ಜೂನ್ 26, 2011

ನನ್ನೊಳಗಿನ ನೀನು

ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾರಿದ ಆಲಿಕಲ್ಲು ನೀನು;
ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು,
ಏನೆಂದು ಬಣ್ಣಿಸಲಿ ನಾನು.
ಚುಮು ಚುಮು ಮುಂಜಾವಿನಲಿ, ನಗುತಿದ್ದ ಹಸಿರ ಮೈಮೇಲೆ,
ನಲಿಯುತಿದ್ದ ಬಿಂದುವಿನೊಳಗೆ ನಿನ್ನ ಬಿಂಬ;
ಚಳಿಗೆ ಮುದುಡಿದ ಕೈಯೊಳಿದ್ದ, ಚಹದ ಬಟ್ಟಲಿನಿಂದ ಎದ್ದ
ಹಬೆಯೊಳಗೂ ಮೂಡಿತ್ತು, ನಿನ್ನದೇ ಬಿಂಬ.
ಮೌನ ಹಾದಿಯಲಿ ಒಂಟಿ ಪಯಣಿಗ ನಾನು, ಜೊತೆಯಿರಲು
ನಿನ ಮಾತು, ನನಗಷ್ಟೇ ಸಾಕು;
ದುಃಖದಿ ಮುಳುಗುವ ನನ್ನ ಹೃದಯಕೆ, ಅಮೃತ ಸಿಂಚನ
ನಿನ್ನೀ ನಗುವಿನ ಪಲುಕು.
ಎಂದಿಗೂ ಬತ್ತದ ಪ್ರೇಮದ ಒರತೆಯ ನೀ ಹೊತ್ತು,
ನನ್ನ ಕನಸನು ಸೇರಿಕೋ;
ಭಾವಕೊಳವನು ಕದಡಿದ ಓ ನನ್ನ ಪ್ರೇಮವೇ
ಈ ಪ್ರೇಮವನು ಒಪ್ಪಿಸಿಕೋ.


ಪ್ರೀತಿ ನಗೋಕ್ ಬಿಡಲ್ಲ....

      ಸ್ನೇಹ ಅಳೋಕ್ ಬಿಡಲ್ಲ.


ಪ್ರೀತಿ ಇದ್ರೆ ಊಟ ಮಾಡೋಕ್ ಆಗಲ್ಲ....


 ಸ್ನೇಹ ಇದ್ರೆ ಊಟ ಬಿಡೋಕ್ ಆಗಲ್ಲ.


              ಪ್ರೀತಿ ತಂದೆ ತಾಯಿನ ದೂರ ಮಾಡತ್ತೆ..


                        ಸ್ನೇಹ ತಾನೆ ತಂದೆ ತಾಯಿ ಆಗುತ್ತೆ.


                                  ಪ್ರೀತಿ ಎರಡು ಮನಸ್ಸನ್ನ ದೂರ ಮಾಡತ್ತೆ.....


                                         ಸ್ನೇಹ  ಎರಡು ಮನಸ್ಸನ್ನ  ಒಂದು ಮಾಡತ್ತೆ.


          ಒಟ್ನಲ್ಲಿ ಈ ಹಾಳಾದ ಪ್ರೀತಿ ಬದುಕೋಕ್ ಬಿಡಲ್ಲ


                ಸ್ನೇಹ ಸಾಯೋಕ್ ಬಿಡಲ್ಲ.


 ಹೇಳಿ ಸ್ನೇಹನ?


               ಪ್ರೀತಿನ?........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ