ಜೂನ್ 13, 2011

ಪ್ರೀತಿ

ನಡೆದು ಬಾ ಬಳಿಗೆ ಸುಮ್ಮನೆ ಹಾಗೆ ಮಾತೊಂದು ಆಡಬೇಡ ನಗುವೊಂದಿರಲಿ ಜೊತೆಗೆ   ಕಣ್ಣುಗಳೇ ಮಾತಾಡುವಾಗ ಬೇರೆ ಮಾತೇಕೆ ಈಗ ಮೌನದಿ ಹೃದಯದ ಭಾಷೆ ಕೇಳಲು ಎಂಥ ಸೊಗಸೆ   ಪ್ರೀತಿಯ ಮೂಟೆ ಹೊತ್ತು ಅದರಲಿ ಸಾವಿರ ಕನಸನಿತ್ತು ಜೊತೆ ಬಾರೆ ಮೆಲ್ಲಗೆ ಮೌನದ ಆಭರಣ ಇರಲಿ ತೆಳ್ಳಗೆ   ಮೌನದಿ ಬೇಡ ಮಾತಿನ ಮೋಹ ಆರದು ಎಂದು ಪ್ರೀತಿಯ ದಾಹ ನೀನಿರದ ಸನಿಹ ಭರಿಸಲಾಗದು ವಿರಹ


ಕನ್ನಡಿಗೆ
ಅವಳ ಕಣ್ಣಲ್ಲಿ
ಪ್ರತಿಬಿಂಬವಾಗುವ ಬಯಕೆ!
~
ಮೋಸಹೋಯಿತು ಕನ್ನಡಿ…
ಅವಳ ನಿಜ ರೂಪ
ತೋರಲೇ ಇಲ್ಲ!
~
ಕನ್ನಡಿಗೂ
ಎಡ-ಬಲಗಳ
ಗೊಂದಲ ಕಳೆದಿಲ್ಲ…
~
ಅವನ ಮುಖಗಳ
ಎಣಿಸಲಾರದೆ
ಕನ್ನಡಿ
ನೂರು ಚೂರಯಿತು…

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ