
ಉತ್ತರ:
75. 'ಕರ್ನಾಟಕದ ವೀರಗಲ್ಲುಗಳು' ಈ ಕೃತಿಯನ್ನು ಬರೆದವರು
ಎ. ಎಂ.ಎಂ.ಕಲಬುರ್ಗಿ
ಬಿ. ಆರ್.ಶೇಷಶಾಸ್ತ್ರಿ
ಸಿ. ಚಿನ್ನಕ್ಕ ಪಾವಟೆ
ಡಿ. ಎಂ.ಚಿದಾನಂದ ಮೂರ್ತಿ
ಉತ್ತರ:
76. 'ಮೌನಿ' ಇದು ಇವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ
ಎ. ಹಾ.ಮಾ.ನಾಯಕ
ಬಿ. ಚೆನ್ನವೀರ ಕಣವಿ
ಸಿ. ಯು.ಆರ್.ಅನಂತಮೂರ್ತಿ
ಡಿ. ಜಿ.ಎಸ್.ಶಿವರುದ್ರಪ್ಪ
ಉತ್ತರ:
77. 'ಹಸಿರು ಹೊನ್ನು' ಎಂಬ ಸಸ್ಯ ವಿಜ್ಞಾನಕ್ಕೆ ಸಂಬಂದಿಸಿದ ಈ ಕೃತಿಯ ಕತೃ
ಎ. ಭೂಸನೂರ ಮಠ
ಬಿ. ಎಸ್.ವಿ.ರಂಗಣ್ಣ
ಸಿ. ಬಿ.ಜಿ.ಎಲ್.ಸ್ವಾಮಿ
ಡಿ. ಎ.ಎನ್. ಮೂರ್ತಿರಾವ್
ಉತ್ತರ: ಸಿ. ಬಿ.ಜಿ.ಎಲ್.ಸ್ವಾಮಿ
78. 'ಜಯ' ಎಂಬ ಕಾದಂಬರಿಯನ್ನು ಬರೆದವರು
ಎ. ನಳಿನಾ ಮೂರ್ತಿ
ಬಿ. ಎಂ.ಎಸ್.ವೇದಾ
ಸಿ. ತಿರುಮಲಾಂಬಾ
ಡಿ. ಎಚ್.ವಿ.ಸಾವಿತ್ರಮ್ಮ
ಉತ್ತರ:
79. ಕನ್ನಡದ ಓದುಗರಿಗೆ ಮಹಿಳಾ ವಿಜ್ಞಾನಿಗಳ ಸಾಧನೆಗಳನ್ನು ನಿರಂತರ ಪರಿಚಯಿಸುತ್ತಾ ಬಂದವರು ಇವರು
ಎ. ವಿಜಯಾ ದಬ್ಬೆ
ಬಿ. ಕೆ.ಸರೋಜ
ಸಿ. ನೇಮಿಚಂದ್ರ
ಡಿ. ಬಿ.ಎಸ್.ಸುಮಿತ್ರಾಬಾಯಿ
ಉತ್ತರ:
80. 'ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ' ಎಂದು ಅಭಿಮಾನದಿಂದ ಹೇಳಿದ ಕವಿ
ಎ. ನಾಗವರ್ಮ
ಬಿ. ನಾಗಚಂದ್ರ
ಸಿ. ರನ್ನ
ಡಿ. ಪಂಪ
ಉತ್ತರ: ಡಿ. ಪಂಪ
81. 'ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್' ಎಂಬುದಾಗಿ ಕನ್ನಡನಾಡಿನ ಸೀಮೆಯನ್ನು ಸೂಚಿಸಿದ ಕೃತಿ
ಎ. ವಡ್ಡಾರಾಧನೆ
ಬಿ. ಕವಿರಾಜ ಮಾರ್ಗ
ಸಿ. ಛಂದೋಂಬುಧಿ
ಡಿ. ಆದಿಪುರಾಣ
ಉತ್ತರ: ಬಿ. ಕವಿರಾಜ ಮಾರ್ಗ
82. 'ಕನ್ನಡ ಕವಿತೆಯೋಳ್ ಅಸಗಂಗಂ ನೂರ್ಮಡಿ' ನನ್ನ ಕಾವ್ಯ ಎಂದು ಹೇಳಿದವರು
ಎ. ಪೊನ್ನ
ಬಿ. ರನ್ನ
ಸಿ. ಕುವೆಂಪು
ಡಿ. ಪಂಪ
ಉತ್ತರ:
83. 'ರೂಪಕ ಚಕ್ರವರ್ತಿ' ಎಂಬ ಬಿರುದಿಗೆ ಪಾತ್ರನಾದ ಕನ್ನಡದ ಕವಿ
ಎ. ಕುಮಾರ ವಾಲ್ಮಿಕಿ
ಬಿ. ಕುಮಾರ ವ್ಯಾಸ
ಸಿ. ಭೀಮಕವಿ
ಡಿ. ಲಕ್ಷ್ಮೀಶ
ಉತ್ತರ: ಬಿ. ಕುಮಾರ ವ್ಯಾಸ
84. ಇದು ಬ್ರಹ್ಮಶಿವನು ರಚಿಸಿದ ಕೃತಿ
ಎ. ಮದನ ತಿಲಕ
ಬಿ. ಧರ್ಮಾಮೃತ
ಸಿ. ಸುಕುಮಾರ ಚರಿತೆ
ಡಿ. ಸಮಯ ಪರೀಕ್ಷೆ
ಉತ್ತರ:
85. 'ಬಸವಣ್ಣ ಪ್ರಿಯ ಚೆನ್ನ ಸಂಗಯ್ಯ' ಎಂಬುದು ಈಕೆಯ ಅಂಕಿತ ನಾಮ
ಎ. ಅಕ್ಕಮ್ಮ
ಬಿ. ಮುಕ್ತಾಯಕ್ಕ
ಸಿ. ಗಂಗಾಂಬಿಕೆ
ಡಿ. ನಾಗಲಾಂಬಿಕೆ
ಉತ್ತರ:
86. ಇದರಲ್ಲಿ ಯಾವುದು ರಾಘವಾಂಕನ ಕೃತಿ ಅಲ್ಲ
ಎ. ವೀರೇಶ್ವರ ಚರಿತೆ
ಬಿ. ಸಿದ್ಧರಾಮ ಪುರಾಣ
ಸಿ. ಚಂದ್ರಪ್ರಭ ಪುರಾಣ
ಡಿ. ಹರಿಹರ ಮಹತ್ವ
ಉತ್ತರ:
87. ಯೋಗ ಭೋಗ ಸಮನ್ವಯ ತತ್ವವನ್ನು ಕಥಾನಾಯಕನಲ್ಲಿ ಮೇಳೈಸಿ ಕಾವ್ಯ ರಚಿಸಿದ ಜೈನ ಕವಿ
ಎ. ಪೊನ್ನ
ಬಿ. ಜನ್ನ
ಸಿ. ರತ್ನಾಕರವರ್ಣಿ
ಡಿ. ಪಂಪ
ಉತ್ತರ:
88. 'ಪೆಣ್ಣೆ ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂದು ಜನರ ಮನೋಧೋರಣೆಯನ್ನು ಪ್ರಶ್ನಿಸಿವರು
ಎ. ಅಕ್ಕಮಹಾದೇವಿ
ಬಿ. ಸಂಚಿಹೊನ್ನಮ್ಮ
ಸಿ. ಹೆಳವನಕಟ್ಟೆ ಗಿರಿಯಮ್ಮ
ಡಿ. ಕಂತಿ
ಉತ್ತರ: ಬಿ. ಸಂಚಿಹೊನ್ನಮ್ಮ
89. 'ಕರ್ನಾಟಕ ಸಂಗೀತ ಪಿತಾಮಹ' ಎಂಬ ಕೀರ್ತಿಗೆ ಪಾತ್ರರಾದವರು
ಎ. ಕನಕದಾಸರು
ಬಿ. ಜಗನ್ನಾಥ ದಾಸರು
ಸಿ. ವಿಜಯದಾಸರು
ಡಿ. ಪುರಂದರದಾಸರು
ಉತ್ತರ: ಡಿ. ಪುರಂದರದಾಸರು
90. ನಾಗವರ್ಮನ 'ಕರ್ನಾಟಕ ಕಾದಂಬರಿ' ಇದು ಈ ಪ್ರಕಾರದಲ್ಲಿದೆ
ಎ. ಚಂಪೂಕಾವ್ಯ
ಬಿ. ನಾಟಕ
ಸಿ. ಗದ್ಯ
ಡಿ. ಕಾದಂಬರಿ
ಉತ್ತರ:
91. 'ಚಂಡ ಶಾಸನ ಪ್ರಸಂಗ' ವು ಈ ಕಾವ್ಯದಲ್ಲಿದೆ
ಎ. ಪಾರ್ಶ್ವನಾಥ ಪುರಾಣ
ಬಿ. ಶಾಂತಿನಾಥ ಪುರಾಣ
ಸಿ. ಅನಂತನಾಥ ಪುರಾಣ
ಡಿ. ಅಜಿತನಾಥ ಪುರಾಣ
ಉತ್ತರ:
92. ವರ್ಗಸಂಗರ್ಷವನ್ನು ಸಾಂಕೇತಿಕವಾಗಿ ಚರ್ಚಿಸಿದ ಕೃತಿ
ಎ. ರಾಮಧಾನ್ಯ ಚರಿತೆ
ಬಿ. ರಾಮಧ್ಯಾನ ಚರಿತೆ
ಸಿ. ಭುವನೈಕ ರಾಮಾಭ್ಯುದಯ
ಡಿ. ರಾಮನಾಥ ಚರಿತೆ
ಉತ್ತರ:
93. 'ನಾಗರ ಹಾವೇ ಹಾವೊಳು ಹೂವೆ' ಪದ್ಯವನ್ನು ರಚಿಸಿದವರು ಇವರು
ಎ. ಪಂಜೆ ಮಂಗೇಶರಾಯರು
ಬಿ. ಉಳ್ಳಾಲ ಮಂಗೇಶರಾಯರು
ಸಿ. ಟಿ.ಎಸ್.ವೆಂಕಣ್ಣಯ್ಯ
ಡಿ. ಶಾಂತಕವಿ
ಉತ್ತರ: ಎ. ಪಂಜೆ ಮಂಗೇಶರಾಯರು
94. 'ಮಿತ್ರಾವಿಂದ ಗೋವಿಂದ' - ಇದೊಂದು
ಎ. ಪ್ರಬಂಧ
ಬಿ. ಕಾದಂಬರಿ
ಸಿ. ನಾಟಕ
ಡಿ. ಕಾವ್ಯ
ಉತ್ತರ:
95. 'ನೆನಪಿನ ದೋಣಿಯಲಿ' ಇದು ಇವರ ಆತ್ಮಚರಿತ್ರೆ
ಎ. ದ.ರಾ.ಬೇಂದ್ರೆ
ಬಿ. ಶಿವರಾಮ ಕಾರಂತ
ಸಿ. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಡಿ. ಕುವೆಂಪು
ಉತ್ತರ: ಡಿ. ಕುವೆಂಪು
96. ದ.ರಾ.ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕೃತಿ
ಎ. ಅರಳು ಮರಳು
ಬಿ. ಉಯ್ಯಾಲೆ
ಸಿ. ನಾಕುತಂತಿ
ಡಿ. ಸಖೀಗೀತ
ಉತ್ತರ: ಸಿ. ನಾಕುತಂತಿ
97. 'ಬೀchi' ಇವರ ನಿಜನಾಮ
ಎ. ರಾಯಸಂ ಭಿಮಸೇನ ರಾವ್
ಬಿ. ಅಜ್ಜಂಪುರ ಸೀತಾರಾಮ
ಸಿ. ಆನಂದ ಕಂದ
ಡಿ. ಚೆನ್ನಮಲ್ಲಪ್ಪ ಗಲಗಲಿ
ಉತ್ತರ: ಎ. ರಾಯಸಂ ಭೀಮಸೇನ ರಾವ್
98. 'ಫಣಿಯಮ್ಮ' ಕಾದಂಬರಿಯನ್ನು ಬರೆದವರು
ಎ. ಕೆ.ಸರೋಜಾರಾವ್
ಬಿ. ಕೊಡಗಿನ ಗೌರಮ್ಮ
ಸಿ. ಎಂ.ಕೆ. ಇಂದಿರಾ
ಡಿ. ತ್ರಿವೇಣಿ
ಉತ್ತರ: ಸಿ. ಎಂ.ಕೆ. ಇಂದಿರಾ
99. 'ಮಕ್ಕಳ ಸಾಹಿತ್ಯದ ಪಿತಾಮಹ' ಎನಿಸಿಕೊಂಡವರು
ಎ. ಆನಂದ
ಬಿ. ಪಂಜೆ ಮಂಗೇಶರಾಯರು
ಸಿ. ಹಟ್ಟಿಯಂಗಡಿ ನಾರಾಯಣ ರಾಯರು
ಡಿ. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಉತ್ತರ:
100. ಚಿತ್ರದುರ್ಗದ ಕುರಿತು ಐತಿಹಾಸಿಕ ಕಾದಂಬರಿಯನ್ನು ರಚಿಸಿದವರು
ಎ. ಕೆ.ವಿ.ಅಯ್ಯರ್
ಬಿ. ಡಿ.ವಿ.ಜಿ
ಸಿ. ಕಡೆಂಗೋಡ್ಲು ಶಂಕರಭಟ್ಟ
ಡಿ. ತ.ರಾ.ಸು
ಉತ್ತರ: ಡಿ. ತ.ರಾ.ಸು
http://issuu.com/ritershivaram/docs/computerkalikekaipidi?mode=embed&layout=http%3A%2F%2Fskin.issuu.com%2Fv%2Flight%2Flayout.xml&showFlipBtn=true

ಆರ್ಕುಟ್, ಫೆಸ್‌ಬುಕ್ ಇತರೆ ಸಾಮಾಜಿಕ ಅಂತರ್ಜಾಲಗಳ ಬಗ್ಗೆ ಎಚ್ಚರವಿರಲಿ .....

ಇತ್ತೀಚಿನ ದಿನಗಳಲ್ಲಿ ಆರ್ಕುಟ್, ಫೆಸ್-ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಲೇ ಇದೆ, ದಿನದಿಂದ ದಿನಕ್ಕೆ ವಿವಿಧ ದೇಶದ ಜನರು ಇಂಥ ಜಾಲತಾಣಗಳಿಗೆ ಸದಸ್ಯರಾಗುತ್ತಿದ್ದಾರೆ. ನೀವೂ ಇಂಥ ಜಾಲತಾಣಗಳ ಸದಸ್ಯರಾಗಿದ್ದರೆ ಅಥವಾ ಸದಸ್ಯರಾಗಲು ಹೊರಟಿದ್ದರೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ-

೧] ನಿಮ್ಮ ಅತೀ ಸೂಕ್ಷ್ಮ ವಿಷಯಗಳನ್ನು ಅಲ್ಲಿ ನಮೂದಿಸಬೇಡಿ ಏಕೆಂದರೆ ಕೆಲವರು ಅಂಥ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ನಿಮಗೆ ತೊಂದರೆ ಕೊಡುವ ಅವಕಾಶಗಳಿರುತ್ತವೆ.
೨] ನಿಮ್ಮ ಸ್ಥಿರ ದೂರವಾಣಿ ಅಥವಾ ಸಂಚಾರಿ ದೂರವಾಣಿ (ಮೊಬೈಲ್) ಸಂಖ್ಯೆಗಳನ್ನು ನಮೂದಿಸಬೇಡಿ, ಇದನ್ನು ಸ್ಪಾಮರ್ ಗಳು ಬಳಸಿಕೊಂಡು ನಿಮಗೆ ಪಠ್ಯ ಸಂದೇಶ ಅಥವಾ ಕರೆ ಮಾಡಿ ನಿಮಗೆ ತೊಂದರೆಯನ್ನು ಕೊಡಬಹುದು.
೩] ನಿಮಗೆ "ಸ್ನೇಹ ವಿನಂತಿ" (ಫ್ರೆಂಡ್ ರಿಕ್ವೆಸ್ಟ್) ಕಳುಹಿಸಿದ ಎಲ್ಲ ಸದಸ್ಯರನ್ನು ಸ್ನೇಹಿತರನ್ನಾಗಿ ಸ್ವೀಕರಿಸಬೇಡಿ ಏಕೆಂದರೆ ಇನ್ನೊಬ್ಬರ ಹೆಸರಿನಲ್ಲಿ ಖಾತೆ ತೆಗೆದು ನಿಮ್ಮ ಸ್ನೇಹಿತರಾಗಿ ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ನಿಮಗೆ ಮೋಸ ಮಾಡಬಹುದು ಆದ್ದರಿಂದ ಮೊದಲು ಅವರು ಯಾರೆಂದು ಪರಿಶೀಲಿಸಿದ ನಂತರವೇ ಅವರ ಸ್ನೇಹ ವಿನಂತಿಯನ್ನು ಸ್ವೀಕರಿಸಿ.
೪] ನಿಮ್ಮ ಸಾಮಾಜಿಕ ಜಾಲತಾಣ ಇನ್-ಬಾಕ್ಸಗೆ ಯಾವುದಾದರು ಗೊತ್ತಿರದ ಮಿಂಚಂಚೆ (ಇ-ಮೇಲ್) ಬಂದಲ್ಲಿ ಮೊದಲು ಅದನ್ನು ಒಳ್ಳೆಯ ಎಂಟಿ-ವೈರಸದಿಂದ ಪರಿಶೀಲಿಸಿ, ಯಾವುದೇ ವೈರಸ್ ಇಲ್ಲವೆಂದು ಖಚಿತ ಪಡಿಸಿಕೊಂಡ ನಂತರವೇ ಅದನ್ನು ತೆಗೆಯಿರಿ.
೫] ನೀವು ಸೈಬರ್ ಕೆಫೆಗಳಲ್ಲಿ ಸಾಮಾಜಿಕ ಜಾಲತಾಣವನ್ನು ನೋಡುತ್ತಿದ್ದರೆ ನಿಮ್ಮ ಕಾರ್ಯ ಮುಗಿದ ನಂತರ "ಸೈನ-ಔಟ್" ಮಾಡಲು ಮರೆಯದಿರಿ ಮತ್ತು "ಟೂಲ್ಸ್" ಮೆನುವಿಗೆ ಹೋಗಿ "ಡಿಲಿಟ್ ಬ್ರೌಸಿಂಗ್ ಹಿಸ್ಟರಿ" ಆಯ್ಕೆಯನ್ನು ಅದುಮಿ ಬ್ರೌಸಿಂಗ ಇತಿಹಾಸವನ್ನು ಅಳಿಸಿ ಹಾಕಿ. ಇದು ನಿಮ್ಮ ಗುಪ್ತತೆಯನ್ನು (ಪ್ರೈವಸಿ) ಕಾಪಾಡಿಕೊಳ್ಳುವ ಅತ್ಯಂತ ಸುಲಭ ವಿಧಾನವಾಗಿದೆ

ಕಂಪ್ಯು ಇನ್ ಕನ್ನಡ ಜಾಲತಾಣ


ಕಂಪ್ಯು ಇನ್ ಕನ್ನಡ ಗಣಕ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಿರಿ!