ಜೂನ್ 13, 2011

ಚಿಟ್ಟೆ

ಚಿಟ್ಟೆಯ ಬಣ್ಣಕ್ಕೆ
ಸೋತ
ಹೂವಿನ ಮುಖ
ಬಾಡಿದೆ.
~
ಚಿಟ್ಟೆಯ
ಬಣ್ಣದ ಪಟ್ಟೆಗಳು
ಕಾಮನ ಬಿಲ್ಲನ್ನು
ಅಣಕಿಸುತ್ತಿವೆ.
~
ಚಿಟ್ಟೆಯ
ಬೆನ್ನು ಹತ್ತಿದ ಹುಡುಗಿ
ರೆಕ್ಕೆ ಬಿಚ್ಚಿ
ಹಾರಿದಳು.
~
ಪುಟ್ಟ ಹುಡುಗನ
ಬಣ್ಣದ ಛತ್ರಿಯನ್ನು
ಚಿಟ್ಟೆ
ಮೋಹಿಸಿತು.
~
ಚಿಟ್ಟೆಯಿರುವಲ್ಲಿ
ಹೂವು,
ನೊಣಗಳಿರುವಲ್ಲಿ
ಗಂಜಲ.
~
ಚಿಟ್ಟೆ
ಇಟ್ಟ ಮೊಟ್ಟೆ
ಕಂಬಳಿ ಹುಳುವಾಗಿದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ