ಕೋತಿರಾಮ
2 comments Posted by Lakshmi S at 9:00 AM ಈ ಬಾರಿ ಒಬ್ಬ ವಿಶೇಷ ವ್ಯಕ್ತಿಯನ್ನು ಪರಿಚಯ ಮಾಡಿಕೊಡುವ ಭಾಗ್ಯ ಚಿತ್ರವಿಚಿತ್ರ ತಂಡಕ್ಕೆ ಪಾಲಚಂದ್ರ ರವರ ದೆಸೆಯಿಂದ ಲಭಿಸಿದೆ. ಅವರೇ ಈ ವ್ಯಕ್ತಿಯ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದು. ವಿವರಗಳನ್ನು ಕೂಡಾ ಅವರೇ ಕಳಿಸಿದ್ದು.ಅವರು ನೀಡಿರುವ ವಿವರ ಇಂತಿದೆ:
" "ಕೋತಿ ರಾಮ" ಎಂದೇ ಖ್ಯಾತರಾದ ತಮಿಳುನಾಡಿನ ಮೂಲದವರಾದ ಜ್ಯೋತಿರಾಜ್, ದುರ್ಗದ ಕೋಟೆಯ ಗೋಡೆಯನ್ನು ಉಡದಂತೆ ಯಾವುದರ ಸಹಾಯವೂ ಇಲ್ಲದೇ ಲೀಲಾಜಾಲವಾಗಿ ಏರ ಬಲ್ಲರು. ಬರೀ ಏರುವುದಷ್ಟೇ ಅಲ್ಲದೆ ಗೋಡೆ ಹತ್ತುತ್ತಾ ಲಾಗ ಕೂಡ ಹಾಕಬಲ್ಲರು. ರಾಕ್ ಕ್ಲೈಂಬಿಂಗಿನಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನ ಎಂದು ಅವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ."







" "ಕೋತಿ ರಾಮ" ಎಂದೇ ಖ್ಯಾತರಾದ ತಮಿಳುನಾಡಿನ ಮೂಲದವರಾದ ಜ್ಯೋತಿರಾಜ್, ದುರ್ಗದ ಕೋಟೆಯ ಗೋಡೆಯನ್ನು ಉಡದಂತೆ ಯಾವುದರ ಸಹಾಯವೂ ಇಲ್ಲದೇ ಲೀಲಾಜಾಲವಾಗಿ ಏರ ಬಲ್ಲರು. ಬರೀ ಏರುವುದಷ್ಟೇ ಅಲ್ಲದೆ ಗೋಡೆ ಹತ್ತುತ್ತಾ ಲಾಗ ಕೂಡ ಹಾಕಬಲ್ಲರು. ರಾಕ್ ಕ್ಲೈಂಬಿಂಗಿನಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನ ಎಂದು ಅವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ."







Tuesday, November 24, 2009
ನಾವು ಪ್ರಾಣಿ ಚೇಷ್ಟೆ ಸೀರೀಸ್ ಮುಗಿಸಿದ ದಿನ ಸನ್ಮಾನ್ಯ ಮೌನಗಾಳದ ಸುಶ್ರುತ ರವರು ನಮಗೆ ಕಳಿಸಿಕೊಟ್ಟ ಚಿತ್ರಗಳಿವು. ನಾವು ಸೀರೀಸ್ ನಡೆಸುವಾಗ ಕೆಲವು ಕಮೆಂಟುಗಳಲ್ಲಿ ಪ್ರಾಣಿಗಳ ಪ್ಲಾಸ್ಟಿಕ್ ಸೇವನೆ ಬಗ್ಗೆ ವಿಷಾದ, ಅಸಮಾಧಾನಗಳು ವ್ಯಕ್ತವಾಗಿದ್ದವು. ಅದನ್ನು ನಾವೂ ಅನುಮೋದಿಸುತ್ತೇವೆ. ನಂದಿಬೆಟ್ಟದಲ್ಲಿ ಕೋತಿಗಳ ಕಾಟವು ಹೆಚ್ಚೆಂದು ಕೇಳ್ಪಟ್ಟವರು ಈಗ ಅದನ್ನು ಈ ಚಿತ್ರಗಳಲ್ಲಿ ನೋಡಬಹುದು. ಕೋತಿಗಳು ಹೀಗೆ ಉಗ್ರನರಸಿಂಹಗಳಾಗಲು ಕಾರಣವೇನೆಂದು ನಮ್ಮ ಸಹಬ್ಲಾಗಿಗರಾದ ಪರಿಸರಪ್ರೇಮಿ ಅರುಣ್ ಅವರು ಈ ಲೇಖನದಲ್ಲಿ ವಿವರಿಸುತ್ತಾರೆ. ನಾವೇ ಪ್ರಾಣಿಗಳಿಗೆ ಆಹಾರ ತಿನ್ನಿಸಿ ಅಭ್ಯಾಸ ಮಾಡಿದುದರ ಪರಮಾವಧಿ ಇದೇನೋ ! ಈ ಚಿತ್ರವು ವಿಶೇಷ, ವಿಚಿತ್ರ, ಇವ್ಯಾವ ಹಣೆಪಟ್ಟಿಗೂ ಒಳಪಡದೇ, ನೇರವಾಗಿ ವಿಷಾದದ ಕೆಟೆಗರಿಗೆ ಸೇರತ್ತೆ.






Tuesday, November 17, 2009

:)
ಫೋಟೋ ಕೃಪೆ : ಕಾರ್ತಿಕ್. ಸಿ. ಸುನಿಲ್
ಇದರೊಂದಿಗೆ, ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು ಸರಣಿಯನ್ನು ಮುಗಿಸುತ್ತಿದ್ದೇವೆ.
Tuesday, November 10, 2009

ಇದನ್ನ ನೋಡಿದರೆ ನನಗೆ ನೆನಪಾಗೋ ಹಾಡು - ಕೊಯಿ ಹಂ ದಂ ನ ರಹಾ...ಕೊಯಿ ಸಹಾರಾ ನಾ ರಹಾ...
ಫೋಟೋ- ಕಾರ್ತಿಕ್ ಸಿ ಸುನಿಲ್
ಫಲಕೋತ್ಸವ ಸೀಸನ್ ೩-೮
2 comments Posted by Lakshmi S at 9:00 AM ಈ ಬಾರಿ ವಿಶೇಷ ಫಲಕಗಳ ಕಡೆಗೆ ಗಮನ ಹರಿಸಿದ್ದೇವೆ. ದಾರಿಯಲ್ಲಿ ಮರದ ಮೇಲೆ ಅಂಟಿಸಿರುತ್ತಾರಲ್ಲಾ, ಅಂಥವೌ. ಇದರ ಪ್ರತಿಯೊಂದು ಪದವನ್ನು ಆಸ್ವಾದಿಸಿಕೊಂಡು ಓದಬೇಕು. ಪಾರ್ಟ್ ಟೈಂ ಮತ್ತು ಫುಲ್ ಟೈಂ ಕೆಲಸಗಾರರು ಬೇಕಾಗಿದ್ದಾರೆ ಅನ್ನೋದನ್ನ ಹೇಗೆ ಬರೆದಿದ್ದಾರೆ ನೀವೇ ಓದಿ ಆನಂದಿಸಿ.


Tuesday, March 2, 2010

ಈ ಫಲಕ ದಾರಿ ತೋರಿಸುತ್ತಿರುವುದು ಸ್ನಾನದ ಗೃಹಕ್ಕೋ ಅಥವಾ ಆಪರೇಷನ್ ಥಿಯೇಟರ್ ಗೋ ಅಂತ ಸ್ವಲ್ಪ ಡೌಟಿದೆ ನನಗೆ. ಯಾರಿಗಾದರೂ ಉತ್ತರ ಗೊತ್ತಾ ?
Tuesday, February 23, 2010

ಏಕವಚನ ಬಹುವಚನಗಳ ಬಗ್ಗೆ ಸಿಕ್ಕಾಪಟ್ಟೆ ಡೌಟು ಇದ್ದ ಹಾಗಿದೆ ಮನುಷ್ಯನಿಗೆ. ರಿಸ್ಕೇ ಬೇಡ ಅಂತ ಎರಡನ್ನೂ ಫಲಕದಲ್ಲಿ ಹಾಕಿಬಿಟ್ಟಿದ್ದಾನೆ. ನೀವು confuse ಆದರೆ ಅದು ನನ್ನ ತಪ್ಪಲ್ಲ :)
ಫೋಟೋ: ಲಕ್ಷ್ಮೀ
Tuesday, February 16, 2010
ಇಷ್ಟು ದಿನ ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನಕಾರ್ಯಗಳನ್ನು ನೋಡಿ "ಥತ್" ಎಂದು ಬೈಯ್ಯುತ್ತಿದ್ದೆವು, ಈಗ ಆ ಮಹಾನ್ ಪುಣ್ಯಕಾರ್ಯವನ್ನ ಪಾಲಿಕೆಯೇ ಮಾಡಿಕೊಂಡಿದೆ. ನೋಡಿಬಿಡಿ.ಫೋಟೋ: ಲಕ್ಷ್ಮೀ
Tuesday, February 9, 2010
ತಮ್ಮನ್ನು ತಾವು ಸೋಂಬೇರಿ ಎಂದು ನಮ್ಮಂತೆಯೇ ರಾಜಾರೋಷವಾಗಿ ಹೇಳಿಕೊಳ್ಳುವ ಸಹಬ್ಲಾಗಿಗ ಶ್ರೀನಿಧಿ ಡಿ.ಎಸ್ ಅವರು ನಮಗಾಗಿ ಈ ಫೋಟೋ ಕಳಿಸಿಕೊಟ್ಟಿದ್ದಾರೆ. ಫೋಟೋವನ್ನು ಸಾಂಗವಾಗಿ ನೋಡಿ, ಅದರಲ್ಲಿರುವುದನ್ನ ಜಾಗರೂಕರಾಗಿ ಓದಿ. ಆಗ ನಿಮಗೆ ಅರ್ಥ ಆಗತ್ತೆ ಈ ಫಲಕ ಏನು ಹೇಳಕ್ಕೆ ಹೊರಟಿದೆ ಅಂತ.


Tuesday, February 2, 2010
ಈ ಚಿತ್ರದಲ್ಲಿ ಜಹಂಗೀರು ಜಲೇಬಿಗಳನ್ನು ಸೇರಿಸಿ ಕನ್ನಡ ಭಾಷೆಯ ಲಿಪಿಯನ್ನು ಬರೆಯಲಾಗಿದೆ. ಪ್ರತಿಯೊಂದು ಅಕ್ಷರವೂ ದೇವರಿಗೇ ಪ್ರೀತಿ. ನೋಡಿ, ನಿಮಗೆ ಜಹಂಗೀರು ಜಾಸ್ತಿ ಕಂಡಿತೋ ಜಲೇಬಿ ಜಾಸ್ತಿ ಕಂಡಿತೋ ಹೇಳಿ. :)

ಫೋಟೋ ಕೃಪೆ- ಶಿವಪ್ರಕಾಶ್ ಎಚ್.ಎಮ್.
ಫೋಟೋ ಕೃಪೆ- ಶಿವಪ್ರಕಾಶ್ ಎಚ್.ಎಮ್.
Tuesday, January 26, 2010
ಇದು ಜನವರಿ ತಿಂಗಳಾಗಿರುವುದರಿಂದ ಈ ಪೋಸ್ಟನ್ನು ಶಬರಿಮಲಕ್ಕೆ ಮೀಸಲಿಡೋಣ ಅನ್ನಿಸಿತು. ಹಾಗಾಗಿ ಈ ಚಿತ್ರವನ್ನು ಶಬರಿಮಲಕ್ಕೆ ಸಮರ್ಪಣೆ ಮಾಡಲಾಗಿದೆ :)ಶಬರಿಮಲ ಕನ್ನಡದಲ್ಲಿ ಏನಾಗಿದೆ ಎನ್ನುವುದನ್ನು ನೀವೇ ಓದಿ ಆನಂದಿಸಿ :)
ಅಂದಹಾಗೆ, ಇದು ಚಿತ್ರವಿಚಿತ್ರದ ನೂರನೇ ಪೋಸ್ಟು :)
ಈ ಚಿತ್ರವನ್ನು ಕಳುಹಿಸಿಕೊಟ್ಟಿದ್ದು ಶಿವಪ್ರಕಾಶ್ ಎಚ್.ಎಮ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ